Beauty Tips: ನೀವು ತಮನ್ನಾ ರೀತಿ ಪಳ ಪಳ ಹೊಳೆಯಬೇಕು ಎಂದರೇ, ರಾತ್ರಿ ಮಲಗುವ ಮುನ್ನ ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ಏನು ಗೊತ್ತೇ??
Beauty Tips: ಹೆಣ್ಣುಮಕ್ಕಳಿಗೆ ತ್ವಚೆಯನ್ನು ಆರೋಗ್ಯವಾಗಿ, ಸುಂದರವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಬೆಳಗಿನ ಸಮಯದಲ್ಲಿ ನೀವು ತ್ವಚೆಯನ್ನು ಹೇಗೆ ಕೇರ್ ಮಾಡುತ್ತೀರೋ, ಅದೇ ರೀತಿ ರೀತಿಯ ರಾತ್ರಿ ಸಮಯದಲ್ಲಿ ಸಹ ಕೇರ್ ಮಾಡಬೇಕು. ಮಲಾಗುವಾಗ ಇಡಿ ದೇಹ ರೆಸ್ಟ್ ಮೋಡ್ ಗೆ ಹೋಗುತ್ತದೆ. ಹಾಗೆಯೇ ಬೆಳಗ್ಗೆಯಿಂದ ಮೇಕಪ್ ಧೂಳು ಇವುಗಳನ್ನು ತ್ವಚೆ ನೋಡಿರುತ್ತದೆ. ಹಾಗಾಗಿ ನೀವು, ರಾತ್ರಿ ಮಲಗುವುದಕ್ಕಿಂತ ಮೊದಲು, ತ್ವಚೆಯನ್ನು ಚೆನ್ನಾಗಿ ತೊಳೆದು, ಒಳ್ಳೆಯ ಮಯಿಶ್ಚರೈಸರ್ ಹಚ್ಚಬೇಕು. ಹಾಗಿದ್ದರೆ ರಾತ್ರಿ ಸಮಯದಲ್ಲಿ ತ್ವಚೆಯನ್ನು ಹೇಗೆ ನೋಡಿಕೊಳ್ಳುವುದು ಎಂದು ತಿಳಿಸುತ್ತೇವೆ ನೋಡಿ..

ಸೌತೆಕಾಯಿ ರಸ ಮತ್ತು ಆಲೋವೆರಾ ಜೆಲ್ :- ನಿಮ್ಮ ಸ್ಕಿನ್ ಹೈಡ್ರೇಟೆಡ್ ಆಗಿರದೆ ಹಾಗೆಯೇ ಸೆನ್ಸಿಟಿವ್ ಆಗಿದ್ದರೆ, ಈ ಎರಡು ಪದಾರ್ಥಗಳು ನಿಮಗೆ ಸಹಾಯ ಮಾಡುತ್ತದೆ, ಡ್ರೈ ಸ್ಕಿನ್ ಗೆ ಈ ಪರಿಹಾರ ಒಳ್ಳೆಯದು. ದೇಹದಲ್ಲಿ ಹೀಟ್ ಕಡಿಮೆ ಮಾಡಿ, ಸ್ಕಿನ್ ಅನ್ನು ತಂಪಾಗಿ ಇಡುತ್ತದೆ..ಹಾಗೆಯೇ ನಿಮ್ಮ ತ್ವಚೆಯ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ..
ಕೋಕೋನಟ್ ಆಯ್ಲ್ :-ಇದು ಸ್ಕಿನ್ ಗೆ ಬಹಳ ಒಳ್ಳೆಯ ಮಾಯಿಶ್ಚರೈಸರ್. ಚರ್ಮವನ್ನು ಹೈಡ್ರೇಟೆಡ್ ಆಗಿ ಇಡುವುದು ಮಾತ್ರವಲ್ಲ, ಸ್ಕಿನ್ ಅನ್ನು ಕ್ಲೀನ್ ಮಾಡುತ್ತದೆ..ಒಂದು ವೇಳೆ ಸ್ಕಿನ್ ಕೇರ್ ತೆಗೆದುಕೊಳ್ಳಲು ಸಾಧ್ಯವಾಗದೆ ಹೋದರೆ, ಮುಖಕ್ಕೆ ಕೋಕೋನಟ್ ಆಯ್ಲ್ ಹಚ್ಚಿ ಮಲಗುವುದು ಒಳ್ಳೆಯದು. ಇದರಿಂದ ಸ್ಕಿನ್ ನಲ್ಲಿ ಹೊಳಪು ಮೂಡುತ್ತದೆ.
ಹಾಲು ಮತ್ತು ಅರಿಶಿನ :- ಮುಖ ಟ್ಯಾನ್ ಆಗಿದ್ದರೆ ಹಾಲು ಮತ್ತು ಅರಿಶಿನದ ಪೇಸ್ಟ್ ಒಳ್ಳೆಯ ಪರಿಹಾರ. ಹಾಲಿನಲ್ಲಿ ಪೌಷ್ಟಿಕಾಂಶ ಇರುತ್ತದೆ, ಅರಿಶಿನ ಆಂಟಿ ಆಕ್ಸಿಡೆಂಟ್, ಇದು ಉರಿಯೂತ ಹಾಗೂ ನಂಜು ನಿರೋಧಕ ಸ್ವಭಾವ ಹೊಂದಿದೆ. ಈ ಎರಡು ಚರ್ಮವನ್ನು ಗುಣಪಡಿಸುತ್ತದೆ. ತ್ವಚೆಯಲ್ಲಿ ಹೊಳಪು ಮೂಡುತ್ತದೆ.
ಗ್ಲಿಸರಿನ್ :- ಇದು ಕೂಡ ಡ್ರೈ ಸ್ಕಿನ್ ಗೆ ಒಳ್ಳೆಯದು. ಸ್ಕಿನ್ ಮೃದುವಾಗಿರಬೇಕು ಎಂದರೆ ಗ್ಲಿಸಿರಿನ್ ಅನ್ನು ಬಳಸಿ. ಇದರಲ್ಲಿ ಜಿಡ್ಡು ಇರುತ್ತದೆ, ಇದು ಡ್ರೈ ಸ್ಕಿನ್ ಹೈಡ್ರೇಟ್ ಮಾಡುತ್ತದೆ.. ಪಿಂಪಲ್ ಕಲೆಗಳನ್ನು ಹೋಗಿಸುತ್ತದೆ. ಮಲಗುವುದಕ್ಕಿಂತ ಮೊದಲು ತ್ವಸ್ಹೇಗೆ ಗ್ಲಿಸಿರಿನ್ ಹಚ್ಚಿ 20 ನಿಮಿಷ ಒಣಗಲು ಬಿಟ್ಟು ನಿದ್ದೆ ಮಾಡಿ.
ವಿಟಮಿನ್ ಇ ಕ್ಯಾಪ್ಸುಲ್ :- ಇದು ತ್ವಚೆಗೆ ತುಂಬಾ ಆರೋಗ್ಯಕರವಾದದ್ದು. ಕೂದಲು ಚೆನ್ನಾಗಿರಬೇಕು ಎಂದರೆ ವಿಟಮಿನ್ ಇ ಇರಬೇಕು ಎನ್ನುತ್ತಾರೆ. ಒಂದು ವೇಳೆ ತ್ವಚೆಯ ಆರೈಕೆ ಮಾಡಲು ಸಮಯ ಇಲ್ಲವಾದಲ್ಲಿ, ವಿಟಮಿನ್ ಇ ಕ್ಯಾಪ್ಸುಲ್ ಸೇವಿಸಿ. ವಿಟಮಿನ್ ಇ ಕ್ಯಾಪ್ಸುಲ್ ಜೆಲ್ ಅನ್ನು ಮುಖಕ್ಕೆ ಹಚ್ಚಿದ ನಂತರ ನಿದ್ದೆ ಮಾಡಿ. ಆಯ್ಲಿ ಹಾಗೂ ಸೆನ್ಸಿಟಿವ್ ಸ್ಕಿನ್ ಇರುವವರು ಇದನ್ನು ಬಳಸಬಾರದು, ಏಕೆಂದರೆ ಇದದಿಂದ ಪಿಂಪಲ್ ಬರಬಹುಹುದು.
Comments are closed.