Kannada Actress: ಕಿರುತೆರೆಗೆ ಮತ್ತೆ ವಾಪಸ್ಸು ಬಂದ ಸುಂದರಿ; ಇಷ್ಟು ದಿವಸ ಕಾಯುತ್ತಿದ್ದ ಜನತೆಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ. ಒಳ್ಳೆಯದಾಗಲಿ ಎಂದ ಫ್ಯಾನ್ಸ್. ಯಾರು ಗೊತ್ತೇ??
Kannada Actress: ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ನಟಿ ಐಶ್ವರ್ಯ ಸಿಂಧೋಗಿ ಅವರು ಇದೀಗ ಕಿರುತೆರೆ ಲೋಕಕ್ಕೆ ರೀಎಂಟ್ರಿ ಕೊಟ್ಟಿದ್ದಾರೆ. ಐಶ್ವರ್ಯ ಸಿಂಧೋಗಿ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿದ್ದಾರೆ. 9 ವರ್ಷದವರಿದ್ದಾಗ ಸಿಂಹಾದ್ರಿ ಸಿನಿಮಾ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಓದಿನ ಕಡೆಗೆ ಹೆಚ್ಚು ಗಮನ ವಹಿಸಿ, ಹೋಟೆಲ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ನಂತರ ಮತ್ತೆ ನಟನೆಯ ಲೋಕಕ್ಕೆ ಬಂದ ಐಶ್ವರ್ಯ ಅವರು, ಸಂಯುಕ್ತ2, ಜಾಕ್ಸನ್, ಸಪ್ನೋ ಕಿ ರಾಣಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಕಿರುತೆರೆಯಲ್ಲಿ ಸಹ ಜರ್ನಿ ಮುಂದುವರೆಸಿದರು, ನಾಗಿಣಿ2 ಧಾರವಾಹಿಯ ಮಾಯಾಂಗನೆ ಪಾತ್ರ. ಹಾಗೆಯೇ, ಮಂಗಳಗೌರಿ ಮದುವೆ ಧಾರವಾಹಿಯಲ್ಲಿ ಸಹ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು ಐಶ್ವರ್ಯ. ನಂತರ ಧಾರವಾಹಿ ಇಂದ ಬ್ರೇಕ್ ಪಡೆದು, ಜೀಕನ್ನಡ ವಾಹಿನಿಯ ಸೂಪರ್ ಕ್ವೀನ್ ಶೋನಲ್ಲಿ ಸ್ಪರ್ಧಿಸಿದ್ದರು.
ನಟನೆಯ ಜೊತೆಗೆ ತಮ್ಮದೇ ಆದ ಉದ್ಯಮವನ್ನು ಹೊಂದಿರುವ ಐಶ್ವರ್ಯ ಸಿಂಧೋಗಿ ಅವರು ಈಗ ಕಿರುತೆರೆ ಲೋಕಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ನಮ್ಮ ಲಚ್ಚಿ ಧಾರವಾಹಿಯಿಂದ ರಿಯಾ ತಾಯಿ ಪಾತ್ರದಿಂದ ನಟಿ ಸಾರಾ ಅಣ್ಣಯ್ಯ ಹೊರಬಂದಿದ್ದಾರೆ. ಇದಕ್ಕೆ ಕಾರಣ ಏನು ಎಂದು ಇನ್ನು ತಿಳಿದುಬಂದಿಲ್ಲ. ಈ ಪಾತ್ರಕ್ಕೆ ಈಗ ಐಶ್ವರ್ಯ ಸಿಂಧೋಗಿ ಅವರು ಆಯ್ಕೆಯಾಗಿದ್ದಾರೆ.
ಇನ್ನುಮುಂದೆ ದೀಪಿಕಾ ಪಾತ್ರವನ್ನು ಐಶ್ವರ್ಯ ಸಿಂಧೋಗಿ ಅವರು ಮುಂದುವರೆಸಿಕೊಂಡು ಹೋಗಲಿದ್ದು, ಕೆಲವೇ ದಿನಗಳಲ್ಲಿ ಇವರು ನಟಿಸಿರುವ ಎಪಿಸೋಡ್ ಗಳ ಪ್ರಸಾರ ಶುರುವಾಗಲಿದೆ. ಐಶ್ವರ್ಯ ಸಿಂಧೋಗಿ ಅವರಿಗೆ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದು, ಅವರೆಲ್ಲರೂ ಐಶ್ವರ್ಯ ಅವರನ್ನು ಮತ್ತೆ ಧಾರವಾಹಿಯಲ್ಲಿ ನೋಡಲು ಕಾತುರರಾಗಿದ್ದಾರೆ.
Comments are closed.