Sudharani: ರಾಜ್ಯವೇ ಮೆಚ್ಚಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮಾಧವ – ತುಳಸಿ ಜೀವನದಲ್ಲಿ ಬದಲಾವಣೆ. ಏನಾಗಲಿದೆ ಗೊತ್ತೇ??
Sudharani: ಜೀಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಧಾರವಾಹಿ ಶ್ರೀರಸ್ತು ಶುಭಮಸ್ತು. ಅಪ್ಪಟ ಫ್ಯಾಮಿಲಿ ಸ್ಟೋರಿ, ವಿಭಿನ್ನವಾದ ಕಥೆಯಿಂದ ಈ ಧಾರವಾಹಿ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ದತ್ತ ಅವರ ಪಾತ್ರ ಎಲ್ಲರ ಅಚ್ಚುಮೆಚ್ಚಿನ ಪಾತ್ರ ಎಂದರೆ ತಪ್ಪಾಗುವುದಿಲ್ಲ. ವೆಂಕಟ್ ರಾವ್ ಅವರು ನಟಿಸುತ್ತಿರುವ ಈ ಪಾತ್ರವನ್ನು ಜನರು ತುಂಬಾ ಎಂಜಾಯ್ ಮಾಡೋದಕ್ಕೆ ಶುರು ಮಾಡಿದ್ದಾರೆ. ಈ ಧಾರವಾಹಿಯಲ್ಲಿ ಮುಖ್ಯ ಪಾತ್ರಗಳು ಮಾಧವ್ ತುಳಸಿ.

ತುಳಸಿ ಪಾತ್ರದಲ್ಲಿ ಕನ್ನಡದ ಖ್ಯಾತ ಹಿರಿಯನಟಿ ಸುಧಾರಾಣಿ ಅವರು ನಟಿಸುತ್ತಿದ್ದು, ಮಾಧವ್ ಪಾತ್ರದ ಮೂಲಕ ನಟ ಅಜಿತ್ ಹಂದೆ ಅವರು ಹಲವು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಸೆಲೆಬ್ರಿಟಿ ಶೆಫ್ ಮಾಧವ್ ಹಾಗೂ ಅವರ ಅಭಿಮಾನಿ ತುಳಸಿ, ಇವರಿಬ್ಬರ ಸ್ನೇಹವೆ ಈ ಧಾರವಾಹಿಯ ಜೀವಾಳ ಆಗಿದೆ. ಈ ಇಬ್ಬರು ಖ್ಯಾತ ಕಲಾವಿದರ ಅದ್ಭುತ ಅಭಿನಯಕ್ಕೆ ಜನರು ಫಿದಾ ಆಗಿದ್ದಾರೆ.
ಇಷ್ಟು ದಿವಸ ಇವರಿಬ್ಬರದ್ದು ಸ್ನೇಹವಾಗಿತ್ತು, ಆದರೆ ಈಗ ತುಳಸಿ ಮೇಲೆ ಮಾಧವನ ಮನಸ್ಸಿನಲ್ಲಿ ಪ್ರೀತಿ ಅರಳುವುದಕ್ಕೆ ಶುರುವಾಗಿದೆ. ಗಟ್ಟಿಮೇಳ ಧಾರವಾಹಿಯ ವೇದಾಂತ್ ಅತಿಥಿ ಪಾತ್ರದಲ್ಲಿ ಬಂದು ಪ್ರೀತಿಯ ಅರಿವು ಮಾಡಿಸಿದ್ದು, ಆಗಿನಿಂದ ಮಾಧವ್ ಪಾತ್ರದಲ್ಲಿ ಬದಲಾವಣೆ ಆಗಿದೆ. ತುಳಸಿ ಮೇಲೆ ಪ್ರೀತಿ ಶುರುವಾಗಿದೆ. ಆದರೆ ತುಳಸಿ ತಾವಿಬ್ಬರು ಒಳ್ಳೆಯ ಸ್ನೇಹಿತರು ಎಂದುಕೊಂಡಿದ್ದಾಳೆ. ಇದೀಗ ಇವರಿಬ್ಬರನ್ನು ಇನ್ನಷ್ಟು ಹತ್ತಿರ ಮಾಡುವುದಕ್ಕೆ ಮತ್ತೊಂದು ಜೋಡಿ ಗೆಸ್ಟ್ ಆಗಿ ಬಂದಿದೆ.
ಮಾಧವನ ಕೆಫೆಯಲ್ಲಿ ತುಳಸಿ ಕೆಲಸಕ್ಕೆ ಹೋಗುತ್ತಿದ್ದಾಳೆ, ಕೆಫೆಯಲ್ಲಿ ಹೊಸದಾಗಿ ಮದುವೆ ಆಗಿರುವ ಜೋಡಿಯೊಂದು ಟೇಬಲ್ ರಿಸರ್ವ್ ಮಾಡಿಸಿ, ಮೆನು ಕೂಡ ರೆಡಿ ಮಾಡಿಸಿದ್ದಾರೆ. ಅವರು ಯಂಗ್ ಕಪಲ್ ಎಂದು ಮ್ಯಾಗಿ, ಸದಾ ಅಂದುಕೊಂಡಿದ್ದರು. ಆದರೆ ಅವರು 50 ವರ್ಷ ದಾಟಿದ ಜೋಡಿ ಆಗಿದ್ದರೆ. 50 ವರ್ಷದ ನಂತರ ಮದುವೆ ಆಗಿರುಗ ಈ ಜೋಡಿ ನೋಡಿ, ಮಾಧವ್, ತುಳಸಿ, ಮ್ಯಾಗಿ ಸದಾ ಆಶ್ಚರ್ಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಮಾಧವ್ ತುಳಸಿ ಜೀವನದಲ್ಲಿ ಬದಲಾವಣೆ ತರುವುದಂತೂ ಖಂಡಿತ ಆಗಿದೆ.
Comments are closed.