NTR: ಎನ್ಟಿಆರ್ ಇಷ್ಟ ಪಟ್ಟ ಏಕೈಕ ಹೀರೊಯಿನ್ ಯಾರು ಗೊತ್ತೇ?? ಈಕೆ ಎಂದರೆ, ಕುಂತಲ್ಲೇ ಎನ್ಟಿಆರ್ ಬಾಯ್ ಬಿಡುತ್ತಾರೆ. ಯಾರು ಗೊತ್ತೇ ಆ ಅಪ್ಸರೆ??
NTR: ತೆಲುಗು ಚಿತ್ರರಂಗದ ಖ್ಯಾತ ನಟ ಜ್ಯೂನಿಯರ್ ಎನ್ಟಿಆರ್ (Jr NTR) ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ, ಅವರು ಈಗ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಹೆಸರು ಮಾಡಿರುವ ನಟ. ಎನ್ಟಿಆರ್ ಅವರ ಆರ್.ಆರ್.ಆರ್ (RRR) ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಜ್ಯೂನಿಯರ್ ಎನ್ಟಿಆರ್ ಅವರ ಈಗ ಕೊರಟಾಲ ಶಿವ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿದ್ದಾರೆ.

ಈ ಸಿನಿಮಾಗೆ ಹೀರೋಯಿನ್ ಆಗಿ ಖ್ಯಾತ ಹಿರಿಯನಟಿ ಶ್ರೀದೇವಿ (Sridevi) ಅವರ ಮಗಳು ಜಾನ್ವಿ ಕಪೂರ್ (Janhvi Kapoor) ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಜ್ಯೂನಿಯರ್ ಎನ್ಟಿಆರ್ ಅವರೊಡನೆ ಹೀರೋಯಿನ್ ಆಗಿ ನಟಿಸಲು ಎಲ್ಲರೂ ಬಹಳ ಕಾತುರರಾಗಿ ಇರುತ್ತಾರೆ ಎಂದರೆ ತಪ್ಪಲ್ಲ. ಇಷ್ಟು ಹೆಸರು ಮಾಡಿರುವ ನಟ ಎನ್ಟಿಆರ್ ಅವರ ಫೇವರೆಟ್ ಹೀರೋಯಿನ್ ಯಾರು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..
ನಟ ಜ್ಯೂನಿಯರ್ ಎನ್ಟಿಆರ್ (Jr NTR) ಅವರ ಫೇವರೆಟ್ ನಟಿ ಮಹಾನಟಿ ಸಾವಿತ್ರಿ (Savitri) ಅವರು, ಈ ಬಗ್ಗೆ ಜ್ಯೂನಿಯರ್ ಎನ್ಟಿಆರ್ ಅವರು ಅನೇಕ ಇಂಟರ್ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಸಾವಿತ್ರಿ ಅವರ ಬಯೋಪಿಕ್ ತಯಾರಾದಾಗ, ಮಹಾನಟಿ ಸಿನಿಮಾದ ಪ್ರೀರಿಲಿಸ್ ಇವೆಂಟ್ ನಲ್ಲಿ ಚೀಫ್ ಗೆಸ್ಟ್ ಆಗಿ ಬಂದು ಮಾತನಾಡಿದ್ದರು. ಸಾವಿತ್ರಿ ಅವರನ್ನು ಬಿಟ್ಟರೆ ಜ್ಯೂನಿಯರ್ ಎನ್ಟಿಆರ್ ಅವರಿಗೆ ತುಂಬಾ ಇಷ್ಟವಾದ ನಟಿ ಮತ್ಯಾರು ಅಲ್ಲ ನಟಿ ನಿತ್ಯಾ ಮೆನನ್ ಅವರು.
ಇವರಿಬ್ಬರು ಜೊತೆಯಾಗಿ ಜನತಾ ಗ್ಯಾರೇಜ್ (Janatha Garage) ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಶೂಟಿಂಗ್ ವೇಳೆ ಇಬ್ಬರ ನಡುವೆ ಒಳ್ಳೆಯ ಸ್ನೇಹ ಶುರುವಾಗಿದೆ. ನಿತ್ಯ ಮೆನನ್ ಅವರ ಏನೇ ಇದ್ದರೂ ನೇರವಾಗಿ ಮಾತನಾಡುವ ಸ್ವಭಾವ ಜ್ಯೂನಿಯರ್ ಎನ್ಟಿಆರ್ ಅವರಿಗೆ ತುಂಬಾ ಇಷ್ಟವಂತೆ. ಈ ಬಗ್ಗೆ ಪತ್ನಿ ಪ್ರಣತಿ ಅವರ ಜೊತೆಗೆ ಆಗಾಗ ಮಾತನಾಡುತ್ತಾರಂತೆ. ಒಟ್ಟಿನಲ್ಲಿ ಮಹಾನಟಿ ಸಾವಿತ್ರಿ ಅವರ ನಂತರ ಜ್ಯೂನಿಯರ್ ಎನ್ಟಿಆರ್ ಅವರು ತುಂಬಾ ಇಷ್ಟಪಟ್ಟ ನಟಿ ನಿತ್ಯ ಮೆನನ್ ಅವರು.
Comments are closed.