Post Office Jobs: ಮತ್ತೆ ಕೆಲಸ ಇಲ್ಲ ಅನ್ನಬೇಡಿ, ಕಡಿಮೆ ಓದಿದ್ದರೂ ನೇರವಾಗಿ ಪೋಸ್ಟ್ ಆಫೀಸ್ ನಲ್ಲಿ ಪಡೆಯಿರಿ ಕೆಲಸ- 12 ಸಾವಿರ ಪೋಸ್ಟ್ ಗಳು ಖಾಲಿ. ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?
Post Office Jobs: ಸೆಂಟ್ರಲ್ ಗವರ್ನಮೆಂಟ್ ಗೆ ಸೇರುವ ಅಂಚೆ ಇಲಾಖೆಯಲ್ಲಿ ಕೆಲಸ ಸಿಕ್ಕರೆ ನಿಮ್ಮ ಜೀವನ ಸೆಟ್ಲ್ ಆಯಿತು ಎಂದು ಅರ್ಥ. ಇದೀಗ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಕೆಲಸಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದ್ದು, ಒಟ್ಟು 12,828 ಪೋಸ್ಟ್ ಗಳು ಖಾಲಿ ಇದೆ. ಹಾಗಾಗಿ ಆಸಕ್ತಿ ಇರುವವರು ಹಾಗೂ ಅರ್ಹತೆ ಇರುವವರು ತಪ್ಪದೇ ಅಪ್ಲೈ ಮಾಡಿ. ಕೆಲಸಕ್ಕೆ ಬೇಕಿರುವ ಎಲ್ಲಾ ಅಂಶಗಳನ್ನು ತಿಳಿಸಿಕೊಡುತ್ತೇವೆ..

12,828 ಗ್ರಾಮೀಣ ಡಾಕ್ ಸೇವಕ್ (GDS-BPM/ABPM) ಹುದ್ದೆಗಳು ಖಾಲಿ ಇದೆ. ಈ ಕೆಲಸಕ್ಕೆ ಅರ್ಜಿ ಹಾಕಲು ಕೊನೆಯ ದಿನಾಂಕ 2023ರ ಜೂನ್ 11. ಖಾಲಿ ಇರುವ ಹುದ್ದೆಗಳ ಲಿಸ್ಟ್ ಹೀಗಿದೆ, ಆಂಧ್ರ ಪ್ರದೇಶ- 118, ಅಸ್ಸಾಂ- 151, ಬಿಹಾರ್- 76, ಛತ್ತೀಸ್ಗಢ- 342, ಗುಜರಾತ್- 110, ಹರಿಯಾಣ-8, ಹಿಮಾಚಲ ಪ್ರದೇಶ- 37, ಜಮ್ಮು & ಕಾಶ್ಮೀರ-89, ಜಾರ್ಖಂಡ್- 1125, ಕರ್ನಾಟಕ- 48, ಮಧ್ಯ ಪ್ರದೇಶ- 2992, ಮಹಾರಾಷ್ಟ್ರ- 620, ನಾರ್ತ್ ಈಸ್ಟರ್ನ್- 4384, ಒಡಿಶಾ- 948, ಪಂಜಾಬ್- 13, ರಾಜಸ್ಥಾನ- 1408, ತಮಿಳುನಾಡು- 18, ತೆಲಂಗಾಣ-96, ಉತ್ತರ ಪ್ರದೇಶ- 160.. ಇದನ್ನು ಓದಿ..Kannada News: ಒಂದು ಕಡೆ ಪ್ರಶಂಸೆ, ಒಂದು ಕಡೆ ಕಾಗೆ ಎಂದು ಟ್ರೊಲ್ ಮಾಡುತ್ತಿದ್ದರೂ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈಶ್ವರ್ ಏನು ಮಾಡಲು ಹೊರಟಿದ್ದಾರೆ ಗೊತ್ತೇ??
ಉತ್ತರಾಖಂಡ- 40, ಪಶ್ಚಿಮ ಬಂಗಾಳ- 45 ಇಷ್ಟು ಪೋಸ್ಟ್ ಗಳು ಖಾಲಿ ಇದೆ. ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ, ರಾಜ್ಯದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿರಬೇಕು. ಕೆಲಸದ ವಯೋಮಿತಿ, 2023ರ ಜೂನ್ 11ಕ್ಕೆ ಅಭ್ಯರ್ಥಿಗಳ ವಯಸ್ಸು 18 ತುಂಬಿ 40 ವರ್ಷದ ಒಳಗೆ ಇರಬೇಕು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ, SC/ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ, PWD(General) ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ, PWD (OBC) ಅಭ್ಯರ್ಥಿಗಳಿಗೆ 13 ವರ್ಷ ವಯಸ್ಸಿನ ಸಡಿಲಿಕೆ, PWD (SC/ST) ಅಭ್ಯರ್ಥಿಗಳಿಗೆ 15 ವರ್ಷ ಸಡಿಲಿಕೆ ಇದೆ.
ಮಹಿಳೆಯರು, SC/ST ಅಭ್ಯರ್ಥಿಗಳು ಹಾಗೂ PWD ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ, ಬೇರೆ ಅಭ್ಯರ್ಥಿಗಳು 100 ರೂಪಾಯಿ ಆನ್ಲೈನ್ ಮೂಲಕ ಪಾವತಿಸಬೇಕು. ಈ ಕೆಲಸಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುವುದು ಮೆರಿಟ್ ಲಿಸ್ಟ್, ದಾಖಲಾತಿ ಪರಿಶೀಲನೆ ಹಾಗೂ ಇಂಟರ್ವ್ಯೂ ಮೂಲಕ. ಕೆಲಸಕ್ಕೆ ಸಿಗುವ ತಿಂಗಳ ಸಂಬಳ ಹೀಗಿದೆ, ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್) ಹುದ್ದೆಗೆ ತಿಂಗಳಿಗೆ ₹12,000 ಇಂದ ₹29,380 ರೂಪಾಯಿವರೆಗು ಇರುತ್ತದೆ.. ಇದನ್ನು ಓದಿ..Kannada News: ಡಿಕೆಶಿ ಡಿಸಿಎಂ ಆದರೂ ತಗ್ಗೊದೇ ಇಲ್ಲ ಎನ್ನುತ್ತಿರುವ ಯತ್ನಾಳ್- ಬಹಿರಂಗವಾಗಿಯೇ ಖಡಕ್ ಆಗಿ ಹೇಳಿದ್ದೇನು ಗೊತ್ತೇ?? ಇದಪ್ಪ ಗತ್ತು ಅಂದ್ರೆ ಅಂದ್ರು ಜನ
ಗ್ರಾಮೀಣ ಡಾಕ್ ಸೇವಕ್ (ಅಸಿಸ್ಟಂಟ್ ಪೋಸ್ಟ್ ಮಾಸ್ಟರ್) ಹುದ್ದೆಗೆ ತಿಂಗಳ ಸಂಬಳ ₹10,000 ಇಂದ ₹24,470 ರೂಪಾಯಿಗಳು. ಅರ್ಜಿ ಸಲ್ಲಿಕೆ ಶುರು ಆಗಿರುವ ದಿನಾಂಕ 22/5/2023 ಹಾಗೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11/6/2023. ಆಸಕ್ತಿ ಮತ್ತು ಅರ್ಹತೆ ಇರುವವರು ತಪ್ಪದೇ ಅರ್ಜಿ ಸಲ್ಲಿಸಿ.
Comments are closed.