Kannada News: ಒಂದು ಕಡೆ ಪ್ರಶಂಸೆ, ಒಂದು ಕಡೆ ಕಾಗೆ ಎಂದು ಟ್ರೊಲ್ ಮಾಡುತ್ತಿದ್ದರೂ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈಶ್ವರ್ ಏನು ಮಾಡಲು ಹೊರಟಿದ್ದಾರೆ ಗೊತ್ತೇ??

Kannada News: ವಿಧಾನಸಭಾ ಎಲೆಕ್ಷನ್ ನಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಎಲೆಕ್ಷನ್ ಗೆ ನಿಂತು ಗೆದ್ದಿರುಗ ಅಭ್ಯರ್ಥಿ ಪ್ರದೀಪ್ ಈಶ್ವರ್. ಒಂದು ಕಡೆ ಇವರಿಗೆ ಪ್ರಶಂಸೆ ಸಿಗುತ್ತಿದೆ. ಮತ್ತೊಂದು ಕಡೆ ಕಾಗೆ ಎಂದು ಟ್ರೋಲ್ ಕೂಡ ಮಾಡಲಾಗುತ್ತಿದೆ. ಹೀಗಿರುವಾಗ ಪ್ರದೀಪ್ ಈಶ್ವರ್ ಅವರು ತಮ್ಮ ಕ್ಷೇತ್ರದಲ್ಲಿ ಏನೆಲ್ಲಾ ಒಳ್ಳೆಯ ಕಾರ್ಯಗಳನ್ನು ಮಾಡಲಿದ್ದಾರೆ ಗೊತ್ತಾ? ವಿಧಾನಸೌಧದ ಕೆಂಗಲ್ ಗೇಟ್ ಹತ್ತಿರ ಅವರು ಹೇಳಿದ್ದು ಹೀಗೆ…

pradeep eehwar plans for chikkaballapur Kannada News:

“ನಾನೊಬ್ಬ ಅನಾಥ, ನನಗೆ ಟಿಕೆಟ್ ಕೊಟ್ಟು ನಾನು ವಿಧಾನಸೌಧಕ್ಕೆ ಬಂದಿದ್ದೀನಿ ಅಂದ್ರೆ ಅದು ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಕ್ಕೆ ಸಿಕ್ಕ ಗೆಲುವು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುತ್ತೇನೆ. ಅಭಿಮಾನ ಪ್ರೀತಿ ಸಿಗೋದು ಒಳ್ಳೆಯ ಕೆಲಸ ಮಾಡಿದರೆ ಮಾತ್ರ, ಹಗಲು ದರೋಡೆ ಮಾಡಿದರೆ ಸಿಗೋದಿಲ್ಲ..” ಎಂದು ಹೇಳಿ ಆರೋಗ್ಯ ಸಚಿವರಾದ ಸುಧಾಕರ್ ಅವರಿಗೆ ಚೆಕ್ ಮೇಟ್ ಕೊಟ್ಟಿದ್ದಾರೆ. ಮುಂದುವರೆದು ಮಾತನಾಡಿ, “ನನ್ನ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 14 ಸರ್ಕಾರಿ ಶಾಲೆಗಳಿವೆ. ಇದನ್ನು ಓದಿ..Business Idea: ಕೇವಲ 5 ಸಾವಿರ ಹಾಕಿ, ನಿಮ್ಮ ಹಳ್ಳಿಯಲ್ಲಿಯೇ ಕನಿಷ್ಠ ತಿಂಗಳಿಗೆ 30 ಸಾವಿರ ಗಳಿಸಿ- ಬೆಂಗಳೂರಿನಲ್ಲಿ ಆದರೆ ಲಕ್ಷ ಪಕ್ಕ. ಯಾವ ಉದ್ಯಮ ಗೊತ್ತೇ??

ನಮ್ಮ ಶಾಲೆಗಳಲ್ಲಿ 9ನೇ ತರಗತಿ ಇಂದಲೇ ನೀಟ್ ಹಾಗೂ ಐಐಟಿ ಫೌಂಡೇಶನ್ ಶುರು ಮಾಡುತ್ತೇನೆ. ಈಗ 9ನೇ ತರಗತಿಯಲ್ಲಿ ಸಾವಿರ ಮಕ್ಕಳಿದ್ದು, ಅವರೆಲ್ಲ ಯಾವ ಹಂತಕ್ಕೆ ಬರುತ್ತಾರೆ ಎನ್ನುವುದನ್ನು ತೋರಿಸಿ ಬಳಿಕ ಮುಂದಿನ ಎಲೆಕ್ಷನ್ ಗೆ ಮತ ಕೇಳುತ್ತೇನೆ. ನಮ್ಮ ಜಿಲ್ಲೆಯಲ್ಲಿ ನೀರು ಹಾಗೂ ಅಂತರ್ಜಲ ಸಮಸ್ಯೆ ಇದೆ, ಜನರು ಕಷ್ಟಪಡುತ್ತಿದ್ದಾರೆ. ಉಚಿತವಾಗಿ ಸಿಗುತ್ತಿರುವ ಎಲ್ಲಾ ಯೋಜನೆಗಳು ಜನರಿಗೆ ತಲುಪುವ ಹಾಗೆ ಮಾಡುತ್ತೇನೆ. ಪ್ರವಾಸೋದ್ಯಮದ ಜೊತೆಗೆ ಮಾತನಾಡಿ, ಪ್ರತಿದಿನ 10 ಸಾವಿರ ಜನರು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡುವ ಹಾಗೆ ಮಾಡುತ್ತೇನೆ.

ಇದರ ಬಗ್ಗೆ ಸಿಎಂ ಹಾಗೂ ಡಿಸಿಎಂ ಅವರೊಡನೆ ಮಾತನಾಡುತ್ತೇನೆ. ನನ್ನ ಕ್ಷೇತ್ರದಲ್ಲಿ ಏನೇ ಆದರೂ ದ್ವೇಷದ ರಾಜಕಾರಣ ನಡೆಯುವುದಿಲ್ಲ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಏನು ಎಂದು ನನಗೆ ಗೊತ್ತಿಲ್ಲ, ನನ್ನ ಮೇಲೆ 20 ಕೇಸ್ ಹಾಕಿದ್ದಾರೆ. ಅವರೇ ಕೇಸ್ ಹಾಕಿಕೊಂಡರೆ ಅದರ ಜವಾಬ್ದಾರಿ ನನ್ನದಲ್ಲ. ನಾನು ಪ್ರತಿದಿನ ಬೆಳಗ್ಗೆ 6 ರಿಂದ 9 ಗಂಟೆವರೆಗೂ ಹಾಗೂ ಸಂಜೆ 6 ರಿಂದ 9 ಗಂಟೆವರೆಗೂ ನನ್ನ ಕ್ಷೇತ್ರದ ಪ್ರತಿಮನೆಗೂ ಭೇಟಿ ನೀಡುತ್ತೇನೆ..” ಎಂದು ಹೇಳಿದ್ದಾರೆ ಪ್ರದೀಪ್ ಈಶ್ವರ್. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?

Comments are closed.