BY Vijayendra: ಹಾಸನದಲ್ಲಿ ಗರ್ಜಿಸಿದ ರಾಜಾಹುಲಿ ಮಗ ಮರಿ ಹುಲಿ- ಖಡಕ್ ಆಗಿ ಸರ್ಕಾರಕ್ಕೆ ಹೇಳಿದ್ದೇನು ಗೊತ್ತೇ??

BY Vijayendra: ಕಾಂಗ್ರೆಸ್ ಸರ್ಕಾರ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದಿದೆ. 5 ಗ್ಯಾರಂಟಿ ಯೋಜನೆಗಳನ್ನು ಶೀಘ್ರದಲ್ಲೇ ಜಾರಿಗೆ ತರುವುದಾಗಿ ತಿಳಿಸಿದೆ ಕಾಂಗ್ರೆಸ್. ಅದರಲ್ಲಿ ಈಗಾಗಲೇ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ವೇಳೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕಾಂಗ್ರೆಸ್ ಸರ್ಕಾರ ಆಗಾಗ ತಿರುಗೇಟು ನೀಡುತ್ತಿದೆ. ಇದೀಗ ಬಿಜೆಪಿಯ ಹಳೆಯ ಹುಲಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಅವರು ಹಾಸನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..

vijayendra comments about congress government BY Vijayendra:

“ಗ್ಯಾರಂಟಿ ಯೋಜನೆಗಳನ್ನು ನೀಡಿದ ಸರ್ಕಾರದ ಗತಿ ಏನಾಗಿದೆ ಎಂದು ನಾವು ನೋಡಿದ್ದೇವೆ, ಪಂಜಾಬ್ ಪರಿಸ್ಥಿತಿ ಏನಾಗಿದೆ ಎಂದು ನಮಗೆ ಗೊತ್ತಿದೆ..ಕಾಂಗ್ರೆಸ್ ಸರ್ಕಾರದ ಸಚಿವರು ಎಲೆಕ್ಷನ್ ಸಮಯದಲ್ಲಿ ಕೊಟ್ಟಿದ್ದು ಗಿಮಿಕ್ ಯೋಜನೆಗಳಿಗೆ ಗ್ಯಾರಂಟಿ. ಕೆಲವು ಜನರು ಇದೆಲ್ಲಾ ಲೋಕಸಭಾ ಎಲೆಕ್ಷನ್ ವರೆಗು ಮಾತ್ರ ಇರುತ್ತದೆ ಎಂದು ಹೇಳುತ್ತಾರೆ. ಭರವಸೆ ಕೊಡುವ ಸಮಯದಲ್ಲಿ ಶರತ್ತುಗಳ ಬಗ್ಗೆ ಒಂದು ಮಾತನ್ನು ಹೇಳಿರಲಿಲ್ಲ..ಈಗ ಸಾಕಷ್ಟು ಕಂಡೀಷನ್ ಗಳು ಬರುತ್ತಿದೆ. ಮುಂದೆ ಹೇಗೆ ಇದನ್ನೆಲ್ಲ ನಡೆಸುತ್ತಾರೆ ನೋಡೋಣ..” ಎಂದಿದ್ದಾರೆ. ಇದನ್ನು ಓದಿ..2000 Notes: ಎರಡು ಸಾವಿರ ನೋಟು ನಿಷೇಧ ಆಗಿದ್ದೆ ತಡ- ತೆಲಂಗಾಣ ರಾಜ್ಯದ ದೇವಾಲಯದಲ್ಲಿ ಭಕರು ಏನು ಮಾಡಿದ್ದಾರೆ ಗೊತ್ತೇ? ಇವೆಲ್ಲ ಬೇಕಿತ್ತಾ?

“ವಿಧಾನಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದು ಅಧಿಕಾರಕ್ಕೆ ಬಂದಿದೆ, ಬಿಜೆಪಿಗೆ ಇದು ಹೊಸ ವಿಷಯವಲ್ಲ. ನಾವು ಜನರ ತೀರ್ಪನ್ನು ಒಪ್ಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುತ್ತೇವೆ.. ಆಡಳಿತ ಸರ್ಕಾರ ತಪ್ಪು ಮಾಡಿದಾಗ, ಅವರ ಕಿವಿ ಹಿಂಡಿ ಸರಿದಾರಿಗೆ ಕರೆತರುತ್ತೇವೆ..” ಎಂದು ಹೇಳಿ, ತಮ್ಮ ಪಕ್ಷ ಏನು ಮಾಡುತ್ತದೆ ಎನ್ನುವುದನ್ನು ತಿಳಿಸಿದ್ದಾರೆ. “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ, ಇದ್ರ ಹೊರೆ ಜನರ ಮೇಲೆ ಬೀಳಬಾರದು.

ಈಗಾಗಲೇ ವಿದ್ಯುತ್ ಬೆಲೆ ಜಾಸ್ತಿಯಾಗಿದೆ, ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿಯಾಗಬಾರದು. ಆದರೆ ಅವರು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಜನರಿಗೆ ಕಷ್ಟ ಆಗುವ ನಿರ್ಧಾರ ತೆಗೆದುಕೊಳ್ಳಬಾರದು. ನಮ್ಮ ಪಕ್ಷವನ್ನು ತಪ್ಪು ಎಂದು ಹೇಳಿ ನಮ್ಮ ಮೇಲೆ ಗೂಬೆ ಕೂರಿಸುವ ಮೊದಲು, ಜನರಿಗೆ ಒಳ್ಳೆಯದಾಗುವಂಥ ಕೆಲಸ ಮಾಡಬೇಕು. ನಾವು ಸೋಲು ಒಪ್ಪಿಕೊಂಡು, ಜನರ ಜೊತೆಗಿದ್ದು, ಅವರ ವಿಶ್ವಾಸ ಗಳಿಸಿ, ಮತ್ತೆ ಅಧಿಕಾರಕ್ಕೆ ಬರುತ್ತೇವೆ..”ಎಂದು ಬಿವೈ ವಿಜಯೇಂದ್ರ ಅವರು ಹೇಳಿದ್ದಾರೆ. ಇದನ್ನು ಓದಿ..Hot Star Disney: ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ಹಾಟ್ ಸ್ಟಾರ್- ಇನ್ನು ಮುಂದೆ ಉಚಿತವಾಗಿ ಏನೆಲ್ಲಾ ಸಿಗಲಿದೆ ಗೊತ್ತೇ??

Comments are closed.