2000 Notes: ಎರಡು ಸಾವಿರ ನೋಟು ನಿಷೇಧ ಆಗಿದ್ದೆ ತಡ- ತೆಲಂಗಾಣ ರಾಜ್ಯದ ದೇವಾಲಯದಲ್ಲಿ ಭಕರು ಏನು ಮಾಡಿದ್ದಾರೆ ಗೊತ್ತೇ? ಇವೆಲ್ಲ ಬೇಕಿತ್ತಾ?

2000 Notes: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ 2000 ರೂಪಾಯಿ ನೋಟ್ ಗಳನ್ನು ಹಿಂಪಡೆಯಲು ಸೂಚನೆ ನೀಡಿದೆ. ಸೆಪ್ಟೆಂಬರ್ ತಿಂಗಳ ಅಂತ್ಯದವರೆಗು ನೋಟ್ ಗಳನ್ನು ಎಕ್ಸ್ಛೇಂಜ್ ಮಾಡಲು ಅವಕಾಶ ನೀಡಿದೆ. ಈ ಆದೇಶ ಬಂದ ನಂತರ ತೆಲಂಗಾಣ ಹಾಗೂ ಆಂಧ್ರಪ್ರದೇಶದ ದೇವಸ್ಥಾನದಲ್ಲಿ ಏನಾಗುತ್ತಿದೆ ಗೊತ್ತಾ? ತಿಳಿಸುತ್ತೇವೆ ನೋಡಿ..

people offering 2000 notes in hundi of temples 2000 Notes:

ತೆಲಂಗಾಣ ರಾಜ್ಯದ ಹಲವು ದೇವಸ್ಥಾನಗಳಲ್ಲಿ ಭಕ್ತರು 2000 ರೂಪಾಯಿಯ ಪಿಂಕ್ ನೋಟ್ ಗಳನ್ನೇ ಹುಂಡಿಗೆ ಹಾಕುತ್ತಿದ್ದಾರೆ. ಯದಾದ್ರಿ ದೇವಸ್ಥಾನದಲ್ಲಿ ಕಾಣಿಕೆಯಾಗಿ ಬಂದಿರುವ ನೋಟ್ ಗಳನ್ನು ಎಣಿಸಿದಾಗ, ಸುಮಾರು 2 ಲಕ್ಷ ರೂಪಾಯಿ ಬೆಲೆಯಷ್ಟು ಪಿಂಕ್ ನೋಟ್ ಗಳು ಬಂದಿದೆ ಎಂದು ಮಾಹಿತಿ ಸಿಕ್ಕಿದೆ. ಈ ವಿಚಾರದ ಬಗ್ಗೆ ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ ಎನ್.ಗೀತಾ ಅವರು ಮಾತನಾಡಿ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತೆಲಂಗಾಣ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯು .. ಇದನ್ನು ಓದಿ..Gruhajyothi: ಇದಪ್ಪ ಕಾಮಿಡಿ ಅಂದ್ರೆ: ಹೊಸದಾಗಿ ಮನೆ ಕಟ್ಟಿದ್ದರೆ ಉಚಿತ ವಿದ್ಯುತ್ ಕತೆ ಏನಾಗಲಿದೆ ಗೊತ್ತೇ?? ಸಚಿವರೇ ನಗು ಬರುವಂತೆ ಹೇಳಿದ್ದೇನು ಗೊತ್ತೇ??

ಜನರಿಂದ 2000 ರೂಪಾಯಿಯ ಪಿಂಕ್ ನೋಟ್ ಗಳನ್ನು ಸ್ವೀಕರಿಸಲು ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ. ಜನರಿಂದ 2000 ರೂಪಾಯಿ ನೋಟ್ ಪಡೆದು, ಅವರಿಗೆ ಚೇಂಜ್ ಬೇಕಿದ್ದರೆ ಅದನ್ನು ಕೊಡಬೇಕು ಎಂದು ದೇವಸ್ಥಾನವು ತಿಳಿಸಿದೆ. ಈ ನೋಟ್ ಗಳನ್ನು ಆರ್.ಬಿ.ಐ ಗೆ ಹಿಂದಿರುಗಿಸುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಂಡಿದೆ. ಆಂಧ್ರಪ್ರದೇಶ ಸರ್ಕಾರ ಕೂಡ ಇದೇ ನಿರ್ಧಾರ ಮಾಡಿದೆ. ಹಾಗೆಯೇ ಭಕ್ತರು ದೇವಸ್ಥಾನದ ಬೇರೆ ಕೆಲಸಗಳಲ್ಲೂ 2000 ನೋಟ್ ಗಳನ್ನೇ ನೀಡುತ್ತಿದ್ದಾರೆ.

ದೇವಸ್ಥಾನಗಳಲ್ಲಿ ಸೇವೆಯ ರಶೀದಿ ಪಡೆಯಲು, ಪ್ರಸಾದ ಕೊಂಡುಕೊಳ್ಳಳು ಇದಕ್ಕೆಲ್ಲ ಹೆಚ್ಚಾಗಿ 2000 ರೂಪಾಯಿಯ ನೋಟ್ ಗಳನ್ನೇ ಭಕ್ತರು ಕೊಡುತ್ತಿದ್ದಾರೆ. ಬಹಳಷ್ಟು ದೇವಾಲಯಗಳಲ್ಲಿ ಇದೇ ನಡೆಯುತ್ತಿದ್ದು, ಬೇರೆ ದೇವಸ್ಥಾನಗಳು ಹುಂಡಿಯ ಹಣವನ್ನು ಇನ್ನು ಎಣಿಸಿಲ್ಲ ಎಂದು ತಿಳಿದುಬಂದಿದೆ. ಆರ್.ಬಿ.ಐ ಗೆ ನೋಟ್ ಗಳನ್ನು ವಾಪಸ್ ಕೊಡಲು ಸಮಯ ಇದೆ, ಅಲ್ಲಿಯವರೆಗೂ ದೇವಸ್ಥಾನದಲ್ಲಿ 2000 ರೂಪಾಯಿಯ ನೋಟ್ ಗಳನ್ನು ಸ್ವೀಕರಿಸುತ್ತೇವೆ.. ಎಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸರ್ಕಾರ ನಿರ್ಧಾರ ಮಾಡಿದೆ. ಇದನ್ನು ಓದಿ..Tirupati: ಕಡಿಮೆ ಬೆಳೆಗೆ ಇನ್ನು ಮುಂದೆ ನೀವು ತಿರುಪತಿಗೆ ಹೋಗಬಹುದು- ಅದು ರಾಜಧಾನಿ ಬೆಂಗಳೂರಿನಿಂದ. ಹೇಗೆ ಗೊತ್ತೇ??

Comments are closed.