Ola Electric: ನೀವು ಸುಲಭವಾಗಿ ಓಲಾ ಸ್ಕೂಟರ್ ಖರೀದಿ ಮಾಡಬೇಕು ಎಂದು ಕೊಂಡಿದ್ದೀರಾ? ಹಾಗಿದ್ದರೆ ನಿಮಗಿದೆ ಸಿಹಿ ಸುದ್ದಿ- ಏನು ಗೊತ್ತೇ?

Ola Electric: ಭಾರತದಲ್ಲಿ ಈಗ ಓಲಾ ಎಲೆಕ್ಟ್ರಿಕ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಓಲಾ ಎಸ್1 ಸೀರೀಸ್ ಬೈಕ್ ಗಳನ್ನು ಜನರು ಬಹಳ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಓಲಾ ಇಬೈಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಗ್ರಾಹಕರಿಗೆ ಇನ್ನು ಒಳ್ಳೆಯ ಆಫರ್ ಗಳನ್ನು ನೀಡಲು ಓಲಾ ಸಂಸ್ಥೆ ಮುಂದಾಗಿದೆ. ಅಥರ್ ಎನರ್ಜಿ ಬೈಕ್ ಗಳಿಗೆ 60 ತಿಂಗಳುಗಳ ಈಸಿ EMI ಪ್ಲಾನ್ ನೀಡಲಾಗಿದೆ. ಈಗ ಓಲಾ ಎಸ್1 ಸೀರೀಸ್ ಗು ಇದೇ ರೀತಿಯ ಲೋನ್ ಆಫರ್ ಕೊಡಲಾಗುತ್ತಿದ್ದು, ಈ ಲೋನ್ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ..

get a easy loan to buy ola electric scoter Ola Electric:

IDFC ಬ್ಯಾಂಕ್ ಹಾಗೂ L&T Financial Services ಜೊತೆಗೆ ಸಹಭಾಗಿತ್ವ ವಹಿಸಿರುವ ಓಲಾ ಸಂಸ್ಥೆ 6.99% ಬಡ್ಡಿ ದರದಲ್ಲಿ ಗ್ರಾಹಕರಿಗೆ ಓಲಾ ಬೈಕ್ ಗಳನ್ನು ನೀಡಲು ಮುಂದಾಗಿದೆ. ಇದರಿಂದ ನೀವು ಯಾವುದೇ ಡೌನ್ ಪೇಮೆಂಟ್ ಮಾಡದೆ ಬೈಕ್ ಕೊಂಡುಕೊಳ್ಳಬಹುದು. ಸಾಮಾನ್ಯವಾಗಿ ಬೈಕ್ ಗಳಿಗೆ 36 ತಿಂಗಳು EMI ಅವಧಿ ಹಾಗೆಯೇ ವಿಶೇಷ ಸಮಯದಲ್ಲಿ 48 ತಿಂಗಳ EMI ಅವಧಿ ಇರುತ್ತದೆ, ಆದರೆ ಈಗ 60 ತಿಂಗಳಿಗೆ EMI ಅವಧಿ ಏರಿಕೆ ಮಾಡಿರುವುದು ಗ್ರಾಹಕರಿಗೆ ಸಂತೋಷ ತಂದಿದೆ. ಈ ವಿಚಾರದ ಬಗ್ಗೆ ಓಲಾ ಸಂಸ್ಥೆಯ ಚೀಫ್ ಆಫೀಸರ್ ಅಂಕುಶ್ ಅಗರ್ವಾಲ್ ಅವರು ಮಾತನಾಡಿ.. ಇದನ್ನು ಓದಿ..Gas Leaking Tips: ಮನೆಯಲ್ಲಿ ಅಪ್ಪಿ ತಪ್ಪಿ ಗ್ಯಾಸ್ ಸಿಲಿಂಡರ್ ಲೀಕ್ ಆದರೆ, ನೀವೇನು ಮಾಡಬೇಕು ಗೊತ್ತೇ? ಈ ನಾಲ್ಕು ಮಾಡಿ, ಜೀವ ಉಳಿಸಿಕೊಳ್ಳಿ.

“ಓಲಾ ಸಂಸ್ಥೆಯ ಸ್ಕೂಟರ್ ಗಳು ಇಬೈಕ್ಸ್ ಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಈಗ ನಾವು ಖ್ಯಾತ ಹಣಕಾಸು ಸಂಸ್ಥೆಗಳ ಜೊತೆಗೆ ಪಾರ್ಟ್ನರ್ಶಿಪ್ ಮಾಡಿಕೊಂಡಿದ್ದೇವೆ, ಈ ಮೂಲಕ ನಮ್ಮ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತೇವೆ.. 2ನೇ ಲೆವೆಲ್ ನಲ್ಲಿ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಆಗುತ್ತದೆ..” ಎಂದು ಹೇಳಿದ್ದಾರೆ. ಈಗ ಓಲಾದ S1ಏರ್ ಬೈಕ್, S1 ಸೀರೀಸ್ ನಲ್ಲಿ 2kWh ಬ್ಯಾಟರಿ ಆಯ್ಕೆ ಕೈಬಿಡಲಿದೆ ಎಂದು ಹೇಳಲಾಗಿದೆ. ಈಗ ನಮ್ಮ ದೇಶದಲ್ಲಿ Ola S1 ಏರ್ ಬೈಕ್ 3kWh ಬ್ಯಾಟರಿ ಆಯ್ಕೆಯ ಜೊತೆಗೆ ಬರುತ್ತದೆ. ಇದರಲ್ಲಿ FAME-II ಸಬ್ಸಿಡಿ ಸೇರಿದ್ದು 1.10 ಲಕ್ಷ ರೂಪಾಯಿಯ ಬೆಲೆಯಲ್ಲಿ ಸಿಗುತ್ತದೆ.

ಓಲಾ S1 ಪೂರ್ತಿ ಚಾರ್ಜ್ ಮಾಡಿದರೆ 125km ರೇಂಜ್ ಕೊಡುತ್ತದೆ. 85kmph ಸ್ಪೀಡ್ ಈ ಬೈಕ್ ನಲ್ಲಿದೆ. ಓಲಾ S1 ಇಬೈಕ್ ಸಹ 3kWh ಬ್ಯಾಟರಿ ಜೊತೆಗೆ ಬರಲಿದ್ದು, ಇದರ ಬೆಲೆ 1.30 ಲಕ್ಷ ರೂಪಾಯಿ ಶೂರೂಮ್ ಬೆಲೆ ಸಿಗುತ್ತದೆ. ಫುಲ್ ಚಾರ್ಜ್ ಮಾಡಿದರೆ, 128km ರೇಂಜ್ ಕೊಡಲಿದ್ದು 95kmph ಟಾಪ್ ಸ್ಪೀಡ್ ಕೊಡುತ್ತದೆ.
ಇನ್ನು ಓಲಾ S1 pro 4kWh ಬ್ಯಾಟರಿ ಜೊತೆಗೆ ಬರುತ್ತದೆ. ಪೂರ್ತಿ ಚಾರ್ಜ್ ಮಾಡಿದರೆ ಈ ಬೈಕ್ 181 km ರೇಂಜ್ ನೀಡುತ್ತದೆ. 95km/h ಸ್ಪೀಡ್ ಕೊಡುತ್ತದೆ. ಈ ಬೈಕ್ ನ ಶೋರೂಮ್ ಬೆಲೆ 1.40 ಲಕ್ಷ ರೂಪಾಯಿ ಆಗಿದೆ. 7 ಇಂಚ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಇನ್ನಿತರ ವೈಷಷ್ಟ್ಯತೆಗಳನ್ನು ಹೊಂದಿದೆ. ಇದನ್ನು ಓದಿ..Transport Minister: ಈಗಾಗಲೇ ಹೆಣಗಾಡುತ್ತಿರುವ ಸಾರಿಗೆ ಇಲಾಖೆಯ ನಷ್ಟದ ಬಗ್ಗೆ ಕೇಳಿದಕ್ಕೆ ಸಚಿವರು ಹೇಳಿದ್ದೇನು ಗೊತ್ತೇ? ಟ್ರೊಲ್ ಮಾಡಿದ ನೆಟ್ಟಿಗರು, ಇವರು ಸಚಿವರು.

Comments are closed.