Gold Price Latest: ಹಬ್ಬಗಳು ಮುಗಿದ ತಕ್ಷಣ ಕುಸಿದ ಚಿನ್ನ- ಅಂಗಡಿಗೆ ಮುಗಿಬಿದ್ದ ಜನರು. ಎಷ್ಟಾಗಿದೆ ಗೊತ್ತೇ?

today gold rate update

Gold Price Latest: ನಮಸ್ಕಾರ ಸ್ನೇಹಿತರೇ ಚಿನ್ನ ಖರೀದಿ(Gold Purchasing) ಮಾಡುವವರಿಗೆ ನಿಜಕ್ಕೂ ಕೂಡ ಈ ಸಮಯ ಒಳ್ಳೆಯ ಸಮಯ ಎಂದು ಹೇಳಬಹುದಾಗಿದೆ ಯಾಕೆಂದರೆ ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಚಿನ್ನದ ಬೆಲೆ ಭಾರತ ದೇಶದಲ್ಲಿ ದಿನೇ ದಿನೇ ಕಡಿಮೆಯಾಗುತ್ತಿರುವುದು ಚಿನ್ನ ಖರೀದಿದಾರರಿಗೆ ಸಂತೋಷವನ್ನು ನೀಡಿದೆ ಎಂದು ಹೇಳಬಹುದಾಗಿದೆ. ಹಬ್ಬದ ನಂತರ ಸಾಮಾನ್ಯವಾಗಿ ಚಿನ್ನದ ಬೆಲೆ ಏರಿಕೆಯಾಗುವುದನ್ನು ನೋಡಿರುತ್ತೇವೆ ಆದರೆ ಈಗ ಚಿನ್ನದ ಬೆಲೆ ಇಳಿಕೆಯಾಗಿರುತ್ತಿರುವುದು ಆಶ್ಚರ್ಯವನ್ನು ತಂದಿದೆ.

ಕೆಲವೊಂದು ಕಡೆಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದರೆ ಇನ್ನು ಕೆಲವು ಕಡೆಗಳಲ್ಲಿ ಚಿನ್ನದ ಬೆಲೆ ಇಳಿಕೆ ಆಗಿರುವುದನ್ನು ಕೂಡ ನಾವು ಕಂಡುಬಂದಿದ್ದು ಜಾಗತಿಕವಾಗಿ ಚಿನ್ನದ ಬೆಲೆ ಸ್ಥಿರವಾಗಿದೆ ಎಂದು ಹೇಳಬಹುದಾಗಿದೆ. ಚಿನ್ನದ ಆಭರಣಗಳನ್ನು ಖರೀದಿ ಮಾಡಲು ಬಯಸುವವರಿಗೆ ನಿಜಕ್ಕೂ ಕೂಡ ಇದು ಒಳ್ಳೆಯ ಸಮಯ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Gold Rate Today

ಭಾರತ ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಳೆಯ ಬಗ್ಗೆ ಮಾತನಾಡುವುದಾದರೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 53,890 ರೂಪಾಯಿ ಆಗಿದೆ ಎಂಬುದಾಗಿ ತಿಳಿದು ಬಂದಿದೆ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 58,790 ರೂಪಾಯಿ ಆಗಿದೆ ಅನ್ನುವುದಾಗಿ ತಿಳಿದು ಬಂದಿದೆ. ಇನ್ನು ಬೆಳ್ಳಿಯ ವಿಚಾರಕ್ಕೆ ಬಂದರೆ 10 ಗ್ರಾಂ ಬೆಳ್ಳಿಯ ಬೆಲೆ 730 ಆಗಿದೆ. ಹಾಗಿದ್ದರೆ ಬನ್ನಿ ಭಾರತ ದೇಶದಲ್ಲಿ ಚಿನ್ನದ ಬೆಲೆ ಭಾರತದ ಪ್ರಮುಖ ರಾಜ್ಯಗಳಲ್ಲಿ ಅಥವಾ ಪ್ರಮುಖ ನಗರಗಳಲ್ಲಿ ಯಾವ ರೀತಿ ಇದೆ ಅನ್ನೋದನ್ನ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಭಾರತದ ಪ್ರಮುಖ ನಗರಗಳಲ್ಲಿ ಇರುವಂತಹ 22 ಕ್ಯಾರೆಟ್ 10 ಗ್ರಾಂ ತೂಕದ ಚಿನ್ನದ ಬೆಲೆಯನ್ನು ತಿಳಿಯೋಣ ಬನ್ನಿ. ಬೆಂಗಳೂರು, ಮುಂಬೈ ಹಾಗೂ ಕೇರಳದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇವತ್ 53,890 ರೂಪಾಯಿ ಆಗಿದೆ ಎಂಬುದಾಗಿ ತಿಳಿದು ಬರುತ್ತದೆ. ದೆಹಲಿ ಹಾಗೂ ಲಕ್ನೋದಲ್ಲಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,040 ರೂಪಾಯಿ ಆಗಿರುತ್ತದೆ ಎಂಬುದಾಗಿ ತಿಳಿದು ಬರುತ್ತದೆ. ಇನ್ನು ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,100 ರೂಪಾಯಿ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಇದು ನಮ್ಮ ಭಾರತ ದೇಶದ ಪ್ರಮುಖ ನಗರಗಳ ಚಿನ್ನದ ಬೆಲೆ ಆಗಿದೆ ಎಂಬುದಾಗಿ ತಿಳಿದು ಬರುತ್ತದೆ.

ಇನ್ನು ಭಾರತ ದೇಶದ ವಿವಿಧ ಪ್ರಮುಖ ನಗರಗಳಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ. ಮುಂಬೈ, ದೆಹಲಿ ಹಾಗೂ ಲಕ್ನೋದಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ 7,370 ಆಗಿದೆ ಎಂಬುದಾಗಿ ತಿಳಿದು ಬರುತ್ತದೆ. ಕೇರಳ ಹಾಗೂ ಚೆನ್ನೈನಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ 7,650 ರೂಪಾಯಿ ಆಗಿದೆ. ಇನ್ನು ನಮ್ಮ ರಾಜ್ಯದ ರಾಜಧಾನಿ ಆಗಿರುವಂತಹ ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ 7,300 ಎಂಬುದಾಗಿ ತಿಳಿದು ಬಂದಿದ್ದು ನಮ್ಮ ಭಾರತ ದೇಶದಲ್ಲಿ ಇರುವಂತಹ ಬೆಳ್ಳಿ ಹಾಗೂ ಚಿನ್ನದ ಬೆಲೆಯನ್ನು ನೀವು ಈ ಮೂಲಕ ಗಮನಿಸಬಹುದಾಗಿದೆ.

Comments are closed.