Gruhalakshmi: ಹಣ ಬಂದಿಲ್ಲ ಅಂತ ಚಿಂತೆ ಮಾಡಲೇಬೇಡಿ- ಸಿದ್ದರಾಮಯ್ಯ ಕೊಟ್ಟರು ಸಿಹಿ ಸುದ್ದಿ.

Karnataka Government Gives clarity about Gruhalakshmi amount Credit

Gruhalakshmi: ನಮಸ್ಕಾರ ಸ್ನೇಹಿತರೇ ಈಗಾಗಲೇ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರ ಗ್ಯಾರಂಟಿ ಯೋಜನೆಗಳ ಹಾವಳಿ ರಾಜ್ಯದಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಈ ಯೋಜನೆಗಳ ಕಾರಣದಿಂದಾಗಿ ಸಿದ್ದರಾಮಯ್ಯ(Siddaramaiah ) ಅವರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು ಅಂದ್ರು ಕೂಡ ತಪ್ಪಾಗಲ್ಲ. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅವರ ಗೃಹಲಕ್ಷ್ಮಿ ಯೋಜನೆ ಬಗ್ಗೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯದ ಪ್ರತಿಯೊಂದು ಮನೆಯ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2000 ಮಾಸಾಶನವನ್ನು ನೀಡುವಂತಹ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

Karnataka Government Gives clarity about Gruhalakshmi amount Credit

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಗಸ್ಟ್ 30ರಿಂದಲೇ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ(gruhalakshmi scheme ಹಣವನ್ನು ನೀಡುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವಂತಹ ಸುದ್ದಿಗಳ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಕೆಲವರಿಗೆ ಸಿಕ್ಕಿಲ್ಲ ಇನ್ನೂ ಕೆಲವರಿಗೆ ಮೊದಲ ಹಾಗೂ ಎರಡು ಕಂತಿನ ಹಣ ಸಿಕ್ಕಿಲ್ಲ ಎನ್ನುವಂತಹ ಆರೋಪಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬರುತ್ತಿವೆ. ಕೆಲವರಿಗೆ ಎರಡನೇ ಕಂತಿನ ಹಣ ತಡವಾಗಿರುವುದು ಒಪ್ಪಿಕೊಳ್ಳಬಹುದಾದ ವಿಚಾರ ಆದರೆ ಸಾಕಷ್ಟು ಮಂದಿಗೆ ಮೊದಲನೇ ಕಂತಿನ ಹಣ ಕೂಡ ಸಿಕ್ಕಿಲ್ಲ ಎನ್ನುವುದು ನಿಜಕ್ಕೂ ಕೂಡ ಚಿಂತೆ ಪಡಬೇಕಾಗಿರುವಂತಹ ವಿಚಾರವಾಗಿದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನು ಕೂಡ ಓದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. –> Loan

ಅದರಲ್ಲೂ ವಿಶೇಷವಾಗಿ ಸಾಕಷ್ಟು ಮಹಿಳೆಯರು ನಾವು ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ಲಿಂಕಿಂಗ್ ಮಾಡಿಸಿದ್ದೇವೆ, ಸೀಡಿಂಗ್ ಮಾಡಿಸಿದ್ದೇವೆ, eKYC ಪೂರೈಸಿದ್ದೇವೆ ಹೀಗಿದ್ದರೂ ಕೂಡ ಖಾತೆಗೆ ಹಣ ಬಂದಿಲ್ಲ ಅಂದ್ರೆ ಸಂಬಂಧಪಟ್ಟಂತಹ ಅಧಿಕಾರಿಗಳ ಇಲಾಖೆಯಿಂದ ಈ ಬಗ್ಗೆ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಿಲ್ಲ(Aadhar Card linking to bank account) ಹೀಗೆ ಸಂಬಂಧಪಟ್ಟಂತಹ ಸರಿಯಾದ ಪ್ರಕ್ರಿಯೆಗಳನ್ನು ಮಾಡಿಲ್ಲ ಎನ್ನುವ ಕಾರಣಕ್ಕಾಗಿ ಸಾಕಷ್ಟು ಖಾತೆಗಳಿಗೆ ಹಣವನ್ನು ಜಮಾ ಮಾಡಿಲ್ಲ ಎಂಬುದಾಗಿ ಕೂಡ ಹೇಳುತ್ತಿದ್ದಾರೆ.

ಈ ವಿಚಾರದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ತಿಂಗಳಿಗೆ 2000 ಹಣವನ್ನು ಮನೆಯ ಯಜಮಾನಿಯರ ಖಾತೆಗೆ ವರ್ಗಾಯಿಸಲಾಗುತ್ತಿದೆ ಹಾಗೂ ಕೆಲವೊಂದು ಖಾತೆಗಳಲ್ಲಿ ಸಮಸ್ಯೆ ಇದೆ ಎನ್ನುವ ಕಾರಣಕ್ಕಾಗಿ ವರ್ಗಾಯಿಸಿಲ್ಲ ಎಂಬುದಾಗಿ ಕೂಡ ಹೇಳಿದ್ದಾರೆ. ಕೇವಲ ಎಷ್ಟು ಮಾತ್ರವಲ್ಲದೆ ಸಾಕಷ್ಟು ಖಾತೆಗಳಲ್ಲಿ ಹಾಗೂ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆಗಳು ಕೂಡ ಎದುರಾಗುತ್ತಿದೆ ಹೀಗಾಗಿ ಸಮಸ್ಯೆಗಳನ್ನು ಬಗೆಹರಿಸಿದ ನಂತರ DBT ಅಂದರೆ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಸಂಬಂಧಪಟ್ಟಂತಹ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ 2018.

ಇದಪ್ಪ ಘೋಷಣೆ ಅಂದ್ರೆ – ಸ್ವಂತ ವಾಹನ ಖರೀದಿಗೆ ಹಣ ಕೊಡಲು ನಿರ್ಧಾರ- ಕೇವಲ ಅಲ್ಪ ಸಂಖ್ಯಾತರು ಅಷ್ಟೇ ಅಲ್ಲ. ಬೇರೆಯವರಿಗೆ ಕೂಡ. –> Kannada News

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ 1.26 ಕೋಟಿ ಮಹಿಳೆಯರು ಅರ್ಹತೆಯನ್ನು ಪಡೆದುಕೊಂಡಿದ್ದಾರೆ. 1.10 ಕೋಟಿ ಮಹಿಳೆಯರಿಗೆ ಈಗಾಗಲೇ direct bank transfer ತಂತ್ರಜ್ಞಾನದ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗಿದೆ. ಇನ್ನುಳಿದಂತಹ 16 ಲಕ್ಷ ಜನರಿಗೆ ತಾಂತ್ರಿಕ ಸಮಸ್ಯೆ ಹಾಗೂ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕಿಂಗ್ ಸೇರಿದಂತೆ ಇನ್ನೂ ಕೆಲವೊಂದು ಪ್ರಕ್ರಿಯೆಗಳನ್ನು ಸರಿಯಾಗಿ ಮುಗಿಸದೆ ಇರುವ ಕಾರಣಕ್ಕಾಗಿ ಹಣವನ್ನು ವರ್ಗಾವಣೆ ಮಾಡಿಲ್ಲ ಎಂಬುದಾಗಿ ತಿಳಿದು ಬಂದಿದೆ. ಮುಂದಿನ ಕೆಲವು ದಿನಗಳಲ್ಲಿ ಈ ಸಮಸ್ಯೆ ಸರಿ ಹೋಗಬಹುದು ಎನ್ನುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

Comments are closed.