Vehicle Subsidy: ಇದಪ್ಪ ಘೋಷಣೆ ಅಂದ್ರೆ – ಸ್ವಂತ ವಾಹನ ಖರೀದಿಗೆ ಹಣ ಕೊಡಲು ನಿರ್ಧಾರ- ಕೇವಲ ಅಲ್ಪ ಸಂಖ್ಯಾತರು ಅಷ್ಟೇ ಅಲ್ಲ. ಬೇರೆಯವರಿಗೆ ಕೂಡ.

Vehicle Subsidy Scheme – Below is the complete details of Vehicle Subsidy scheme in Karnataka

Vehicle Subsidy: ನಮಸ್ಕಾರ ಸ್ನೇಹಿತರೆ 2023 ಹಾಗೂ 24ನೇ ಆರ್ಥಿಕ ವರ್ಷದ ಬಜೆಟ್ ನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿದ್ದರಾಮಯ್ಯ(Siddharamaiah ) ಅವರು ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ವಿಶೇಷವಾಗಿ ಇದೊಂದು ಯೋಜನೆ ಬಗ್ಗೆ ಮಾತನಾಡಲೇಬೇಕು. ವಿವಿಧ ಜನಾಂಗದ ನಿರುದ್ಯೋಗಿಗಳಿಗೆ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸಲು ಸಹಾಯಧನ ಹಾಗೂ ಸಾಲ ಸೌಲಭ್ಯವನ್ನು ನೀಡುವಂತಹ ಸ್ವಾವಲಂಬಿ ಸಾರಥಿ ಯೋಜನೆಯನ್ನು(swavalambi Sarathi Yojane) ಪರಿಚಯಿಸಲಾಗಿದೆ. ಬನ್ನಿ ಹಾಗಿದ್ರೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಮನೆಯಲ್ಲಿ ಖಾಲಿ ಕುರುವ ಬದಲು, ಚಾಟ್ GPT ಬಳಸಿ ಸುಲಭವಾಗಿ ಹಣಗಳಿಸಿ. ಮಾರ್ಗಗಳು ಇಲ್ಲಿವೆ. –>Earn from Chat GPT

Vehicle Subsidy Scheme – Below is the complete details of Vehicle Subsidy scheme in Karnataka

ಒಂದು ವೇಳೆ ಕೆಲಸ ಇಲ್ಲದೆ ಹೋದಲ್ಲಿ ಡ್ರೈವರ್ ಗಳಿಗೆ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ತಮ್ಮದೇ ಆದಂತಹ ಸ್ವಂತ 4 ಚಕ್ರದ ಅಥವಾ ಆಟೋರಿಕ್ಷಾ ಗಳಂತಹ ಉದ್ಯೋಗವನ್ನು ಸೃಷ್ಟಿಸುವಂತಹ ವಾಹನಗಳ ಖರೀದಿಗೆ ಸಬ್ಸಿಡಿ ಅನ್ನು ನೀಡುವಂತಹ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಶೇಕಡ 50ರಷ್ಟು ಸಬ್ಸಿಡಿ ಅಂದರೆ 3 ಲಕ್ಷ ರೂಪಾಯಿಗಳ ವರೆಗೂ ಕೂಡ ಸಹಾಯಧನವನ್ನು ನೀಡುವಂತಹ ಯೋಜನೆಯನ್ನು ರೂಪಿಸಲಾಗಿದೆ. ಈ ಸಬ್ಸಿಡಿಯನ್ನು ವಿವಿಧ ಸಮುದಾಯಗಳ ನಿಗಮಗಳ ಮೂಲಕ ರಾಜ್ಯ ಸರ್ಕಾರ ಮಂಜೂರು ಮಾಡುತ್ತದೆ ಎನ್ನುವುದನ್ನು ಕೂಡ ತಿಳಿಸಲಾಗಿದೆ.

ಬೇರೆಯವರಿಗೆ UPI ಮೂಲಕ ಹಾಕಿದ ಹಣ ವಾಪಾಸ್ ಪಡೆಯೋದು ಹೇಗೆ ಗೊತ್ತೇ? ತಿಳಿದುಕೊಂಡು ಬಾರಿ ಹಣ ಉಳಿಸಿ.. –>UPI

ಸದ್ಯದ ಮಟ್ಟಿಗೆ ಈ ಯೋಜನೆಯನ್ನು ಒಕ್ಕಲಿಗ ಸಮುದಾಯ, ಮರಾಠ ಸಮುದಾಯ, ವೀರಶೈವ ಲಿಂಗಾಯತ ಸಮುದಾಯ, ವಿಶ್ವಕರ್ಮ ಲಿಂಗಾಯತ ಸಮುದಾಯ ನಿಗಮ ಸೇರಿದಂತೆ ಸಾಕಷ್ಟು ಸಮುದಾಯಗಳ ನಿಗಮಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೂಡ ಆಹ್ವಾನವನ್ನು ನೀಡಲಾಗಿದೆ. ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬುದನ್ನು ನೋಡುವುದಾದರೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ವ್ಯಾಪ್ತಿಗೆ ಒಳಪಡುವಂತಹ ಸಮುದಾಯದವರು, ಕರ್ನಾಟಕ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಸಂಬಂಧಪಟ್ಟವರು, ಒಕ್ಕಲಿಗ ಸಮುದಾಯದ ನಿಗಮದ ವ್ಯಾಪ್ತಿಗೆ ಒಳಪಟ್ಟಂತಹ ಸಮುದಾಯದವರು, ಇದೇ ರೀತಿ ಮಾರಾಟ ಹಾಗೂ ವಿಶ್ವಕರ್ಮ ಅಭಿವೃದ್ಧಿ ನಿಗಮದ ಸಮುದಾಯಕ್ಕೆ ಸಂಬಂಧಪಟ್ಟವರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು subsidy ಪಡೆಯೋದಕ್ಕೆ ಇರುವ ಅರ್ಹತೆಗಳೇನು ಎಂಬುದನ್ನು ತಿಳಿಯೋಣ ಬನ್ನಿ. ಈ ಮೇಲೆ ಹೇಳಿರುವಂತಹ ಜಾತಿ ಅಥವಾ ಸಮುದಾಯಕ್ಕೆ ಸೇರಿರುವಂತಹ ವ್ಯಕ್ತಿಗಳು 18ರಿಂದ 45 ವರ್ಷಗಳ ವಯೋಮಿತಿಗೆ ಸೇರಿದವರಾಗಿರಬೇಕು. ಕುಟುಂಬದ ಒಟ್ಟಾರೆ ವಾರ್ಷಿಕ ಆದಾಯ 4.5 ಲಕ್ಷಗಳನ್ನು ಮೀರಿರಬಾರದು ಹಾಗೂ ಡ್ರೈವಿಂಗ್ ಲೈಸೆನ್ಸ್( DRIVING LICENCE) ಅನ್ನು ಕೂಡ ಹೊಂದಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಯನ್ನು ಹೊಂದಿರಬಾರದು. ಅರ್ಜಿ ಸಲ್ಲಿಸುತ್ತಿರುವವರು ಹಾಗೂ ಅವರ ಕುಟುಂಬದಲ್ಲಿ ಯಾರು ಕೂಡ ಕಳೆದ ಐದು ವರ್ಷಗಳಿಂದ ಸರ್ಕಾರದಿಂದ ಯಾವುದೇ ಯೋಜನೆಗಳ ಫಲಾನುಭವಿಗಳಾಗಿರಬಾರದು.

ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800… –>Maruti Suzuki Alto 800

ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆ ಪತ್ರಗಳು ಏನು ಎಂಬುದನ್ನು ತಿಳಿಯೋಣ ಬನ್ನಿ. ಪ್ರಾಧಿಕಾರದಿಂದ ನೀಡಲಾಗಿರುವಂತಹ ಜಾತಿ ಪ್ರಮಾಣ ಪತ್ರ. ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್(Aadhar card) ಹಾಗೂ ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್ ಬುಕ್ ಹಾಗೂ ವಾಹನವನ್ನು ಖರೀದಿಸುವಂತಹ ಕೊಟೇಶನ್, ಇದೆಲ್ಲದರ ಜೊತೆಗೆ ಸ್ವಯಂ ಘೋಷಣೆ ಪತ್ರ ಕೊಡಬೇಕಾಗಿರುತ್ತದೆ. ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು http://sevasindhu.karnataka.gov.in ಪೋರ್ಟೆಲ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂಬುದಾಗಿ ಕೂಡ ತಿಳಿದು ಬರುತ್ತದೆ.

23/24ನೇ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿರುವಂತಹ ಸ್ವಾವಲಂಬಿ ಸಾರಥಿ ವಾಹನ ಖರೀದಿ ಸಬ್ಸಿಡಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 30 ಎಂಬುದಾಗಿ ಪರಿಗಣಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಸಂಬಂಧ ಪಟ್ಟ ಸಮುದಾಯ ನಿಗಮದ ಅಧಿಕೃತ ಕಚೇರಿಯ ಫೋನ್ ನಂಬರ್ ಗಳಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದ್ದು ನಿಮ್ಮ ವಾಹನ ಖರೀದಿಸುವ ಕನಸನ್ನು ಅತಿ ಶೀಘ್ರದಲ್ಲಿ ನೀವು ನೆರವೇರಿಸಿಕೊಳ್ಳಬಹುದಾಗಿದೆ.

Comments are closed.