ನಿಮ್ಮ ಹಳ್ಳಿಯಲ್ಲಿಯೇ ಜನ ಔಷಧಿ ಕೇಂದ್ರ ಸ್ಥಾಪಿಸಿ- ಉತ್ತಮ ಆದಾಯದ ಜೊತೆ ಬಡವರಿಗೆ ಕೂಡ ಉಪಯೋಗ. ಸರ್ಕಾರನೇ ಎಲ್ಲಾ ಮಾಡುತ್ತೆ.
ನಿಮ್ಮ ಹಳ್ಳಿಯಲ್ಲಿಯೇ ಜನ ಔಷಧಿ ಕೇಂದ್ರ ಸ್ಥಾಪಿಸಿ- ಉತ್ತಮ ಆದಾಯದ ಜೊತೆ ಬಡವರಿಗೆ ಕೂಡ ಉಪಯೋಗ. ಸರ್ಕಾರನೇ ಎಲ್ಲಾ ಮಾಡುತ್ತೆ.
ನಮಸ್ಕಾರ ಸ್ನೇಹಿತರೆ ಜೀವನದ ಪ್ರತಿಯೊಂದು ಅಗತ್ಯತೆಗಳನ್ನು ಪೂರೈಸಿಕೊಳ್ಳಲು ನಾವು ಯಾವುದಾದರೂ ಕೆಲಸ ಅಥವಾ ವ್ಯಾಪಾರವನ್ನು ಮಾಡಲೇಬೇಕು. ಹಣ ಹಾಗೂ ಮನೆಯವರ ಬೆಂಬಲ ಇರುವವರು ಸ್ವಂತ ಉದ್ಯಮವನ್ನು ಅಥವಾ ವ್ಯಾಪಾರವನ್ನು ಪ್ರಾರಂಭಿಸುತ್ತಾರೆ. ಇಲ್ಲವಾದಲ್ಲಿ ಪ್ರತಿಯೊಬ್ಬರೂ ಕೂಡ ತಾವು ಓದಿರುವಂತಹ ವಿದ್ಯೆಗೆ ಇರುವಂತಹ ಕೆಲಸವನ್ನು ಮಾಡಲು ಪ್ರಾರಂಭ ಮಾಡುತ್ತಾರೆ. ಆದರೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಯಾರೆಲ್ಲಾ ಸ್ವಂತವಾದ ಉದ್ಯಮವನ್ನು(own business) ಪ್ರಾರಂಭಿಸುವಂತಹ ಯೋಚನೆ ಮಾಡ್ತಾರೋ ಅವರಿಗೆ ಒಂದೊಳ್ಳೆ ಸಲಹೆಯನ್ನು ನೀಡಲು ಹೊರಟಿದ್ದೇವೆ.
ಹೌದು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ(pradhanmantri Bhartiya Janaushadhi Kendra) ಮೆಡಿಕಲ್ ಶಾಪ್ ಗಳ ಬಗ್ಗೆ ನಾವು ನಿಮಗೆ ಹೇಳಲು ಹೊರಟಿದ್ದು ಇದನ್ನು ನೀವು ಸಾಕಷ್ಟು ಕಡೆಗಳಲ್ಲಿ ನೋಡಿರಬಹುದು. ಸರ್ಕಾರದಿಂದ ಪ್ರೇರಿತವಾಗಿರುವಂತಹ ಈ ಮೆಡಿಕಲ್ ಶಾಪ್ ಗಳಲ್ಲಿ ಜನರಿಗೆ ಸಾಮಾನ್ಯ ಮೆಡಿಕಲ್ ಶಾಪ್ಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಔಷಧಿಗಳನ್ನು ನೀಡುವಂತಹ ಮೆಡಿಕಲ್ ಶಾಪ್ಗಳು ಆಗಿವೆ. ಈ ರೀತಿಯ ಮೆಡಿಕಲ್ ಶಾಪ್ಗಳನ್ನು ನೀವು ಕೂಡ ಪ್ರಾರಂಭಿಸಬಹುದಾಗಿದ್ದು ಯಾವ ರೀತಿ ಪ್ರಾರಂಭಿಸಬಹುದು ಹೇಗೆ ಎತ್ತ ಏನು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಬನ್ನಿ.
ಇದನ್ನು ಕೂಡ ಓದಿ: PUC ಆಗಿದ್ರೆ ಸಾಕು. ಈ ಕೋರ್ಸ್ ಮಾಡಿ ಕೊಳ್ಳಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅವಕಾಶ. ಬೆಲೆ ಮಾತ್ರ ಕಡಿಮೆ. Online Course
ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ
ಸದ್ಯದ ಮಟ್ಟಿಗೆ ಇಡೀ ಭಾರತ ದೇಶದಲ್ಲಿ 9400ಕ್ಕೂ ಅಧಿಕ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಇದೆ. ಸರ್ಕಾರ ಈ ಸಂಖ್ಯೆಯನ್ನು ಹೆಚ್ಚು ಮಾಡುವಂತಹ ಯೋಚನೆಯನ್ನು ಮಾಡಿದೆ ಎಂಬುದಾಗಿ ತಿಳಿದುಬಂದಿದೆ. ಬೇರೆ ಸಾಮಾನ್ಯ ಮೆಡಿಕಲ್ ಶಾಪ್ ಗಳಿಗೆ ಹೋಲಿಸಿದರೆ 50ರಿಂದ 90ರಷ್ಟು ಮದ್ದು ಹಾಗೂ ಮಾತ್ರೆಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ. 1800ಕ್ಕೂ ಹೆಚ್ಚಿನ ಬಗೆಯ ಔಷಧಿಗಳನ್ನು ಕೂಡ ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ.
ಈ ಔಷಧಿ ಕೇಂದ್ರವನ್ನು ಸ್ಥಾಪಿಸುವುದಕ್ಕಿಂತ ಮುಂಚೆ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಅರ್ಜಿಯ ಶುಲ್ಕ 5000 ರೂಪಾಯಿ ಆಗಿರುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ d Pharma ಹಾಗೂ B Pharma ಸರ್ಟಿಫಿಕೇಟ್ಗಳನ್ನು ಕೂಡ ಈ ಔಷಧಿ ಕೇಂದ್ರವನ್ನು ಪ್ರಾರಂಭಿಸುವವರು ಹೊಂದಿರಬೇಕಾಗಿರುತ್ತದೆ. 120 ಚದರ ಅಡಿಯ ಸ್ಥಳಾವಕಾಶವನ್ನು ಕೂಡ ಈ ಔಷಧಿ ಕೇಂದ್ರ ಹೊಂದಿರಬೇಕು ಮಾತ್ರವಲ್ಲದೆ ಇನ್ನೊಂದು ಗುಡ್ ನ್ಯೂಸ್ ಏನಂದರೆ ಸರ್ಕಾರ 5 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಕೂಡ ಇಂಥವರಿಗೆ ನೀಡುತ್ತದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಪ್ರಾರಂಭಿಸುವುದಕ್ಕೆ ಅರ್ಜಿಯನ್ನು ಸಲ್ಲಿಸಲು ನಿಮ್ಮ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಫಾರ್ಮಸಿಸ್ಟ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್, ವಾಸಸ್ಥಳ ಪ್ರಮಾಣ ಪತ್ರ ಕೂಡ ನಿಮ್ಮ ಬಳಿ ಇರಬೇಕಾಗಿರುತ್ತದೆ. janaushdhi.gov.in ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಬೇಕಾಗುತ್ತದೆ ಹಾಗೂ ಅಲ್ಲಿ apply for Central ಆಪ್ಷನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ. ಅಲ್ಲಿ ರಿಜಿಸ್ಟರ್ ನೌ ಅನ್ನೋ ಆಯ್ಕೆ ಮೇಲೆ ಕೂಡ ಕ್ಲಿಕ್ ಮಾಡಬೇಕಾಗಿರುತ್ತದೆ. ಅಲ್ಲಿ ಅಗತ್ಯವಿರುವಂತಹ ದಾಖಲೆಗಳು ಹಾಗೂ ಆಪ್ಷನ್ ಗಳನ್ನು ಕ್ಲಿಕ್ ಮಾಡಿದ ನಂತರ ಐ ಡಿ ಪಾಸ್ವರ್ಡ್ ಜನರೇಟ್ ಮಾಡಿ ಅದನ್ನು ನಮೂದಿಸಿ ನಂತರ ಟರ್ಮ್ ಹಾಗೂ ಕಂಡೀಶನ್ಗಳ ಮೇಲೆ ಒಪ್ಪಿಗೆಯನ್ನು ಸೂಚಿಸುವಂತಹ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ. ಈ ಮೂಲಕ ನೀವು ಕೂಡ ಜನೌಷಧಿ ಕೇಂದ್ರವನ್ನು ಪ್ರಾರಂಭ ಮಾಡಬಹುದಾಗಿದೆ.
Comments are closed.