Car Loan: ಕಾರ್ ಲೋನ್ ಪಡೆಯುವಾಗ ಅಥವಾ ಕಾರ್ ಇದ್ದರೇ, ಈ ಚಿಕ್ಕ ಕೆಲಸ ಮಾಡಿಸರೇ, ಹಣ ನೀವು ಎರಡು ಸೇಫ್.

ಕಾರ್ ಖರೀದಿಸುವುದಕ್ಕಿಂತ ಮುಂಚೆ ಯೋಚಿಸ ಬೇಕಾಗಿರುವ ವಿಚಾರಗಳು: Consider these points before getting Car loan.

Car Loan Tips and tricks: ನಮಸ್ಕಾರ ಸ್ನೇಹಿತರೇ ಫೈನಾನ್ಸ್ ಅಥವಾ ಲೋನ್ ಮೂಲಕ ಕಾರನ್ನು ಖರೀದಿ ಮಾಡುವುದಕ್ಕಿಂತ ಮುಂಚೆ ಸಾಕಷ್ಟು ಜನರು ಮಾಡುವಂತಹ ಸಾಕಷ್ಟು ತಪ್ಪುಗಳಿಂದಾಗಿ ಮುಂದಿನ ದಿನಗಳಲ್ಲಿ ಅವರು ಸಮಸ್ಯೆಗೆ ಸಿಲುಕಿ ಕೊಳ್ಳಬೇಕಾಗುತ್ತದೆ. ನೀವು ಕೂಡ ಕಾರನ್ನು ಖರೀದಿ ಮಾಡುವಂತ ಯೋಚನೆ ಮಾಡಿದರೆ, ಅವರ ರೀತಿಯಲ್ಲಿ ನೀವು ಕೂಡ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳಬೇಡಿ. ಹಾಗಿದ್ರೆ ಬನ್ನಿ ಲೋನ್(car loan tips) ಮೂಲಕ ಕಾರನ್ನು ಖರೀದಿಸುವುದಕ್ಕಿಂತ ಮುಂಚೆ ವಿಚಾರ ಮಾಡಬೇಕಾಗಿರುವ ಕೆಲವೊಂದು ಪ್ರಮುಖ ಅಂಶಗಳು ಯಾವುವು ಎಂಬುದನ್ನು ತಿಳಿಯೋಣ.

ಕಾರ್ ಖರೀದಿಸುವುದಕ್ಕಿಂತ ಮುಂಚೆ ಯೋಚಿಸ ಬೇಕಾಗಿರುವ ವಿಚಾರಗಳು: Consider these points before getting Car loan.

ಆರ್ಥಿಕ ಪರಿಸ್ಥಿತಿಯ ಬಗ್ಗೆ ಅವಲೋಕನ

ನೀವು ನಿಮ್ಮ ಬಜೆಟ್ ಎಷ್ಟು ಎನ್ನುವುದನ್ನು ಕಾರ್ ಖರೀದಿಯ ಮುಂಚೆ ಯೋಚನೆ ಮಾಡಬೇಕಾಗಿರುತ್ತದೆ. ಯಾಕೆಂದರೆ ನಿಮಗೆ ತಿಂಗಳಿಗೆ ಸಿಗುವಂತಹ ಆದಾಯದ ಮೇಲೆ ಕಾರ್ ಖರೀದಿ ಮಾಡುವಂತಹ ಬಜೆಟ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ಮಾತ್ರವಲ್ಲದೆ ಪ್ರತಿ ತಿಂಗಳು ಕಟ್ಟಲು ಬರುವಂತಹ ಕಂತನ್ನು ಕೂಡ ಕಟ್ಟುವ ಸಾಮರ್ಥ್ಯವನ್ನು ಹೊಂದಿರುವಷ್ಟು ಮಾತ್ರ ನೀವು ಕಾರ್ ಫೈನಾನ್ಸ್ ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ.

ಇದನ್ನು ಕೂಡ ಓದಿ: PUC ಆಗಿದ್ರೆ ಸಾಕು. ಈ ಕೋರ್ಸ್ ಮಾಡಿ ಕೊಳ್ಳಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅವಕಾಶ. ಬೆಲೆ ಮಾತ್ರ ಕಡಿಮೆ. Online Course

ಆಫರ್ಗಳ ಹೋಲಿಕೆ ಮಾಡಬೇಕು:

ನೀವು ಯಾರು ಬಳಿಗೆ ಹೋಗುತ್ತೀರೋ ಅವರು ನೀಡುವಂತಹ ಫೈನಾನ್ಸ್ ಆಪ್ಷನ್ ಅನ್ನು ಮೊದಲಿಗೆ ಓಕೆ ಮಾಡುವುದು ಸರಿಯಲ್ಲ. ಬೇರೆ ಬೇರೆ ಡೀಲರ್ ಶಿಪ್ ಗಳ ಬಳಿಯಲ್ಲಿ ಯಾವ ರೀತಿಯಲ್ಲಿ ಆಫರ್ ಸಿಗುತ್ತದೆ ಹಾಗೂ ಯಾವುದು ಬೆಟರ್ ಆಫರ್ ಎನ್ನುವುದನ್ನು ಹೋಲಿಕೆ ಮಾಡಿದ ನಂತರವಷ್ಟೇ ಕಾರನ್ನು ಖರೀದಿ ಮಾಡಬೇಕು. ಯಾಕೆಂದರೆ ಕಾರನ್ನು ಖರೀದಿ ಮಾಡುವ ಮುಂಚೆ ಎಷ್ಟು ಹಣವನ್ನು ಉಳಿತಾಯ ಮಾಡಬಹುದೋ ಅಷ್ಟೊಂದು ಉಳಿತಾಯ ಮಾಡುವುದನ್ನು ನೋಡಬೇಕು.

ಕೇವಲ ತಿಂಗಳಿಗೆ ಕಂತನ್ನು ಕಟ್ಟುವುದನ್ನು ಮಾತ್ರ ನೋಡಬಾರದು:

ಸಾಮಾನ್ಯವಾಗಿ ಕಾರನ್ನು ಲೋನ್ ರೂಪದಲ್ಲಿ ಖರೀದಿ ಮಾಡುವಾಗ ತಿಂಗಳಿಗೆ ನಾವು ಕಟ್ಟಬೇಕಾಗಿರುವುದು ಎಷ್ಟು ಎಂಬುದನ್ನು ಮಾತ್ರ ಪ್ರತಿಯೊಬ್ಬರು ಯೋಚನೆ ಮಾಡುತ್ತಾರೆ ಆದರೆ ಒಟ್ಟಾರೆ ನೀವು ಮಾಡುವಂತಹ ಖರ್ಚನ್ನು ಕೂಡ ಈ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿರುತ್ತದೆ. ನೀವು ಪ್ರತಿ ತಿಂಗಳ ಕಂತನ್ನು ಕಟ್ಟಿ ಮುಗಿಸುವಾಗ ಕೊನೆಯಲ್ಲಿ ನೋಡಿದಾಗ ನೀವು ಎಷ್ಟು ದೊಡ್ಡ ಮಟ್ಟದ ಹಣವನ್ನು ಹೆಚ್ಚಾಗಿ ಕಟ್ಟಿದ್ದೀರಿ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ತಿಳಿದಾಗ ನಿಮಗೆ ಆಶ್ಚರ್ಯ ಆಗುತ್ತದೆ.

ಕ್ರೆಡಿಟ್ ಸ್ಕೋರ್ ಬಗ್ಗೆ ನಿರ್ಲಕ್ಷ:

ಕಾರ್ ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು ನಿಮ್ಮ ಕ್ರೆಡಿಟ್ ಸ್ಕೋರ್(credit score) ಅನ್ನು ಚೆನ್ನಾಗಿರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ ಇಲ್ಲವಾದಲ್ಲಿ ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಸರಿಯಾಗಿಲ್ಲದೆ ಇದ್ದಲ್ಲಿ ಹೆಚ್ಚಿನ ಬಡ್ಡಿ ದರವನ್ನು ಬ್ಯಾಂಕ್ ವಿಧಿಸುತ್ತಾರೆ. ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ರೆ ಬ್ಯಾಂಕ್ ಕಡಿಮೆ ಬಡ್ಡಿದರವನ್ನು ವಿಧಿಸುತ್ತದೆ.

ನಿರ್ಧಾರದಲ್ಲಿ ಎಡವಿ ಬೀಳುವುದು:

ಕಾರ್ ಖರೀದಿ ಮಾಡುವುದು ಪ್ರತಿಯೊಬ್ಬರಿಗೂ ಕೂಡ ಸಂತೋಷವನ್ನು ನೀಡುವಂತಹ ವಿಚಾರ ಹಾಗೂ ಆದಷ್ಟು ಬೇಗ ಈ ಪ್ರಕ್ರಿಯೆ ನಡೆಯಬೇಕು ಎಂಬುದಾಗಿ ಅವರು ಅಂದುಕೊಂಡಿರುತ್ತಾರೆ ಆದರೆ ಅರ್ಜೆಂಟಾಗಿ ಮಾಡುವಂತಹ ಕೆಲಸಗಳು ನಂತರ ನಿಮಗೆ ಸಮಸ್ಯೆಯನ್ನು ನೀಡುತ್ತವೆ ಎಂಬುದನ್ನು ಕೂಡ ಅರ್ಥಮಾಡಿಕೊಳ್ಳಬೇಕು. ಹೀಗಾಗಿ ಯಾವತ್ತೂ ಕೂಡ ಕಾರ್ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಆತುರ ಮಾಡಬಾರದು. ಇವಿಷ್ಟು ಪ್ರಮುಖ ವಿಚಾರಗಳು ನೀವು ಕಾರ್ ಲೋನ್ ಖರೀದಿ ಮಾಡುವ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಬೇಕು ಹಾಗೂ ಅಳವಡಿಸಿಕೊಳ್ಳಬೇಕು.

Earn From Share Market: ಶೇರ್ ಮಾರುಕಟ್ಟೆಯಲ್ಲಿ ಹಣ ಗಳಿಸೋದು ತುಂಬಾ ಸುಲಭ- ಈ ಚಿಕ್ಕ ನಿಯಮ ಪಾಲಿಸಿ ಸಾಕು. ಹಣ ತಾನಾಗಿಯೇ ಬರುತ್ತದೆ

Comments are closed.