Personal Loan: ದೇಶದ ಪ್ರತಿಷ್ಠಿತ ಬ್ಯಾಂಕ್ IDBI ಬ್ಯಾಂಕ್ ನಲ್ಲಿ ಲೋನ್ ಬೇಕೇ? ಆನ್ಲೈನ್ ನಲ್ಲಿ ಅರ್ಜಿ ಹಾಕಿ

More details about IDBI personal bank- Eligibility, documents required and application details explained

Personal Loan: ನಮಸ್ಕಾರ ಸ್ನೇಹಿತರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಖಂಡಿತವಾಗಿ ಇದ್ದೇ ಇರುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು IDBI ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದರ ಬಗ್ಗೆ. ಯಾವ ರೀತಿಯಲ್ಲಿ ಇಲ್ಲಿ ಸುಲಭ ರೂಪದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವಂತಹ ಗ್ರಾಹಕರು IDBI ಬ್ಯಾಂಕ್ ಮೂಲಕ 5 ಲಕ್ಷಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. IDBI ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸುವುದಕ್ಕೆ ನೀವು ರೆಡಿಯಾಗಿದ್ದರೆ ಬನ್ನಿ ಇಲ್ಲಿ ಬೇಕಾಗಿರುವಂತಹ ದಾಖಲೆಗಳು ಹಾಗೂ ಪಾಲಿಸ ಬೇಕಾಗಿರುವಂತಹ ನಿಯಮಗಳ ಬಗ್ಗೆ ಸಂಪೂರ್ಣ ವಿವರವನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿರುತ್ತದೆ.

More details about IDBI personal bank- Eligibility, documents required and application details explained
More details about IDBI personal bank- Eligibility, documents required and application details explained

IDBI ಪರ್ಸನಲ್ ಲೋನ್ – IDBI Personal Loan

ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪರ್ಸನಲ್ ಲೋನ್ ಗೆ ಯಾವುದೇ ರೀತಿಯ ಆಸ್ತಿಯನ್ನು ಅಡ ಇಡುವಂತಹ ಪ್ರಕ್ರಿಯೆಯನ್ನು ಮಾಡುವುದಿಲ್ಲ ಹೀಗಾಗಿ ಇದನ್ನು ಅಸುರಕ್ಷಿತ ಲೋನ್ ಎಂಬುದಾಗಿ ಕರೆಯಲಾಗುತ್ತದೆ. ಇದೇ ಕಾರಣಕ್ಕಾಗಿ IDBI ಬ್ಯಾಂಕ್ ಕೂಡ ಉನ್ನತವಾಗಿರುವಂತಹ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಮಾತ್ರ ಪರ್ಸನಲ್ ಲೋನ್ ನೀಡುತ್ತದೆ. ಪ್ರೊಸೆಸಿಂಗ್ ಶುಲ್ಕದ ಬಗ್ಗೆ ಮಾತನಾಡುವುದಾದರೆ ಒಂದು ಪ್ರತಿಶತ ಅಥವಾ ಹೆಚ್ಚೆಂದರೆ 2500 ರೂಪಾಯಿಗಳವರೆಗೆ ಇರುತ್ತದೆ.

IDBI ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan

  1. ಅರ್ಜಿ ಸಲ್ಲಿಸುವವರು ಮೊದಲಿಗೆ ಭಾರತೀಯ ನಾಗರಿಕರಾಗಿರಬೇಕು.
  2. ಅರ್ಜಿ ಸಲ್ಲಿಸುವವರ ತಿಂಗಳ ಆದಾಯ ಕಡಿಮೆ ಎಂದರು 15,000 ಆಗಿರಬೇಕು.
  3. ಈಗ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಒಂದರಿಂದ ಎರಡು ವರ್ಷಗಳ ಕೆಲಸದ ಅನುಭವ ಇರಬೇಕು ಹಾಗೂ ಒಟ್ಟಾರೆಯಾಗಿ ತಾನು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.
  4. CIBIL Score ಕನಿಷ್ಠ ಪಕ್ಷ 750 ಅಥವಾ ಅದಕ್ಕಿಂತ ಹೆಚ್ಚಿರಬೇಕು.

IDBI ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ಡಾಕ್ಯುಮೆಂಟ್ ಗಳು- Documents required to get Personal Loan

  1. ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್.
  2. ಐಡೆಂಟಿಟಿ ಪ್ರೂಫ್ ರೂಪದಲ್ಲಿ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ ಕಾರ್ಡ್ ಅನ್ನು ನೀಡಬಹುದಾಗಿದೆ.
  3. ಹಿಂದಿನ ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್.
  4. ಎರಡು ವರ್ಷಗಳ ಐಟಿ ರಿಟರ್ನ್ ದಾಖಲೆಗಳು.
  5. ಫಾರ್ಮ್ 16 ಅಥವಾ ಐಟಿಆರ್.
  6. ಪಾಸ್ ಪೋರ್ಟ್ ಸೈಜ್ ಫೋಟೋ ಜೊತೆಗೆ ಗ್ರಾಹಕರ ಜಾಬ್ ಐಡಿ ಕಾರ್ಡ್.

ಇದನ್ನು ಕೂಡ ಓದಿ: Personal Loan: ಸೆಲ್ಫಿಯೇ ಹಾಕಿ ಆಧಾರ್ ತೋರಿಸಿದರೆ ಸಾಕು- ಸಿಗುತ್ತೆ ಎರಡು ಲಕ್ಷ ಲೋನ್. ಗ್ಯಾರಂಟಿ ಕೂಡ ಬೇಡ ಕಣ್ರೀ

IDBI ಬ್ಯಾಂಕ್ ನಲ್ಲಿ ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ- How to apply for Personal Loan

  1. ಮೊದಲಿಗೆ ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಪರ್ಸನಲ್ ಲೋನ್ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು.
  2. ಇಲ್ಲಿ ಲೋನ್ ಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿಗಳು ಕೂಡ ಓಪನ್ ಆಗುತ್ತವೆ ಹಾಗೂ ಎಲ್ಲ ಮಾಹಿತಿಗಳನ್ನು ಓದಿದ ನಂತರ Apply Now ಬಟನ್ ಮೇಲೆ ಕ್ಲಿಕ್ ಮಾಡಬೇಕು.
  3. ಈಗ ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತದೆ ಹಾಗೂ ಒಂದು ವೇಳೆ ನೀವು IDBI ಬ್ಯಾಂಕಿನ ಗ್ರಾಹಕರಾಗಿದ್ರೆ ಹೌದು ಎನ್ನುವಂತಹ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಿಮ್ಮ ಕಸ್ಟಮರ್ ಐಡಿಯಾ ಅಥವಾ ಬ್ಯಾಂಕಿನ ಖಾತೆಯ ಡಿಟೇಲ್ಸ್ ಅನ್ನು ದಾಖಲಿಸಿ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ.
  4. ಬಟನ್ ಅನ್ನು ಕ್ಲಿಕ್ ಮಾಡಿ ಫಾರ್ಮ್ ಕಡೆಗೆ ಹೋಗಬಹುದು. ಒಂದು ವೇಳೆ ನೀವು ಬ್ಯಾಂಕಿನ ಗ್ರಾಹಕರು ಆಗಿಲ್ಲದೆ ಹೋದಲ್ಲಿ ಇಲ್ಲ ಎನ್ನುವಂತಹ ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
  5. ಫಾರ್ಮಿಗೆ ಪ್ರೊಸೀಡ್ ಮಾಡಿದ ನಂತರ ನೀವು ನಿಮ್ಮ ಕೆಲಸದ ಬಗ್ಗೆ ಕೇಳುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ತುಂಬಬೇಕಾಗಿರುತ್ತದೆ. ನಂತರ ಸಬ್ಮಿಟ್ ಆಪ್ಶನ್ ಅನ್ನು ಕ್ಲಿಕ್ ಮಾಡಬೇಕು.
  6. ಇದಾದ ನಂತರ ಕೆಲವೇ ದಿನಗಳಲ್ಲಿ ಬ್ಯಾಂಕಿನ ಅಧಿಕಾರಿಗಳಿಂದ ನಿಮಗೆ ಕರೆ ಬರುತ್ತದೆ ಹಾಗೂ ಸಂಬಂಧ ಪಟ್ಟಂತಹ ದಾಖಲೆಗಳ ಜೊತೆಗೆ ಹತ್ತಿರದ ಬ್ರಾಂಚಿಗೆ ಹೋಗುವಂತೆ ಹೇಳಲಾಗುತ್ತದೆ.
  7. ಇದಾದ ನಂತರ ನಿಮ್ಮ ಪ್ರತಿಯೊಂದು ದಸ್ತಾವೇಜುಗಳನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸಿದ ನಂತರ 24 ಗಂಟೆಯ ಒಳಗಾಗಿ ಹಣವನ್ನು ನಿಮ್ಮ ಖಾತೆಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ.

Explore More details about IDBI Personal Loan

IDBI ಬ್ಯಾಂಕಿನಲ್ಲಿ ಈ ಮೂಲಕ ನೀವು ಪರ್ಸನಲ್ ಲೋನ್ ಅನ್ನು ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.

Comments are closed.