ಉಕ್ರೇನ್ ಹಾಗೂ ರಷ್ಯಾ ನಡುವಣ ಬಿಕ್ಕಟ್ಟಿನಿಂದಾಗಿ ಭಾರತ ಕಲಿತಿರುವ ಪಾಠವೇನು ಗೊತ್ತಾ; ಈ ಕುರಿತಂತೆ ಸೇನಾಮುಖ್ಯಸ್ಥರು ಹೇಳಿದ್ದೇನು ಗೊತ್ತೇ??

ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಇಡೀ ಪ್ರಪಂಚಕ್ಕೆ ಒಂದು ರೀತಿ ಭಯ ತರಿಸಿದೆ ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ದೇಶಗಳಲ್ಲಿ ದೇಶದ ಜನರಲ್ಲಿ, ತಮಗೂ ಉಕ್ರೇನ್ ಥರದ ಪರಿಸ್ಥಿತಿ ಬಂದರೆ ಹೇಗಿರುತ್ತದೆ ಎಂದು ಭಯ ಶುರುವಾಗಿದೆ. ಯಾವ ದೇಶದಲ್ಲಿ ಯಾವ ಸಮಯದಲ್ಲಿ ಯಾರು ಊಹಿಸಲಾಗದಂಥದ್ದು ಏನು ಬೇಕಾದರೂ ಆಗಬಹುದು ಎನ್ನುವ ಸತ್ಯವನ್ನು ಈ ಯುದ್ಧ ತಿಳಿಸುತ್ತಿದೆ. ರಷ್ಯಾ ಉಕ್ರೇನ್ ದೇಶಗಳ ನಡುವೆ ನಡೆಯುತ್ತಿರುವ ಈ ಯುದ್ಧ, ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಇರಬಹುದೇ ಎಂದು ಅನ್ನಿಸುತ್ತಿದೆ.

ಉಕ್ರೇನ್ ರಷ್ಯಾ ನಡುವಿನ ಸಂಘರ್ಷವನ್ನು, ವಿಶ್ವಸಂಸ್ಥೆಗಳೆಲ್ಲವು ಇದ್ದರೂ ಕೂಡ ರಷ್ಯಾ ಮತ್ತು ಉಕ್ರೇನ್ ದೇಶದ ನಡುವೆ ಆಗಿರುವ ತೊಂದರೆಯನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ರಷ್ಯಾ ಉಕ್ರೇನ್ ದೇಶಗಳ ಯುದ್ಧ 13ನೇ ದಿನ ತಲುಪಿದ್ದರು ಸಹ, ಎಷ್ಟೇ ಮಾತುಕತೆ ನಡೆದರು ಸಹ ಈ ಎರಡು ದೇಶಗಳಲ್ಲಿ ಇರುವ ಬಿಕ್ಕಟ್ಟು ಸರಿ ಹೋಗುತ್ತಿಲ್ಲ. ಈ ಎರಡು ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಭಾರತ ದೇಶ ಕೂಡ ಮುಖ್ಯವಾದ ಪಾಠ ಕಲಿತಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ರಾಗಿರುವ ಎಂಎಂ ನವರಣೆ ಅವರು ತಿಳಿಸಿದ್ದಾರೆ. ಹಾಗಿದ್ದರೆ ಭಾರತ ಕಲಿತಿರುವ ಪಾಠ ಏನು? ತಿಳಿಸುತ್ತೇವೆ ನೋಡಿ..

mm navarane9083660661255061710.

ಭಾರತದ ಸೇನಾ ಮುಖ್ಯಸ್ಥರಾದ ಎಂಎಂ ನವರಣೆ ಅವರು ಹೇಳಿರುವ ಪ್ರಕಾರ, ರಷ್ಯಾ ಉಕ್ರೇನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದಿಂದ ಮುಂದೊಂದು ದಿನ ಅಂತಹ ಪರಿಸ್ಥಿತಿ ಭಾರತ ದೇಶಕ್ಕೆ ಎದುರಾದರೆ, ಆ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಭಾರತ ದೇಶ ಕಲಿತಿದೆ.. ನಮ್ಮ ದೇಶದಲ್ಲಿ ಈ ರೀತಿಯ ತೊಂದರೆಯಾದರೆ, ನಮ್ಮದೇ ಆದಂತಹ ಶಸ್ತ್ರಾಸ್ತ್ರಗಳು ಇರಬೇಕು, ಮತ್ತೊಂದು ದೇಶದ ಶಸ್ತ್ರಾಸ್ತ್ರಗಳ ಮೇಲೆ ಅವಲಂಬಿತರಾಗಿರಬಾರದು ಎನ್ನುವುದರ ಅರಿವು ಭಾರತಕ್ಕೆ ಆಗಿದೆ.  ಸುತ್ತ ಮುತ್ತ ಇರುವ ದೇಶಗಳ ಪರಿಸ್ಥಿತಿ ನೋಡಿದರೆ, ನಮ್ಮ ದೇಹಕ್ಕೆ ಯಾವಾಗ ಬೇಕಾದರು ಆ ಥರದ ಪರಿಸ್ಥಿತಿ ಬರಬಹುದು, ಆಗ ಭಾರತ ದೇಶವು ಸರ್ವಸನ್ನದ್ಧವಾಗಿ ಇರಬೇಕು ಎನ್ನುವುದು ಈ ಪರಿಸ್ಥಿತಿಯಿಂದ ತಿಳಿದುಬಂದಿದೆ.. ಎಂದು ಹೇಳಿದ್ದಾರೆ ಭಾರತೀಯ ಸೇನಾ ಮುಖ್ಯಸ್ಥರಾದ ಎಂಎಂ ನವರಣೆ ಅವರು.

Comments are closed.