ದೇಶದ ರಾಜಕಾರಣದಲ್ಲಿ ಮತ್ತೊಂದು ಟ್ವಿಸ್ಟ್, ಪಂಜಾಬ್ ಯಶಸ್ಸಿನ ಬೆನ್ನಲ್ಲೇ, ಟಾರ್ಗೆಟ್ ಬದಲಾಯಿಸಿದ ಕೇಜ್ರಿವಾಲ್. ಮುಂದಿನ ನಡೆಯೇನು ಗೊತ್ತೇ??

ದೇಶದ ರಾಜಕಾರಣದಲ್ಲಿ ಆಮ್ ಆದ್ಮಿ ಪಕ್ಷ ಈಗ ರಾಜಕಾರಣದಲ್ಲಿ ಮುಂದಿದೆ. ಎಲ್ಲರ ಗಮನ ಈಗ ಆಮ್ ಅದ್ಮಿ ಪಕ್ಷದ ಮೇಲೆ ಇದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು ಶುರುವಾಯಿತು. ದೆಹಲಿ ನಂತರ ಈಗ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದೆ. ಪಂಜಾಬ್ ನಲ್ಲಿ ಬಹುಮತಗಳಿಂದ ಗೆದ್ದಿದೆ ಆಮ್ ಆದ್ಮಿ ಪಕ್ಷ. ಈ ಗೆಲುವಿನಿಂದ ಭಾರತದ ಬೇರೆ ರಾಜ್ಯಗಳಲ್ಲಿ ಸಹ ತಮ್ಮ ಪಕ್ಷವನ್ನು ಸ್ಥಾಪಿಸುವ ಪ್ಲಾನ್ ನಲ್ಲಿದೆ. ಆಮ್ ಆದ್ಮಿ ಪಕ್ಷದ ಮುಂದಿನ ನಿಲುವುಗಳ ಬಗ್ಗೆ ಪಕ್ಷದ ಮುಖಂಡ ಮಾತನಾಡಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖಂಡರಾದ ಅಕ್ಷಯ್ ಮರಾಠೇ ಅವರು ತಮ್ಮ ಪಕ್ಷ ಗೆಲುವು ಸಾಧಿಸಿರುವ ಬಗ್ಗೆ ಮಾತನಾಡಿ, ಪಕ್ಷದ ಮುಂದಿನ ನಿಲುವು, ಪ್ಲಾನ್, ಟಾರ್ಗೆಟ್ ಏನು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಆಮ್ ಆದ್ಮಿ ಪಕ್ಷದ ಮುಂದಿನ ಟಾರ್ಗೆಟ್ ಗುಜರಾತ್ ಮತ್ತು ಹಿಮಾಚಲ ಪ್ರದೇಶವಾಗಿದೆ, ಈ ವರ್ಷದ ಅಂತ್ಯದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಪೈಪೋಟಿ ಕೊಡಲಿದೆ ಎಂದು ಅಕ್ಷಯ್ ಮರಾಠೇ ಅವರು ಹೇಳಿದ್ದಾರೆ.

modi akshay3130064301151542892.

ಇಷ್ಟು ಹೇಳಿದ ಬಳಿಕ, ಖಡಾಖಂಡಿತವಾಗಿ ಇಷ್ಟೇ ಸೀಟ್ ಗಳನ್ನು ಗೆಲ್ಲುತ್ತೇವೆ ಎಂದು ಹೇಳಲು ಆಗುವುದಿಲ್ಲ. ಈ ವರ್ಷಾಂತ್ಯದಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆಯುವ ಚುನಾವಣೆ ಕೂಡ ನಮ್ಮ ಟಾರ್ಗೆಟ್ ಆಗಿದೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಸೋಲಿಸಿ ನಾವು ನಿಲ್ಲುತ್ತೇವೆ, ಅಧಿಕಾರಕ್ಕೆ ಬರುತ್ತೇವೆ..ಎಂದು ಬಹಳ ನಂಬಿಕೆಯ ಮಾತುಗಳನ್ನಾಡಿದ್ದಾರೆ. ಭಾರತ ದೇಶದ ಜನರಿಗೆ ಬದಲಾವಣೆ ಬೇಕು, ಜನರ ನಿರೀಕ್ಷೆಯ ಮಟ್ಟಕ್ಕೆ ತಲುಪಲು ಸಾಧ್ಯ ಇರುವುದು ಆಮ್ ಆದ್ಮಿ ಪಕ್ಷಕ್ಕೆ ಮಾತ್ರ, ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷ ಭಾರತ ದೇಶವನ್ನು ಆಳುತ್ತದೆ ಎಂದಿದ್ದಾರೆ ಅಕ್ಷಯ್ ಮರಾಠೇ. ಈ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಗಳ ಮೂಲಕ ತಿಳಿಸಿ..

Comments are closed.