ಯಾರು ಎಷ್ಟೇ ಹೇಳಿದರೂ ಕೇಳದೆ ನಾಯಿಯನ್ನು ಮದುವೆಯಾದ 18 ರ ಬಾಲೆ ಯಾಕೆ ಗೊತ್ತೇ?? ಕಾರಣ ಕೇಳಿದರೆ ನಿಜಕ್ಕೂ ಹೀಗೂ ಇರ್ತಾರ ಅನಿಸುತ್ತದೆ.

ಮದುವೆ ಎನ್ನುವುದು ಒಂದು ಸುಂದರವಾದ ಅನುಬಂಧ. ಪ್ರತಿಯೊಬ್ಬರು ಕೂಡ ತಮ್ಮ ಮದುವೆ ಬಗ್ಗೆ ದೊಡ್ಡ ದೊಡ್ಡ ಕನಸನ್ನು ಕಟ್ಟಿಕೊಂಡಿರುತ್ತಾರೆ. ಇಂತಹ ಹುಡುಗನ ಜೊತೆ, ಹೀಗೆ ಮದುವೆ ಆಗಬೇಕು ಎಂದುಕೊಂಡಿರುತ್ತಾರೆ. ಹುಡುಗ ಸುಂದರವಾಗಿರಬೇಕು, ಒಳ್ಳೆಯ ಕೆಲಸದಲ್ಲಿ ಇರಬೇಕು ಎಂದು ಮದುವೆಗೆ ತಯಾರಿರುವ ಎಲ್ಲಾ ಹುಡುಗಿಯರು ಅಂದುಕೊಳ್ಳುವುದು ಉಂಟು. ಆದರೆ ಭಾರತದ ಜಾರ್ಖಂಡ್ ನಲ್ಲಿ ಒಂದು ವಿಚಿತ್ರವಾದ ಮದುವೆ ನಡೆದಿದ್ದು, 18 ವರ್ಷದ ಹುಡುಗಿ ನಾಯಿಯ ಜೊತೆ ಮದುವೆಯಾಗಿದ್ದಾಳೆ. ಇದರ ಹಿಂದೆ ಒಂದು ಬಲವಾದ ಕಾರಣ ಕೂಡ ಇದೆ.

ಈ ಹುಡುಗಿಯ ಹೆಸರು ಮಂಗಲಿ ಮುಂಡ, ಈಕೆಗೆ ಈಗ 18 ವರ್ಷ, ಜಾರ್ಖಂಡ್ ನಲ್ಲಿ ಒಂದು ಹಳ್ಳಿಯಲ್ಲಿ ವಾಸವಾಗಿದ್ದಾಳೆ. ಇತ್ತೀಚೆಗೆ ಈ ಹುಡುಗಿ ಒಂದು ಬೀದಿ ನಾಯಿಯ ಜೊತೆ ಮದುವೆಯಾಗಿದ್ದಾಳೆ. ನಾಯಿಗಳ ಮೇಲಿನ ಪ್ರೀತಿಯಿಂದ ಈಕೆ ಒಂದು ನಾಯಿಯ ಜೊತೆಗೆ ಮದುವೆಯಾಗಿಲ್ಲ. ಬದಲಾಗಿ ಈ ಮದುವೆಯ ಹಿಂದೆ ಒಂದು ಮುಖ್ಯವಾದ ಕಾರಣವಿದೆ. ಮಂಗಲಿ ಮುಂಡ ಎನ್ನುವ ಈ ಹುಡುಗಿಯ ಜಾತಕದಲ್ಲಿ ಒಂದು ಕಂಟಕ ಇತ್ತು. ಆ ಕಂಟಕ ನಿವಾರಣೆಯಾಗಬೇಕಾದರೆ, ಆಕೆ ಮೊದಲು ನಾಯಿಯ ಜೊತೆ ಮದುವೆಯಾಗಬೇಕು ಎಂದು ಅರ್ಚಕರು ತಿಳಿಸಿದ್ದರು..

mangali8246081056807789363

ಆ ಕಾರಣದಿಂದ ಮಂಗಲಿ ಮದುವೆ ನಿಶ್ಚಯವಾರ ನಂತರ ಜಾತಕದಲ್ಲಿರುವ ದೋಷ ನಿವಾರಣೆ ಮಾಡುವ ಸಲುವಾಗಿ, ಮೊದಲು ಆಕೆಯ ಮದುವೆಯನ್ನು ನಾಯಿಯ ಜೊತೆ ಮಾಡಿ, ನಂತರ ಗ್ರಾಮದ ಹುಡುಗನ ಜೊತೆಗೆ ಮದುವೆ ಮಾಡಿದ್ದಾರೆ. ಈ ರೀತಿಯ ವಿಚಿತ್ರ ಘಟನೆಗಳು ಸಹ ನಮ್ಮಲ್ಲಿ ನಡೆಯುತ್ತದೆ. ನಮ್ಮಲ್ಲಿ ಜಾತಕ ದೋಷ ಇವುಗಳನ್ನು ಜನರು ಹೆಚ್ಚಾಗಿ ನಂಬುವ ಕಾರಣ, ಮಂಗಲಿಯ ಮುಂದಿನ ಜೀವನ ಚೆನ್ನಾಗಿರಬೇಕು, ದೋಷ ನಿವಾರಣೆಯಾಗಬೇಕು ಎಂದು ಆಕೆಯ ಮನೆಯವರು ಮೊದಲು ಬೀದಿ ನಾಯಿಯ ಜೊತೆ ಮದುವೆ ಮಾಡಿಸಿದ್ದಾರೆ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

Comments are closed.