ಹೃದಯದಲ್ಲಿ ಆಗರ್ಭ ಶ್ರೀಮಂತ, ಪ್ರಪಂಚವನ್ನೇ ಗೆಲ್ಲುವ ಚಾಣಕ್ಯತನ ಇದ್ದರೂ ರತನ್ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗದೇ ಜೀವನ ಪೂರ್ತಿ ಒಂಟಿಯಾಗಿರುವುದು ಯಾಕೆ ಗೊತ್ತೇ??

ಭಾರತ ದೇಶ ಕಂಡ ಅತ್ಯಂತ ಯಶಸ್ವಿ ಮನುಷ್ಯರಲ್ಲಿ ಒಬ್ಬರು ರತನ್ ಟಾಟಾ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಕನಸು ಕಾಣುವ ಎಲ್ಲಾ ಯೂತ್ ಗಳಿಗೂ ಸ್ಪೂರ್ತಿ ಇವರು. ರತನ್ ಟಾಟಾ ಅವರು ತಮ್ಮ ಸಂಸ್ಥೆಯಿಂದ ಮಾಡಿರುವ ಕೆಲಸಗಳ ಮೂಲಕ ದೇಶದ ಜನರ ಜೀವನಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಟಾಟಾ ಮೋಟಾರ್ಸ್, ಟಾಟಾ ಇನ್ಷುರೆನ್ಸ್ ಕಂಪನಿ, ಟಾಟಾ ಸ್ಟೀಲ್ಸ್, ಟಾಟಾ ಉಪ್ಪು, ಇದೆಲ್ಲದರ ಮೂಲಕ ಜನರು ಪ್ರತಿನಿತ್ಯದ ಜೀವನಕ್ಕೆ ಬಹಳಷ್ಟು ಸಹಾಯ ಆಗುವ ಹಾಗೆ ಮಾಡಿದ್ದಾರೆ.

ರತನ್ ಟಾಟಾ ಅವರು ಸಾಮಾನ್ಯ ಜನರು ಕೂಡ ಕಾರ್ ನಲ್ಲಿ ಓಡಾಡಬೇಕು ಎನ್ನುವ ಕನಸು ಕಂಡು, 1ಲಕ್ಷ ರೂಪಾಯಿ ಬೆಲೆಗೆ ನ್ಯಾನೋ ಕಾರ್ ಸಿಗುವ ಹಾಗೆ ಮಾಡಿದರು. ಇಂತಹ ರತನ್ ಟಾಟಾ ಅವರು ಇಂದು ದೇಶದ ಮಹಾನ್ ವ್ಯಕ್ತಿಯಾಗಿ ನಿಂತಿದ್ದಾರೆ. ಮೊನ್ನೆ ಗುರುವಾರವಷ್ಟೇ ರತನ್ ಟಾಟಾ ಅವರು 82ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತಮ್ಮ ಹುಟ್ಟುಹಬ್ಬದ ದಿನ 25ನೇ ವರ್ಷದವರಿದ್ದಾಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಯಿತು. ಜೊತೆಗೆ ರತನ್ ಟಾಟಾ ಅವರ ಲವ್ ಸ್ಟೋರಿ ಬಗ್ಗೆ ಸಹ ದೊಡ್ಡದಾಗಿ ಚರ್ಚೆಯಾಯಿತು. ರತನ್ ಟಾಟಾ ಅವರ ಲವ್ ಸ್ಟೋರಿ ಬಗ್ಗೆ ನಿಮಗೆ ಗೊತ್ತಾ?

ratan tata4107826793091607219.

ಇಂದಿನವರೆಗೂ ಮದುವೆಯಾಗದೆ ಒಂಟಿಯಾಗಿ ಜೀವನ ನಡೆಸುತ್ತಿರುವ ಖ್ಯಾತ ಉದ್ಯಮಿ ರತನ್ ಟಾಟಾ ಅವರ ಜೀವನದಲ್ಲಿ  ಸಹ ಪ್ರೀತಿ ಆಗಿತ್ತು. ಒಬ್ಬ ಸುಂದರವಾದ ಹುಡುಗಿಯನ್ನು ರತನ್ ಟಾಟಾ ಅವರು ಇಷ್ಟಪಟ್ಟಿದ್ದರು. ರತನ್ ಟಾಟಾ ಅವರು ಪ್ರೀತಿಯಲ್ಲಿ ಬಿದ್ದಿದ್ದು 25 ವರ್ಷದವರಿದ್ದಾಗ. ಆಗ ರತನ್ ಅವರು ಅಮೆರಿಕಾದಲ್ಲಿದ್ದರು. ಅಲ್ಲಿನ ಒಬ್ಬ ಸುಂದರವಾದ ಹುಡುಗಿಯನ್ನು ಪ್ರೀತಿಸಲು ಶುರು ಮಾಡಿದರು. ಆ ಹುಡುಗಿ ಸಹ ರತನ್ ಟಾಟಾ ಅವರನ್ನು ಪ್ರೀತಿಸಲು ಶುರು ಮಾಡಿದರು. ಆದರೆ ತಾವಿಷ್ಟ ಪಟ್ಟ ಹುಡುಗಿಯನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ. ಇವರಿಬ್ಬರ ಮದುವೆಗೆ ಅಡ್ಡವಾಗಿದ್ದು, ಆಗ ನಡೆಯುತ್ತಿದ್ದ ಭಾರತ ಚೈನಾ ಯುದ್ಧ.

ರತನ್ ಟಾಟಾ ಮತ್ತು ಆಕೆ ಇಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ಮದುವೆ ಆಗುವ ನಿರ್ಧಾರವನ್ನು ಸಹ ಮಾಡಿದ್ದರು. ಆದರೆ ಆ ಸಮಯದಲ್ಲಿ ಭಾರತ ಮತ್ತು ಚೈನಾ ದೇಶದ ನಡುವೆ ಯುದ್ಧ ನಡೆಯುತ್ತಿತ್ತು, ಮದುವೆ ನಂತರ ಭಾರತಕ್ಕೆ ಹೋಗಿ ನೆಲಸೋಣ ಎಂದು ರತನ್ ಟಾಟಾ ಅವರು ಹೇಳಿದರು, ಅದಕ್ಕೆ ಆಕೆ ಒಪ್ಪಲಿಲ್ಲ. ಅಮೆರಿಕಾದಲ್ಲಿ ಮದುವೆಯಾಗಿ ಅಲ್ಲಿಯೇ ನೆಲೆಸೋಣ ಎಂದರು. ಆದರೆ ರತನ್ ಟಾಟಾ ಅವರಿಗೆ ಭಾರತಕ್ಕೆ ಬಂದು ಇಲ್ಲಿನ ಜನರಿಗೆ ಸಹಾಯ ಮಾಡಬೇಕೆಂಬ ಮನಸ್ಸಿನಿಂದ ಪ್ರೀತಿಯನ್ನು ಬಿಟ್ಟು, ದೇಶಕ್ಕಾಗಿ ಭಾರತಕ್ಕೆ ಬಂದರು. ಆ ಹುಡುಗಿ ಅಮೆರಿಕಾದಲ್ಲಿಯೇ ಮತ್ತೊಬ್ಬರ ಜೊತೆ ಮದುವೆಯಾದರು, ಆದರೆ ರತನ್ ಟಾಟಾ ಅವರು ಮಾತ್ರ ಇಂದಿಗೂ ಯಾರನ್ನು ಮದುವೆಯಾಗಿಲ್ಲ. ದೇಶದ ಅದ್ಭುತವಾದ ಉದ್ಯಮಿಯಾಗಿ, ಹಲವು ಜನರ ಸ್ಪೂರ್ತಿಯಾಗಿದ್ದಾರೆ ರತನ್ ಟಾಟಾ.

Comments are closed.