ಲೋನ್ ಕಟ್ಟದೆ ಇರುವುದಕ್ಕೆ ಬೆದರಿಕೆ ಹಾಕುತ್ತಿದ್ದಾರಾ?? ಬ್ಯಾಂಕ್ ನವರು ಬಂದಾಗ ನಿಮ್ಮ ಹಾಕು ತಿಳಿದುಕೊಂಡು ಅವಾಜ್ ಬಿಡಿ, ಮತ್ತೊಮ್ಮೆ ಬರಲ್ಲ. ನಿಮ್ಮ ಹಕ್ಕುಗಳು ಏನು ಗೊತ್ತೇ?

ಜನರು ಅಗತ್ಯ ಸಮಯಗಳಲ್ಲಿ ಬ್ಯಾಂಕ್ ಇಂದ ಲೋನ್ ಪಡೆದಿರುತ್ತಾರೆ. ಆದರೆ ಆ ಸಮಯದಲ್ಲಿ ಹಣಕಾಸಿನ ತೊಂದರೆ ಅಥವಾ ಇನ್ನಿತರ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಲೋನ್ ಹಣ ಪಾವತಿ ಮಾಡಲು ಸಾಧ್ಯವಾಗದೆ ಇರಬಹುದು. ಆಗ ಬ್ಯಾಂಕ್ ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳುವುದನ್ನು ಗಮನಿಸಿರುತ್ತೀರಿ, ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ, ನೀವು ಬ್ಯಾಂಕ್ ನವರನ್ನು ಹೇಗೆ ನಿಭಾಯಿಸಬೇಕು? ಹೇಗೆ ಮಾತನಾಡಬೇಕು? ಈ ವಿಚಾರದಲ್ಲಿ ಸಾಲ ಪಡೆದವರ ಹಕ್ಕು ಏನಾಗಿರುತ್ತದೆ. ಇದನ್ನೆಲ್ಲ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

loan recovery rules legal news kannada 1

ಬ್ಯಾಂಕ್ ನಲ್ಲಿ ಸಾಲ ಪಡೆದವರು ಹಣ ಪಾವತಿ ಮಾಡದೆ ಹೋದರೆ, ರಿಕವರಿ ಏಜೆನ್ಟ್ ಗಳ ಮೂಲಕ ಬ್ಯಾಂಕ್ ಸಾಲ ವಸೂಲಿ ಮಾಡಲು ಕಳುಹಿಸುತ್ತದೆ. ರಿಕವರಿ ಏಜೆನ್ಟ್ ಗಳು ನಿಮ್ಮ ಜೊತೆಗೆ ಅಸಭ್ಯವಾಗಿ ವರ್ತಿಸುವ ಹಾಗಿಲ್ಲ, ಅವರು ಸಾಲಗಾರರ ಮನೆಗೆ ಬರಬೇಕಾಗಿರುವುದು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ಒಳಗೆ ಮಾತ್ರ. ಹಾಗೆಯೇ, ಅನುಚಿತವಾಗಿ ವರ್ತನೆ ಮಾಡಿದರೆ ನೀವು ಆ ಏಜೆನ್ಟ್ ವಿರುದ್ಧ ಬ್ಯಾಂಕ್ ಗೆ ದೂರು ಕೊಡಬಹುದು. ಸಾಲದ ಹಣ ವಾಪಸ್ ಪಡೆಯಲು ಅವರು ನಿಮಗೆ ಸೂಚನೆ ಕೊಡದೆ, ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಓದಿ.. ರಾಜ್ ಬಿ ಶೆಟ್ಟಿ ರವರ ಮುಂದಿನ ಸಿನೆಮಾಗೆ ಆಯ್ಕೆಯಾದ ಕಿರುತೆರೆ ಲೋಕದ ಅಪ್ಸರೆ ಯಾರು ಗೊತ್ತೇ?? ಇನ್ನೊಂದು ಪಕ್ಕ ಯಶಸ್ಸಿನ ಸಿನೆಮಾಗೆ ನಟಿ ಯಾರು ಗೊತ್ತೇ?

ಸಾಲಗಾರ 90ದಿನಗಳ ವರೆಗು ಸಾಲ ಪಾವತಿ ಮಾಡದೆ ಇದ್ದರೆ, ಅದನ್ನು ಅನುತ್ಪಾದಕ ಆಸ್ತಿ ಎಂದು ಪರಿಗಣಿಸಿ ನಂತರ 60 ದಿನಗಳ ನೋಟೀಸ್ ನೀಡಬೇಕು. ಈ ನೋಟೀಸ್ ನೀಡಿದ ಸಮಯದಲ್ಲೂ ಸಾಲಗಾರರು ಹಣವನ್ನು ಪಾವತಿ ಮಾಡದೆ ಹೋದರೆ, ಆಗ ಆಸ್ತಿ ವಶಪಡಿಸಿಕೊಳ್ಳಬಹುದು. ಹರಾಜಿಗೆ ಹಾಕುವ 30 ದಿನಕ್ಕಿಂತ ಮೊದಲು, ಸಾರ್ವಜನಿಕವಾಗಿ ಮತ್ತೊಂದು ನೋಟಿಸ್ ನೀಡಬೇಕು. ಸಾಲ ಪಡೆದಿರುವವರು ತಮ್ಮ ಆಸ್ತಿ ಹರಾಜು ಮಾಡುವುದಕ್ಕಿಂತ ಮೊದಲು, ಆಸ್ತಿ ಮೌಲ್ಯ ಎಷ್ಟು ಎಂದು ತಿಳಿಸಬೇಕು..

ಅದು ಮೀಸಲು ಬೆಲೆ, ಹರಾಜು ನಡೆಯುವ ದಿನ, ಸಮಯ ಎಲ್ಲವನ್ನು ತೋರಿಸುತ್ತದೆ. ಹರಾಜು ನಡೆದ ನಂತರ, ಸಾಲಗಾರರ ಹಣ ಮರುಪಾವತಿ ಆದ ನಂತರ, ಇನ್ನುಳಿದ ಹಣವನ್ನು ಪಡೆಯಲು ಅವರಿಗೆ ಎಲ್ಲಾ ಹಕ್ಕು ಇರುತ್ತದೆ. ಒಂದು ವೇಳೆ ನೀವು ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರೆ, ಇಂದು ತಿಳಿಸಿರುವ ಎಲ್ಲಾ ವಿಚಾರಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಂಡು, ಬ್ಯಾಂಕ್ ನವರು ತೊಂದರೆ ಕೊಟ್ಟರೆ, ಈ ರೀತಿಯ ನಿಯಮಗಳು ಇದೆ ಎಂದು ನೀವು ಅವರಿಗೆ ತಿಳಿಸಬಹುದು. ಇದನ್ನು ಓದಿ..ಡೈವೋರ್ಸ್ ಕೊಡುವಾಗ ಗಂಡ ಬಿಕ್ಷುಕನಾಗಿದ್ರೂ, ಹೆಂಡತಿಗಾಗಿ ಏನೆಲ್ಲಾ ಮಾಡಬೇಕು ಗೊತ್ತೇ? ಕಾನೂನು ಏನು ಹೇಳುತ್ತಿದೆ ಗೊತ್ತೇ?

Comments are closed.