IRCTC Package: ಕಡಿಮೆ ಹಣಕ್ಕೆ 12 ದಿನಗಳ ಟ್ರಿಪ್ ಘೋಷಣೆ ಮಾಡಿದ IRCTC ( ರೈಲ್ವೆ) ಇನ್ನು ವಿಶೇಷ ತೀರ್ಥಯಾತ್ರೆಯಲ್ಲಿ ಎಲ್ಲೆಲ್ಲಿ ಟ್ರಿಪ್ ಹೋಗಬಹುದು ಗೊತ್ತಾ??

IRCTC Package: ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (IRCTC) ಆಗಾಗ ಜನರಿಗೆ ಉಪಯುಕ್ತವಾಗುವಂತ ಪ್ಯಾಕೇಜ್ ಗಳನ್ನು ನೀಡುತ್ತಾ ಇರುತ್ತದೆ. ಇದೀಗ ಜನರಿಗೆ ಉಪಯೋಗ ಆಗುವ 12 ದಿನಗಳ ವಿಶೇಷವಾದ ತೀರ್ಥಯಾತ್ರೆಯ ಪ್ಯಾಕೇಜ್ ನೀಡಲಾಗಿದ್ದು, ಈ ಹೊಸ ಪ್ಯಾಕೇಜ್ ಬಗ್ಗೆ ಐ.ಆರ್.ಸಿ.ಟಿ. ಸಿ ವ್ಯವಸ್ಥಾಪಕರಾದ ನಿರ್ದೇಶಕ ಆಗಿರುವ ಕೆ.ರವಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.

79285c73 3cbb 4887 85bb 8c5f58df3bd8 IRCTC Package:

ಹಾಗೆಯೇ ಸಹಾಯಕ ಪ್ರಧಾನ ವ್ಯವಸ್ಥಾಪಕ ಆಗಿರುವ ಎಸ್.ಸುಬ್ರಮಣಿ ಅವರು ಮಾಹಿತಿ ನೀಡಿದ್ದು, ಈ ವಿಶೇಷ ತೀರ್ಥಯಾತ್ರೆಯ ಪ್ಯಾಕೇಜ್ ಗಾಗಿ ಭಾರತ್ ಗೌರವ್ ಎನ್ನುವ ಟೂರಿಸಮ್ ಟ್ರೈನ್ ಅನ್ನು ಪರಿಚಯ ಮಾಡಲಾಗುತ್ತಿದೆ..ಈ ರೈಲಿನಲ್ಲಿ ಎಸಿ ಕೋಚ್ ಗಳಿವೆ ಹಾಗೆಯೇ 752 ಜನರು ಕುಳಿತುಕೊಳ್ಳಬಹುದಾದ ಸ್ಲೀಪಿಂಗ್ ಬರ್ತ್ ಗಳಿವೆ. ಒಟ್ಟಾರೆಯಾಗಿ 7 ಕೋಚ್ ಗಳಿವೆ. ದಕ್ಷಿಣ ಕಡೆಯ ರೈಲ್ವೆ ಇಂದ ಈ ವಿಶೇಷವಾದ ತೀರ್ಥಯಾತ್ರೆಯ ಟ್ರಿಪ್ ಅನ್ನು ಆಯೋಜಿಸಲಾಗಿದೆ. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?

ಈ ತೀರ್ಥಯಾತ್ರೆ ಮೇ 4ರಂದು ಶುರುವಾಗಲಿದ್ದು, 12 ದಿನಗಳ ಕಾಲ ನಡೆಯಲಿದೆ, ಪುಣೆ, ಕೋನಾರ್ಕ್, ಕೊಲ್ಕತ್ತಾ, ಗಯಾ, ವಾರಣಾಸಿ, ಅಯೋಧಿ, ಅಲಹಾಬಾದ್, ಹಾಗೂ ಬೇರೆ ಸ್ಥಳಗಳಿಗೂ ಈ ಯಾತ್ರೆಯಲ್ಲಿ ಹೋಗಬಹುದು. ಹಾಗೆಯೇ ಈ ಟ್ರಿಪ್ ನಲ್ಲಿ, ಉಳಿದುಕೊಳ್ಳುವ ವ್ಯವಸ್ಥೆ, ಅಕ್ಕಪಕ್ಕದ ಜಾಗದ ಪ್ರವಾಸ, ಊಟೋಪಚಾರ, ಆಸ್ಪತ್ರೆಯ ಸಹಾಯ, ಟೂರ್ ಗೈಡ್, ಸೆಕ್ಯೂರಿಟಿ ಎಲ್ಲಾ ಸೌಲಭ್ಯ ಕೂಡ ಇದೆ. ಈ 12 ದಿನಗಳ ಟ್ರಿಪ್ ಗೆ ಶುಲ್ಕ ಎಷ್ಟು ಎಂದು ನೋಡುವುದಾದರೆ, ಎಸಿ ಕೋಚ್ ನಲ್ಲಿ ಪ್ರಯಾಣ ಮಾಡಲು ₹35,651 ರೂಪಾಯಿಗಳು..

ನಾನ್ ಎಸಿ ಕೋಚ್ ಮಲ್ಲಿ ಪ್ರಯಾಣಿಸಲು ₹20,367 ರೂಪಾಯಿಗಳು. ಈ ಟ್ರಿಪ್ ನಲ್ಲಿ ಪಾಲ್ಗೊಳ್ಳಲು www.irctctourism.com ವೆಬ್ಸೈಟ್ ಗೆ ಭೇಟಿ ನೀಡಿ, ಅಥವಾ ಚೆನ್ನೈ, ಕೊಯಮತ್ತೂರು, ಮಧುರೈ, ತಿರುಚಿ ಇಲ್ಲಿನ ರೈಲ್ವೆ ಸ್ಟೇಶನ್ ಗಳಲ್ಲಿ ಟಿಕೆಟ್ ಬುಕ್ ಮಾಡಬಹುದು. ಈ ಟ್ರಿಪ್ ಕೇರಳದ ಕೊಚುವೇಲಿ ರೈಲ್ವೆ ಸ್ಟೇಶನ್ ಇಂದ ಶುರುವಾಗುತ್ತದೆ, ಅಲ್ಲಿಂದ ತೆಂಕಶಿ, ರಾಜಪಾಳ್ಯಂ, ಶಿವಕಾಶಿ, ವಿರುಧುನಗರ, ಮಧುರೈ, ದಿಂಡಿಗಲ್, ತಿರುಚ್ಚಿ, ತಂಜಾವೂರು, ಮೈಲಾಡುತುರೈ, ಚಿದಂಬರಂ, ವಿಲ್ಲುಪುರಂ, ಚೆಂಗಲ್ಪಟ್ಟು, ತಾಂಬರಂ ಮತ್ತು ಚೆನ್ನೈ ಎಗ್ಮೋರ್‌ ಸ್ಟೇಶನ್ ಗಳಲ್ಲಿ ಟಿಕೆಟ್ ಬುಕ್ ಮಾಡಿರುವವರು ಟ್ರೈನ್ ಹತ್ತಬಹುದು. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.

Comments are closed.