Alia Bhat: ಮದುವೆಯಾದ 1 ನೇ ವರ್ಷದ ವಾರ್ಷಿಕೋತ್ಸವಕ್ಕೆ ಮತ್ತೊಂದು ಭರ್ಕಾರಿ ಗಿಫ್ಟ್ ಕೊಟ್ಟ ರಣಬೀರ್. ಏನೆಂದು ತಿಳಿದರೆ ಕುಣಿದು ಡಾನ್ಸ್ ಮಾಡ್ತೀರಾ. ಬೆಲೆ ಎಷ್ಟು ಲಕ್ಷ ಗೊತ್ತೆ?
Alia Bhat: ಬಾಲಿವುಡ್ (Bollywood) ನ ಕ್ಯೂಟ್ ಜೋಡಿಯಾದ ನಟ ರಣಬೀರ್ ಕಪೂರ್ (Ranbir Kapoor) ಹಾಗೂ ನಟಿ ಆಲಿಯಾ ಭಟ್ (Alia Bhatt) ಏಪ್ರಿಲ್ 14ರಂದು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಜೋಡಿ ಕಳೆದ ವರ್ಷ ಕೆಜಿಎಫ್2 ಸಿನಿಮಾ ತೆರೆಕಂಡ ದಿನವೇ ಮದುವೆಯಾದರು. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ ಇದೀಗ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ದಿನ, ಮಾಧ್ಯಮದ ಕಣ್ಣಿಗೆ ಬಿದ್ದಿದ್ದಾರೆ.

ಹಾಗೆಯೇ ರಣಬೀರ್ ಕಪೂರ್ ಅವರು ಪತ್ನಿ ಆಲಿಯಾ ಭಟ್ ಅವರಿಗೆ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದುಬಾರಿ ಬೆಲೆಯ ಉಡುಗೊರೆಯೊಂದನ್ನು ನೀಡಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಈ ಜೋಡಿ ಕೆಲ ವರ್ಷಗಳ ಕಾಲ ಪ್ರೀತಿಸಿ, ಕಳೆದ ವರ್ಷ ಕುಟುಂಬದವರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದರು.. ಇದನ್ನು ಓದಿ..Tirupati: ನಟ ಚೇತನ್ ರವರಿಗೆ ತಿರುಪತಿ ದೇವಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆ, ಅಸಲಿಗೆ ನಿಜವಾಗಲೂ ನಡೆದದ್ದು ಏನು ಗೊತ್ತೇ??
ಮದುವೆಯಾಗಿ ಕೆಲವೇ ತಿಂಗಳಿಗೆ ಆಲಿಯಾ ಭಟ್ ಅವರು ಗರ್ಭಿಣಿ ಆಗಿದ್ದಾರೆ ಎನ್ನುವ ವಿಷಯ ಬಹಿರಂಗಪಡಿಸಿದರು. ಆಲಿಯಾ ಅವರು ಹೆಣ್ಣು ಮಗುವಿಗೆ ಜನ್ಮಕೊಟ್ಟಿದ್ದು, ರಾಹಾ ಎಂದು ಹೆಸರು ಇಟ್ಟಿದ್ದಾರೆ. ಮದುವೆ ವಾರ್ಷಿಕೋತ್ಸವದ ದಿನಕ್ಕಿಂತ ಮೊದಲು ರಣಬೀರ್ ಕಪೂರ್ ಅವರು, ಏರ್ಪೋರ್ಟ್ ನಲ್ಲಿ ಶೆನೆಲ್ ಹ್ಯಾಂಡ್ ಬ್ಯಾಗ್ ಹಿಡಿದು ಕಾಣಿಸಿಕೊಂಡಿದ್ದರು. ಅದು ಆಲಿಯಾ ಅವರಿಗಾಗಿಯೇ ಖರೀದಿ ಮಾಡಿರುವ ಹ್ಯಾಂಡ್ ಬ್ಯಾಗ್ ಎನ್ನಲಾಗಿತ್ತು.
ತಮ್ಮ ವಿವಾಹ ವಾರ್ಷಿಕೋತ್ಸವದ ದಿನ ಈ ಜೋಡಿ ಬಂದ್ರಾದಲ್ಲಿ ಹೊಸದಾಗಿ ಕಟ್ಟಿಸುತ್ತಿರುವ ಮನೆಯನ್ನು ನೋಡಲು ಭೇಟಿ ನೀಡಿದಾಗ, ಆಲಿಯಾ ಭಟ್ ಅವರು ಗುಲಾಬಿ ಬಣ್ಣದ ಶೆನೆಲ್ ಬ್ಯಾಗ್ ಹಿಡಿದು ಕಾಣಿಸಿಕೊಂಡಿದ್ದಾರೆ, ಇದು ಗೋಲ್ಡ್ ಟೋನ್ ಹಾಗೂ ಮೆಟಾಲಿಕ್ ಫಿನಿಶಿಂಗ್ ಇರುವ ಬ್ಯಾಗ್ ಆಗಿದ್ದು, ಈ ಬ್ಯಾಗ್ ನ ಬೆಲೆ ಬರೋಬ್ಬರಿ $12,250 ಡಾಲರ್ ಆಗಿದೆ. ಭಾರತದ ಕರೆನ್ಸಿಯಲ್ಲಿ ಇದು ಬರೋಬ್ಬರಿ ₹10 ಲಕ್ಷ ರೂಪಾಯಿ ಆಗಿದ್ದು, ಇಷ್ಟು ದುಬಾರಿ ಬೆಲೆಯ ಹ್ಯಾಂಡ್ ಬ್ಯಾಗ್ ಅನ್ನು ಆಲಿಯಾ ಭಟ್ ಅವರಿಗೆ ನೀಡಿದ್ದಾರೆ ನಟ ರಣಬೀರ್ ಕಪೂರ್. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.
Comments are closed.