Petrol Bunk: ಪೆಟ್ರೋಲ್ ಬಂಕ್ ಗಳಲ್ಲಿ ಈ ಐದು ಉಚಿತ ಸೇವೆಗಳನ್ನು ಒದಗಿಸಲೇಬೇಕು: ಇದು ಅಧಿಕೃತ ಆದೇಶ. ನೀವು ಏನೆಲ್ಲಾ ಲಾಭ ಪಡೆಯಬಹುದು ಗೊತ್ತೆ?
Petrol Bunk: ನಮ್ಮ ದೇಶದಲ್ಲಿ ಸರ್ಕಾರ ಜನರಿಗಾಗಿ ಕೆಲವು ಉಚಿತ ಸೇವೆಗಳನ್ನು ತಂದಿದೆ. ಆದರೆ ಆ ಎಲ್ಲಾ ಸೇವೆಗಳು ಕೂಡ ಜನರನ್ನು ಸರಿಯಾಗಿ ತಲುಪುತ್ತಿಲ್ಲ. ಸರ್ಕಾರಿ ಆಸ್ಪತ್ರೆ, ಶಾಲೆಗಳು ಇಲ್ಲೆಲ್ಲಾ ಉಚಿತ ವ್ಯವಸ್ಥೆಗಳು ಹೇಗಿದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಹೀಗಿರುವಾಗ ನಮ್ಮ ದೇಶದಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಆru ಉಚಿತ ಸೇವೆಗಳನ್ನು ಜನರಿಗಾಗಿ ನೀಡಬೇಕು ಎನ್ನುವ ವಿಷಯ ನಿಮಗೆ ಗೊತ್ತಿದೆಯೇ? ಒಂದು ವೇಳೆ ಪೆಟ್ರೋಲ್ ಬಂಕ್ ನಲ್ಲಿ ಈ ಸೇವೆಗಳನ್ನು ನೀಡುತ್ತಿಲ್ಲ ಎಂದಾದರೆ ನೀವು ದೂರು ನೀಡಬಹುದು, ಪೆಟ್ರೋಲ್ ಬಂಕ್ ತೆರೆಯಲು ಸರ್ಕಾರ ಅನುಮತಿ ಕೊಡುವುದೇ, ಈ ಸೇವೆಗಳನ್ನೆಲ್ಲ ಉಚಿತವಾಗಿ ಕೊಡುವುದಾಗಿ ಒಪ್ಪಂದ ಮಾಡಿಕೊಂಡಾಗ ಮಾತ್ರ. ಹಾಗಿದ್ರೆ ಆ ಉಚಿತ ಸೇವೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

ಉಚಿತ ನೀರಿನ ಸೌಲಭ್ಯ :- ಪೆಟ್ರೋಲ್ ಬಂಕ್ ಗಳಲ್ಲಿ ಉಚಿತವಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಇದು ಮಾಲೀಕರ ಕರ್ತವ್ಯ ಆಗಿದೆ, ಪೆಟ್ರೋಲ್ ಬಂಕ್ ನಲ್ಲಿ ನೀರಿನ ಸಂಪರ್ಕ ಇರಬೇಕು. ಒಂದು ವೇಳೆ ಇಲ್ಲದೆ ಹೋದರೆ, ನೀವು ಪೆಟ್ರೋಲ್ ಬಂಕ್ ಮಾಲೀಕರ ಮೇಲೆ ದೂರು ಕೊಡಬಹುದು.
ಉಚಿತ ಟಾಯ್ಲೆಟ್ ಸೌಲಭ್ಯ :- ಪ್ರತಿ ಪೆಟ್ರೋಲ್ ಬಂಕ್ ನಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಟಾಯ್ಲೆಟ್ ಸೌಲಭ್ಯ ಇರಬೇಕು. ಪೆಟ್ರೋಲ್ ಗಾಗಿ ನಾವು ಕೊಡುವ ಹಣದಲ್ಲಿ ಪ್ರತಿ ಲೀಟರ್ ಗೆ 4 ರಿಂದ 8 ಪೈಸೆ ಶೌಚಾಲಯ ನಿರ್ವಹಣೆಗಾಗಿ ಸರ್ಕಾರ ಪೆಟ್ರೋಲ್ ಬಂಕ್ ಮಾಲೀಕರಿಗೆ ಕೊಡುತ್ತದೆ ಎನ್ನುವ ವಿಷಯ ಹಲವು ಜನರಿಗೆ ಗೊತ್ತಿಲ್ಲ..
ಕ್ವಾಲಿಟಿ ತಿಳಿಯುವ ಹಕ್ಕು :- ಪೆಟ್ರೋಲ್ ಬಂಕ್ ಗಳಲ್ಲಿ ಬಹಳಷ್ಟು ಜನರು ಕಾಣುವ ಸಮಸ್ಯೆ, ಪೆಟ್ರೋಲ್ ಡೀಸೆಲ್ ಕಲಬೆರಕೆ. ಈ ಕುರಿತಾಗಿ ಸಾಕಷ್ಟು ದೂರುಗಳು ಬರುತ್ತವೆ. ಹಾಗಾಗಿ ಪ್ರತಿಯೊಬ್ಬ ಗ್ರಾಹಕನಿಗೂ ಪೆಟ್ರೋಲ್ ಡೀಸೆಲ್ ಕ್ವಾಲಿಟಿ ಹೇಗಿದೆ ಎಂದು ತಿಳಿದುಕೊಳ್ಳುವ ಹಕ್ಕು ಇರುತ್ತದೆ.
ಉಚಿತ ಏರ್ ಸೇವೆ :- ಪೆಟ್ರೋಲ್ ಬಂಕ್ ಗೆ ಬರುವ ದ್ವಿಚಕ್ರ , ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಉಚಿತವಾಗಿ ಏರ್ ಹಾಕಿಕೊಡಬೇಕು. ಆದರೆ ಹಲವು ಕಡೆ, ಒಂದು ಟಯರ್ ಗೆ 5 ರೂಪಾಯಿ ಚಾರ್ಜ್ ಮಾಡುತ್ತಾರೆ. ಇದು ಫ್ರೀ ಸರ್ವಿಸ್ ಎನ್ನುವುದು ನಿಮಗೆ ತಿಳಿದಿರಲಿ.
ಉಚಿತ ಪ್ರಥಮ ಚಿಕಿತ್ಸೆ :- ಪೆಟ್ರೋಲ್ ಬಂಕ್ ನಲ್ಲಿ ಅನಿರೀಕ್ಷಿತವಾಗಿ ಯಾವುದಾದರೂ ಅಪಘಾತ ಸಂಭವಿಸಿದರೆ, ಅದರಿಂದ ಯಾರಿಗಾದರೂ ಗಾಯವಾದರೆ, ಅಲ್ಲಿಯೇ ಪ್ರಥಮ ಚಿಕಿತ್ಸೆ ಕೊಡಬೇಕು. ಇದಕ್ಕಾಗಿ 8 ಫಸ್ಟ್ ಏಡ್ ಕಿಟ್ ಗಳು ಪೆಟ್ರೋಲ್ ಬಂಕ್ ನಲ್ಲಿ ಇರಬೇಕು.
ಉಚಿತ ಫೋನ್ ಸೇವೆ :- ಪೆಟ್ರೋಲ್ ಬಂಕ್ ಗೆ ಬರುವ ಗ್ರಾಹಕರಿಗೆ ಫ್ರೀಯಾಗಿ ಫೋನ್ ಸೇವೆ ಕೊಡಬೇಕು, ಒಂದು ವೇಳೆ ಎಮರ್ಜೆನ್ಸಿ ಇದ್ದರೆ, ಕರೆ ಮಾಡುವುದಕ್ಕೆ ಉಚಿತ ಫೋನ್ ಸೇವೆ ಕೊಡಬೇಕು.
ಈ ಸೇವೆಗಳು ನಿಮಗೆ ಪೆಟ್ರೋಲ್ ಬಂಕ್ ನಲ್ಲಿ ಸಿಗದೆ ಹೋದರೆ, ನೀವು ದೂರು ಕೊಡಬಹುದು.
Comments are closed.