Horoscope: ಕಷ್ಟ ಅನುಭವಿಸುತ್ತಿರುವ ಈ ರಾಶಿಗಳಿಗೆ ಖುಷಿ ನೀಡಲು ತಾನೇ ಮುಂದೆ ಬಂದ ಸೂರ್ಯ ದೇವ: ಈ ರಾಶಿಗಳು ಮುಟ್ಟಿದೆಲ್ಲವು ಚಿನ್ನ. ಯಾವ ರಾಶಿಗಳಿಗೆ ಗೊತ್ತೇ??
Horoscope: ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ರಾಜ ಎಂದು ಕರೆಯುವ ಸೂರ್ಯಗ್ರಹವು ಈ ತಿಂಗಳು ಸ್ಥಾನ ಬದಲಾವಣೆ ಮಾಡಿ ಮೇಷ ರಾಶಿಗೆ ಪ್ರವೇಶ ಮಾಡಿದೆ, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರುತ್ತದೆ. ಅದರಲ್ಲೂ ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು ಆ ರಾಶಿಗಳು ಯಾವುವು? ಅವುಗಳ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂದು ತಿಳಿಸಿಕೊಡುತ್ತೇವೆ ನೋಡಿ..

ಮೇಷ ರಾಶಿ :- ಸೂರ್ಯನ ಸಂಕ್ರಮಣ ಈ ರಾಶಿಯವರಿಗೆ ಲಾಭ ತರುತ್ತದೆ. ಮೇಷ ರಾಶಿಯಲ್ಲಿ ಈಗಾಗಲೇ ಬುಧ ಇದ್ದು, ಬುಧಾದಿತ್ಯ ಯೋಗದಿಂದ ಈ ರಾಶಿಯವರಿಗೆ ಶುಭಫಲ ಸಿಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿ ನಿಮಗೆ ಹೆಚ್ಚು ಲಾಭವಾಗುತ್ತದೆ. ಇದರಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಪ್ರೀತಿ, ಪ್ರೇಮ ಹಾಗೂ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.
ಮಿಥುನ ರಾಶಿ :- ಈ ರಾಶಿಯವರಿಗೆ ಸೂರ್ಯ ಸಂಚಾರದಿಂದ ಒಳ್ಳೆಯ ಫಲ ಸಿಗುತ್ತದೆ, ಅದೃಷ್ಟ ಸಾಥ್ ನೀಡುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ವಿಶೇಷ ಲಾಭ ಸಿಗುತ್ತದೆ. ನಿಮಗೆ ಹೊಸ ಅವಕಾಶಗಳು ಸಿಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ. ವಿದೇಶಕ್ಕೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ :- ಇವರಿಗೆ ಉದ್ಯೋಗದಲ್ಲಿ ಏಳಿಗೆ ಹಾಗೂ ಶುಭವಾಗುತ್ತದೆ. ಉತ್ತಮ ಅವಕಾಶಗಳು ಸಿಗುತ್ತದೆ, ಇದರಿಂದ ಮುಂದಕ್ಕೆ ಲಾಭ ಪಡೆಯುತ್ತೀರಿ. ಬೇರೆ ದೇಶದಲ್ಲಿ ಓದಬೇಕು ಕೆಲಸ ಮಾಡಬೇಕು ಎಂದುಕೊಂಡಿರುವವರ ಕನಸು ಈಡೇರುತ್ತದೆ. ಮನೆಯಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಲವ್ ಲೈಫ್ ನಲ್ಲಿ ಸಂತೋಷವಾಗಿರುತ್ತೀರಿ.
ಸಿಂಹ ರಾಶಿ :- ಈ ರಾಶಿಯ ಅಧಿಪತಿ ಸೂರ್ಯ, ಹಾಗಾಗಿ ಇವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭ, ಕೆಲಸದಲ್ಲಿ ಮತ್ತು ಬ್ಯುಸಿನೆಸ್ ನಲ್ಲಿ ಏಳಿಗೆ ಎಲ್ಲವೂ ಸಿಗುತ್ತದೆ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ತಿಯಾಗುತ್ತದೆ. ಕಷ್ಟಗಳು ಕಳೆಯುತ್ತದೆ, ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚನೆ ಮಾಡುವುದು ಒಳ್ಳೆಯದು.

ವೃಶ್ಚಿಕ ರಾಶಿ :- ಇವರಿಗೆ ಸೂರ್ಯನ ಸಂಚಾರ ಒಳ್ಳೆಯ ಫಲ ತಂದುಕೊಡುತ್ತದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಆದಾಯಕ್ಕೆ ಹೊಸ ಮೂಲ ಸೃಷ್ಟಿಯಾಗುತ್ತದೆ. ಲವ್ ಲೈಫ್ ಚೆನ್ನಾಗಿರುತ್ತದೆ.
Comments are closed.