Sai Dharam Tej: ವಿಚ್ಚೇದನ ಪಡೆದಿರುವ ಅಪ್ಸರೆಯನ್ನು ಪ್ರೀತಿಸಿದ್ದೆ ಎಂದು ಒಪ್ಪಿಕೊಂಡ ನಟ ಸಾಯಿ ಧರಮ್ ತೇಜ್; ಆ ನಟಿ ಮಾತ್ರ ಕ್ಯಾರೇ ಎನ್ನುತ್ತಿಲ್ಲ, ಆ ಅಪ್ಸರೆ ಯಾರು ಗೊತ್ತೆ?
Sai Dharam Tej: ಮೆಗಾ ಫ್ಯಾಮಿಲಿ ಹುಡುಗ ಸಾಯಿ ಧರಂ ತೇಜ್ ಅವರು ಈಗ ಸಕ್ಸಸ್ ಸಂತೋಷದಲ್ಲಿದ್ದಾರೆ. ಆಕ್ಷಿಡೆಂಟ್ ಆದ ನಂತರ ಮೊದಲ ಸಾರಿ ನಟಿಸಿರುವ ವಿರೂಪಾಕ್ಷ (Virupaksha) ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಸಿನಿಮಾ ಒಳ್ಳೆಯ ಮಾತುಗಳು ಬಂದು, ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ಕಾರಣ ಸಾಯಿ ಧರಂ ತೇಜ್ ಅವರು ಈಗ ಫುಲ್ ಖುಷಿಯಾಗಿದ್ದಾರೆ.

ಹಾಗೆಯೇ ಸಿನಿಮಾ ಪ್ರೊಮೋಷನ್ ನಲ್ಲಿ ಜೋರಾಗಿಯೇ ಪಾಲ್ಗೊಳ್ಳುತ್ತಿದ್ದಾರೆ. ಹಲವು ಇಂಟರ್ವ್ಯೂಗಳನ್ನು ನೀಡುತ್ತಾ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಇವರು ಪಾಲ್ಗೊಂಡಿದ್ದ ಇಂಟರ್ವ್ಯೂ ನಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಅದೊಂದು ತಮಿಳ್ ಇಂಟರ್ವ್ಯೂ ಆಗಿದ್ದು ತಮ್ಮ ಮೆಚ್ಚಿನ ನಟಿ ಯಾರು ಎಂದು ಕೇಳಿದ ಪ್ರಶ್ನೆಗೆ ಸಾಯಿ ಧರಂ ತೇಜ್ ಅವರು ಕೊಟ್ಟಿರುವ ಉತ್ತರ ಈಗ ವೈರಲ್ ಆಗಿದೆ..
ತಮಿಳು ಚಿತ್ರರಂಗದಲ್ಲಿ ನಿಮಗೆ ಇಷ್ಟವಾದ ಡೈರೆಕ್ಟರ್ ಯಾರು ಎಂದು ಪ್ರಶ್ನೆ ಕೇಳಲಾಗಿತ್ತು, ಅದಕ್ಕೆ ಉತ್ತರ ಕೊಟ್ಟ ಸಾಯಿ ಧರಂ ತೇಜ್ ಅವರು ಮಣಿರತ್ನಂ (Maniratnam) ಸರ್ ಅಂದ್ರೆ ನನಗೆ ತುಂಬಾ ಇಷ್ಟ, ಲೋಕೇಶ್ ಕನಗರಾಜ್ (Lokesh Kanagaraj) ಸರ್ ಜೊತೆಯಲ್ಲಿ ಕೆಲಸ ಮಾಡಬೇಕು ಅಂತ ಆಸೆ ಇದೆ ಎಂದು ಹೇಳಿದ್ದಾರೆ. ಮೆಗಾ ಫ್ಯಾಮಿಲಿ ಹೀರೋಗಳನ್ನು ಬಿಟ್ಟು ಮತ್ಯಾವ ಹೀರೋ ಇಷ್ಟ ಎಂದು ಕೇಳಿದ್ದಕ್ಕೆ, ನನಗೆ ರವಿತೇಜ ಹಾಗೂ ಪ್ರಭಾಸ್ ಅವರು ತುಂಬಾ ಇಷ್ಟ ಅಂದಿದ್ದಾರೆ ಸಾಯಿ ಧರಂ ತೇಜ್.
ಇನ್ನು ನಿಮಗೆ ಯಾವ ಹೀರೋಯಿನ್ ಅಂದ್ರೆ ಇಷ್ಟ ಎಂದು ಕೇಳಿದ್ದಕ್ಕೆ, ನನಗೆ ಸಮಂತಾ ಅವರು ತುಂಬಾ ಇಷ್ಟ, ಕಾಲೇಜು ದಿನಗಳಿಂದ ನಾನು ಅವರ ಫ್ಯಾನ್, ಸಮಂತಾ (Samantha) ನನ್ನ ಮೊದಲ ಕ್ರಶ್ ಎಂದು ಹೇಳಬಹುದು.. ಎಂದು ನಟ ಸಾಯಿ ಧರಂ ತೇಜ್ ಉತ್ತರ ಕೊಟ್ಟಿದ್ದು, ಇದೀಗ ಈ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಚ್ಛೇದನ ಆಗಿರುವ ಸಮಂತಾ ಅವರ ಮೇಲೆ ಯಾಕೆ ಅಷ್ಟು ಇಂಟರೆಸ್ಟ್ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
Comments are closed.