Samantha: ಸಮಂತಾಗಾಗಿ ಗುಡಿ ಕಟ್ಟಿಸಿದ ಅಭಿಮಾನಿ: ಅದಕ್ಕಾಗಿ ಖರ್ಚು ಮಾಡಿದ್ದು ಎಷ್ಟು ಗೊತ್ತೇ?? ಇಷ್ಟು ಹಣ ಎಲ್ಲಿಂದ ಬಂತು??
Samantha: ನಟಿ ಸಮಂತಾ ಅವರಿಗೆ ಎಲ್ಲೆಡೆ ಎಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎಂದು ನಮಗೆಲ್ಲ ಗೊತ್ತೇ ಇದೆ. ಸಮಂತಾ ಅವರು ಒಬ್ಬ ವಾರಿಯರ್ ಹಾಗೆ, ಜೀವನದಲ್ಲಿ ಬಂದ ಎಲ್ಲಾ ಕಷ್ಟಗಳನ್ನು ಎದುರಿಸಿ ಇಂದು ಸ್ಟ್ರಾಂಗ್ ಆಗಿ ನಿಂತಿದ್ದಾರೆ. ಸಮಂತಾ ಅವರು ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವಿಶೇಷವಾದ ದಿನ ಅವರ ಅಭಿಮಾನಿ ಒಂದು ದೊಡ್ಡ ಕೆಲಸವನ್ನೇ ಮಾಡಿದ್ದಾನೆ..

ಬಾಪಟ್ಲ ಜಿಲ್ಲೆಯ ಚುಂಡೂರು ಮಂಡಲದ ಆಲಪಾಡು ಗ್ರಾಮದಲ್ಲಿ ವಾಸ ಮಾಡುವ ನಟಿ ಸಮಂತಾ ಅವರ ಅಭಿಮಾನಿ ಸಂದೀಪ್ ಅವರು, ಸಮಂತಾ ಅವರ ಮೇಲಿನ ಅಭಿಮಾನದಿಂದ ಅವರಿಗೆ ಒಂದು ದೇವಸ್ಥಾನವನ್ನೇ ಕಟ್ಟಿಸಿದ್ದಾರೆ. ಕೆಲ ದಿನಗಳ ಹಿಂದೆಯೇ ಈ ದೇವಸ್ಥಾನದ ಬಗ್ಗೆ ಭಾರಿ ಸುದ್ದಿಯಾಗಿತ್ತು, ಚರ್ಚೆ ಕೂಡ ನಡೆದಿತ್ತು. ಆದರೆ ಇದೀಗ ದೇವಸ್ಥಾನದ ಉದ್ಘಾಟನೆ ಸಹ ನಡೆದಿದೆ.
ಸಂದೀಪ್ ಅವರು ಸಮಂತಾ ಅವರ ಹುಟ್ಟುಹಬ್ಬದ ದಿನ ಸಮಂತಾ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮೂರ್ತಿಗೆ ಪುಣ್ಯ ಸ್ನಾನ ಮಾಡಿಸಿ, ದೇವಸ್ಥಾನವನ್ನು ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಅರೇಂಜ್ ಮಾಡಲಾಗಿತ್ತು. ಸಾಕಷ್ಟು ಅಭಿಮಾನಿಗಳು ಬಂದು, ಸಮಂತಾ ಅವರ ದೇವಸ್ಥಾನದ ಉದ್ಘಾಟನೆಯಲ್ಲಿ ಪಾಲ್ಗೊಂಡರು. ಇನ್ನು ಕೇಕ್ ಕತ್ತರಿಸಿ ಸಮಂತಾ ಅವರ ಹುಟ್ಟುಹಬ್ಬದ ಆಚರಣೆ ಮಾಡಲಾಗಿದೆ.
ಎಲ್ಲಾ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಈ ದೇವಸ್ಥಾನ ಹಾಗೂ ಇದಕ್ಕೆ ಸಂಬಂಧಿಸಿದ ಹಾಗೆ ಸಂದೀಪ್ ಅವರು 5 ರಿಂದ 6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಪ್ರತ್ಯುಶ ಫೌಂಡೇಶನ್ ಜೋರೆ ಸೇರಿ ಸಮಂತಾ ಅವರು ವಸತಿ ಇಲ್ಲದ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು, ಸಂದೀಪ್ ಅವರನ್ನು ಇಂಪ್ರೆಸ್ ಮಾಡಿದ್ದು, ಹಾಗಾಗಿ ಸಮಂತಾ ಅವರನ್ನು ಕಂಡರೆ ಅಷ್ಟು ಪ್ರೀತಿ ಎಂದು ಹೇಳಿದ್ದಾರೆ. ಸಮಂತಾ ಅವರ ಇನ್ನುಳಿದ ಅಭಿಮಾನಿಗಳು ಕೂಡ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Comments are closed.