Business Idea: ಇದೊಂದು ವ್ಯಾಪಾರ ಮಾಡಿದರೆ, ಸಾಕು. ತಿಂಗಳಿಗೆ 50 ಸಾವಿರ ರೂಪಾಯಿಗಿಂತಲೂ ಹೆಚ್ಚು ಲಾಭ. ಏನು ಮಾಡಬೇಕು ಗೊತ್ತೇ??
Business Idea: ಈಗಿನ ಕಾಲದಲ್ಲಿ ನಮ್ಮ ಸರ್ಕಾರ ಬ್ಯುಸಿನೆಸ್ ಮಾಡುವ ಆಲೋಚನೆ ಇರುವವರಿಗೆ ಪ್ರೋತ್ಸಾಹ ಕೊಡುತ್ತಿದೆ. ಸಣ್ಣ ವ್ಯಾಪಾರ ಶುರು ಮಾಡಲು, ಸೆಕ್ಯೂರಿಟಿ ಇಲ್ಲದೆ ₹10ಲಕ್ಷ ರೂಪಾಯಿಯವರೆಗು ಸಾಲ ಕೊಡುತ್ತಿದೆ. ಸರ್ಕಾರದಿಂದ ಈ ಹಣ ಪಡೆದು, ನೀವು ಬ್ಯುಸಿನೆಸ್ ಶುರು ಮಾಡಿ, ಲಾಭ ಗಳಿಸಬಹುದು. ಹಾಗಿದ್ದರೆ ಸುಲಭವಾಗಿ ಶುರು ಮಾಡಿ ಹೆಚ್ಚಿನ ಲಾಭ ಪಡೆಯಬಹುದಾದ ಬ್ಯುಸಿನೆಸ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಈಗ ನಮ್ಮ.ಪ್ರಪಂಚದಲ್ಲಿ ಪ್ಲಾಸ್ಟಿಕ್ ಬಳಕೆ ಕೊನೆಗಾಣುವ ಹಂತಕ್ಕೆ ಬಂದು ತಲುಪಿದೆ. ಹಾಗಾಗಿ ಎಲ್ಲಿ ನೋಡಿದರೂ ಕೂಡ ಪ್ಲಾಸ್ಟಿಕ್ ಗ್ಲಾಸ್ ಗಳು, ಕಪ್ ಗಳು ಕಾಣಿಸುತ್ತಿಲ್ಲ, ಈಗ ಬೇಡಿಕೆ ಹೆಚ್ಚಾಗಿರುವುದು ಪೇಪರ್ ಕಪ್ ಗಳಿಗೆ. ಹಾಗೆಯೇ ಸ್ಟೀಲ್ ಕಪ್ ಗಳನ್ನು ಸಹ ಬಳಸಲಾಗುತ್ತಿದೆ. ಹೋಟೆಲ್ ಗಳು, ರೋಡ್ ರೈಡ್ ಅಂಗಡಿಗಳು, ಎಲ್ಲಾ ಕಡೆ ಪೇಪರ್ ಕಪ್ ಗೆ ಭಾರಿ ಬೇಡಿಕೆ ಇದೆ. ಪೇಪರ್ ಕಪ್ ತಯಾರಿಸುವ ಬ್ಯುಸಿನೆಸ್ ಶುರು ಮಾಡಿದರೆ ನೀವು 50 ಸಾವಿರ ರೂಪಾಯಿಯವರೆಗು ಹಣ ಗಳಿಸಬಹುದು. ಈ ಬ್ಯುಸಿನೆಸ್ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ಪೇಪರ್ ಕಪ್ ತಯಾರಿಸಲು ವಿಶೇಷವಾದ ಪೇಲರ್ ಅನ್ನು ಬಳಸಲಾಗುತ್ತದೆ. ಪೇಪರ್ ಕಪ್ ಗಳನ್ನು ಬೇರೆ ಬೇರೆ ಸೈಜ್ ಗಳಲ್ಲಿ ತಯಾರಿಸಲಾಗುತ್ತದೆ. ಇದು ಪರಿಸರ ಸ್ನೇಹಿ ಕಪ್ ಗಳಾಗಿರುತ್ತದೆ ಹಾಗಾಗಿ ಇವುಗಳ ತಯಾರಿಕೆಗೆ ವಿಶೇಷವಾದ ಯಂತ್ರ ಕೂಡ ಬೇಕಾಗುತ್ತದೆ. ಪೇಪರ್ ಕಪ್ ತಯಾರಿಕೆ ಯಂತ್ರದ ಬೆಲೆ ಸುಮಾರು ₹5ಲಕ್ಷ ರೂಪಾಯಿಯವರೆಗೂ ಇರುತ್ತದೆ. ಈ ಯಂತ್ರಗಳು ನಿಮಗೆ ಮಾರ್ಕೆಟ್ ನಲ್ಲಿ ಸಿಗುತ್ತದೆ. ಹಾಗೆಯೇ ಪೇಪರ್ ಕಪ್ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ಬೆಲೆ ಸುಮಾರು 50 ಸಾವಿರ ರೂಪಾಯಿ ವರೆಗು ಇರುತ್ತದೆ. 90ಕೆಜಿ ಪೇಪರ್ ರೀಲ್ ಗಳು ನಿಮಗೆ ಬೇಕಾಗಬಹುದು.
ಈ ಯಂತ್ರವನ್ನು ಬಳಸಿ 1 ನಿಮಿಷಕ್ಕೆ 50 ಕಪ್ ಗಳನ್ನು ತಯಾರಿಸಬಹುದು. ಹಾಗೆಯೇ ದಿನಕ್ಕೆ ಎರಡು ಶಿಫ್ಟ್ ಹಾಗೆ ತಿಂಗಳಲ್ಲಿ 26 ದಿನಗಳು ಕೆಲಸ ಮಾಡಿದರೆ, ಒಂದು ತಿಂಗಳಿನಲ್ಲಿ 15ಲಕ್ಷದ 60 ಸಾವಿರ ಕಪ್ ಗಳನ್ನು ತಯಾರಿಸಬಹುದು. ಒಂದು ಕಪ್ ಅನ್ನು 30 ಪೈಸೆಗೆ ಮಾರಾಟ ಮಾಡಿದರೆ, ₹4,68,000 ಹಣಗಳಿಕೆ ಆಗುತ್ತದೆ. ಇದರಲ್ಲಿ ನಿಮಗೆ ₹50,009 ಲಾಭ ಖಂಡಿತವಾಗಿಯೂ ಸಿಗುತ್ತದೆ. ಹಾಗಾಗಿ ಈ ಬ್ಯುಸಿನೆಸ್ ಅನ್ನು ನೀವು ಸುಲಭವಾಗಿ ಶುರು ಮಾಡಬಹುದು.
Comments are closed.