Radhika Merchant: ಅಂಬಾನಿ ಸೊಸೆ ಧರಿಸಿದ ಡ್ರೆಸ್ ಬೆಲೆ ಗೊತ್ತೇ? ನೋಡಿದರೆ ತಗೋಬೇಕು ಎನಿಸುವ ಈ ಡ್ರೆಸ್ ಬೆಲೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??
Radhika Merchant: ಅಂಬಾನಿ ಅವರ ಮನೆತನ ಎಂದರೆ ಅಲ್ಲಿ ಐಷಾರಾಮಿ ತನ ದುಬಾರಿತನ ಇದೆಲ್ಲವೂ ಖಂಡಿತವಾಗಿ ಇದ್ದೇ ಇರುತ್ತದೆ. ಅಂಬಾನಿ ಅವರದ್ದು ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದು. ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರು ಪ್ರತಿಯೊಂದು ಸಾರಿ ಹೊರಗಡೆ ಕಾಣಿಸಿಕೊಂಡಾಗಲು ಕೂಡ ಗೊತ್ತಾಗುತ್ತದೆ, ಇವರ ಐಷಾರಾಮಿ ಮನೆ ಸಹ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅಂಬಾನಿ ಅವರ ಕುಟುಂಬ ಮಾತ್ರವಲ್ಲ ಅವರ ಮನೆಗೆ ಸೊಸೆಯಾಗಿ ಬರುತ್ತಿರುವ ಹುಡುಗಿ ಕೂಡ ಹಾಗೆ ಇದ್ದಾರೆ.

ಅನಂತ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರನ್ನು ಮದುವೆ ಆಗುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿಯ ಎಂಗೇಜ್ಮೆಂಟ್ ಅದ್ಧೂರಿಯಾಗಿ ನಡೆಯಿತು. ರಾಧಿಕಾ ಮರ್ಚೆಂಟ್ ಸಹ ಕುಟುಂಬದ ಹುಡುಗಿ . ಇವರು ಕೂಡ ತಮ್ಮ ಫ್ಯಾಶನ್ ಸ್ಟೈಲ್ ಸ್ಟೇಟ್ಮೆಂಟ್ ಇಂದ ಬಹಳ ಸುದ್ದಿಯಾಗುತ್ತಾರೆ.
ಈಗಷ್ಟೇ ಮುಖೇಶ್ ನೀತಾ ಅಂಬಾನಿ ಕಲ್ಚರಲ್ ಸೆಂಟರ್ ನಲ್ಲಿ ನಡೆದ ಮೊದಲ ಕಾರ್ಯಕ್ರಮ ದಿ ಸೌಂಡ್ ಆಫ್ ಮ್ಯೂಸಿಕ್ ನಲ್ಲಿ ರಾಧಿಕಾ ಅವರು ಫ್ಲವರಿ ಮಿಡಿ ಡ್ರೆಸ್ ಧರಿಸಿ ಕಾಣಿಸಿಕೊಂಡರು. ರಾಧಿಕಾ ಅವರು ಸ್ಯಾಟಿನ್ ಫ್ಲೋರಲ್ ಡ್ರೆಸ್ ಧರಿಸಿದ್ದರು. ಇದಕ್ಕೆ ರಾ ಎಡ್ಜ್ಡ್ ನೆಕ್ ಲೈನ್ ಇತ್ತು. ಈ ಡ್ರೆಸ್ ಗೆ ಸಿಂಪಲ್ ಆಗಿರುವ ವಜ್ರದ ಓಲೆ, ಡೈಮಂತ್ ಲಾಕೆಟ್ ಹಾಗೂ ಶೂ ಧರಿಸಿ ಕಾಣಿಸಿಕೊಂಡಿದ್ದರು ರಾಧಿಕಾ ಮರ್ಚೆಂಟ್.
ಈ ಡ್ರೆಸ್ ನ ಬೆಲೆ ಎಷ್ಟು ಎಂದು ಈಗ ಚರ್ಚೆ ಶುರುವಾಗಿದ್ದು, ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ ರಾಧಿಕಾ ಮರ್ಚೆಂಟ್ ಅವರು ಧರಿಸಿರುವ ಡ್ರೆಸ್ ನ ಬೆಲೆ ₹58,100 ರೂಪಾಯಿ ಆಗಿದೆ. ಈ ಡ್ರೆಸ್ ನ ಬೆಲೆ ತಿಳಿದ ನೆಟ್ಟಿಗರು, ಅಂಬಾನಿ ಮನೆ ಸೊಸೆ ಎಂದಮೇಲೆ ಇಷ್ಟು ಬೆಲೆಬಾಳುವ ಡ್ರೆಸ್ ಧರಿಸಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
Comments are closed.