Kannada News: ಇನ್ನು ಕಡಿಮೆಯಾಗಲಿದೆ ಅಡುಗೆ ಎಣ್ಣೆ ಬೆಲೆ- ಇನ್ನು ಮುಂದಿನ ಎಣ್ಣೆ ಎಷ್ಟಾದರೂ ಬಳಸಿ- ಚಿಲ್ಲರೆ ಹಣ ಮಾತ್ರ. ಎಷ್ಟಾಗಲಿದೆ ಗೊತ್ತೇ??

Kannada News: ಈ ಸೋಮವಾರ ಮತ್ತೊಮ್ಮೆ ದೆಹಲಿಯಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಎಲ್ಲಾ ಅಡುಗೆ ಎಣ್ಣೆ ಕಾಳುಗಳ ಬೆಲೆಯಲ್ಲಿ ಇಳಿಕೆ ಆಗಿದೆ.. ಸಾಸಿವೆ ಎಣ್ಣೆ, ಶೇಂಗಾ ಎಣ್ಣೆ, ಕಚ್ಚಾ ಪಾಮ್ ಆಯ್ಲ್, ಪಾಮೋಲಿನ್ ಆಯ್ಲ್, ಹತ್ತಿಬೀಜದ ಎಣ್ಣೆ ಇದೆಲ್ಲದರ ಬೆಲೆಯೂ ಕಡಿಮೆ ಆಗಿದೆ. ಆದರೆ ಬೇರೆ ಎಣ್ಣೆಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿಲ್ಲ. ಮಲೇಷ್ಯಾ ಎಕ್ಸ್ಛೇಂಜ್ ನಲ್ಲಿ ಈ ಎಲ್ಲಾ ಎಣ್ಣೆಗಳ ಬೆಲೆಯಲ್ಲಿ ಅರ್ಧದಷ್ಟು ಇಳಿಕೆ ಆಗಿದೆ.

edible oil reduced again in india Kannada News:

ಆದರೆ ಚಿಕಾಗೋ ಎಕ್ಸ್ಛೇಂಜ್ ನಲ್ಲಿ ಹೆಚ್ಚಿನ ಇಳಿಕೆ ಕಂಡುಬಂದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಆಮದು ಮಾಡಿಕೊಳ್ಳುವಾಗ ಇರುವ ಎಣ್ಣೆಯ ಬೆಲೆ, ಚಿಲ್ಲರೆ ಅಂಗಡಿಯಲ್ಲಿ ಮಾರಾಟ ಮಾಡುವಾಗ ಜಾಸ್ತಿಯಾಗುತ್ತದೆ. ಇದಕ್ಕೆ ಉದಾಹರಣೆ, ಆಮದು ಮಾಡಿಕೊಳ್ಳುವಾಗ ಸೂರ್ಯಕಾಂತಿ ಎಣ್ಣೆಯ ಬೆಲೆ ₹80 ರೂಪಾಯಿ ಇದ್ದರೆ, ಚಿಲ್ಲರೆ ಅಂಗಡಿಯಲ್ಲಿ ಮಾರಾಟ ಆಗುವ ವೇಳೆಗೆ ₹150 ರೂಪಾಯಿ ಆಗಿರುತ್ತದೆ. ಸೋಯಾಬೀನ್ ಬೆಲೆ ಕೂಡ 85 ರೂಪಾಯಿಗೆ ಹೋಲ್ ಸೇಲ್ ವ್ಯಾಪಾರ ಆಗಿ, ಚಿಲ್ಲರೆ ಅಂಗಡಿಯಲ್ಲಿ ₹140 ರೂಪಾಯಿಗೆ ವ್ಯಾಪಾರ ಆಗುತ್ತದೆ. ಇದನ್ನು ಓದಿ..Saving Tips: ಸಂಬಳ ಬಂದ ತಕ್ಷಣ ಹಣ ಖಾಲಿ ಆಗುತ್ತಿದೆಯೇ?? ಕೈ ಯಲ್ಲಿ ಹಣ ನಿಲ್ಲುತ್ತಿಲ್ಲವೇ?ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹಣ ಕೂಡಿಡುತ್ತಿರ.

ಪಾಮೊಲಿನ್ ಎಣ್ಣೆಯ ಸಗಟು ಬೆಲೆ ಬಂದರಿನಲ್ಲಿ ಒಂದು ಲೀಟರ್ ಗೆ 85 ರೂಪಾಯಿ, ಆದರೆ ಚಿಲ್ಲರೆ ಮಾರ್ಕೆಟ್ ಬೆಲೆ ₹105 ರೂಪಾಯಿ ಇರುತ್ತದೆ. ಪ್ರೀಮಿಯಂ ಗುಣಮಟ್ಟದ ರೈಸ್ ಬ್ರಾನ್ ಆಯ್ಲ್ ನ ಸಗಟು ಬೆಲೆ ಒಂದು ಲೀಟರ್ ₹85 ರೂಪಾಯಿ ಆಗುತ್ತದೆ, ಆದರೆ ಚಿಲ್ಲರೆ ಮಾರ್ಕೆಟ್ ನಲ್ಲಿ ಒಂದು ಲೀಟರ್‌ ಗೆ ₹170 ರೂಪಾಯಿ. ಒಂದು ಲೀಟರ್ ಗೆ ₹20 ರೂಪಾಯಿ ಕಡಿಮೆ ಆದಮೇಲೆ ಈ ಬೆಲೆ ಆಗಿದೆ. ಇತರೆ ಎಣ್ಣೆ ಬೆಲೆ ನೋಡುವುದಾದರೆ.. ಸಾಸಿವೆ ಎಣ್ಣೆ ಕಾಳುಗಳ ಬೆಲೆ ಒಂದು ಕ್ವಿಂಟಾಲ್‌ ಗೆ ₹4,905 ಇಂದ ₹5,005 ರೂಪಾಯಿ ಆಗಿದೆ..

ನೆಲಗಡಲೆ ಅಥವಾ ಶೇಂಗಾ ಎಣ್ಣೆ ಕಾಳುಗಳ ಬೆಲೆ ಒಂದು ಕ್ವಿಂಟಲ್‌ ಗೆ ₹6,630 ಇಂದ ₹6,690 ರೂಪಾಯಿ. ಶೇಂಗಾ ಎಣ್ಣೆಯ ಗಿರಣಿ ವಿತರಣೆಯ ಬೆಲೆ ಒಂದು ಕ್ವಿಂಟಲ್‌ಗೆ ₹16,450 ರೂಪಾಯಿ. ಸಂಸ್ಕರಿಸಿದ ಶೇಂಗಾ ಎಣ್ಣೆ ಬೆಲೆ ಪ್ರತಿ ಟಿನ್‌ ಗೆ ₹2,470 ಇಂದ ₹2,735 ರೂಪಾಯಿ ಆಗಿರುತ್ತದೆ. ಸಾಸಿವೆ ಎಣ್ಣೆ ದಾದ್ರಿ ಬೆಲೆ ಒಂದು ಕ್ವಿಂಟಲ್‌ ಗೆ ₹9,240 ರೂಪಾಯಿ ಆಗಿರುತ್ತದೆ. ಸಾಸಿವೆ ಪಕ್ಕಿ ಘನಿ ಒಂದ್ ಟಿನ್ ಗೆ ₹1,580 ಇಂದ ₹1,660 ರೂಪಾಯಿ ಆಗಿದೆ.
ಸಾಸಿವೆ ಕಚ್ಚಿ  ಘನಿ ಎಣ್ಣೆ ಒಂದು ಟಿನ್‌ ಗೆ ₹1,580 ಇಂದ ₹1,690 ರೂಪಾಯಿ. ಎಳ್ಳು ಎಣ್ಣೆ ಗಿರಣಿ ವಿತರಣೆ ಪ್ರೇರಿ ಕ್ವಿಂಟಲ್‌ ಗೆ ₹18,900 ಇಂದ 21,000 ರೂಪಾಯಿ. ಇದನ್ನು ಓದಿ..Railway Rules: ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತೀರಾ?? ಹಾಗಿದ್ದರೆ ಈ ಹೊಸ ರೂಲ್ಸ್ ತಿಳಿದುಕೊಳ್ಳಿ, ಇಲ್ಲವಾದಲ್ಲಿ ಬಾರಿ ಬೆಲೆ ಕಟ್ಟಬೇಕಾಗುತ್ತದೆ. ಏನು ಗೊತ್ತೇ??

Comments are closed.