Free Bus: ಮಹಿಳೆಯರಿಗೆ ಕೊಡುವಂತೆ ನಮಗೂ ಉಚಿತ ಕೊಡಿ- ಹೊಸ ಬೇಡಿಕೆ ಇಟ್ಟ ಮತ್ತೊಂದು ಗುಂಪು. ನೆಟ್ಟಿಗರು ಕೂಡ ಇವರಿಗೆ ಕೊಡಿ ಎಂದದ್ದು ಯಾಕೆ ಗೊತ್ತೇ?

Free Bus: ಕಾಂಗ್ರೆಸ್ ಸರ್ಕಾರ ಚುನಾವಣೆಗಿಂತ ಮೊದಲು 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡುವುದಾಗಿ ಭರವಸೆ ಕೊಟ್ಟಿತ್ತು. ಅದೇ ರೀತಿ ಈಗ ಅಧಿಕಾರಕ್ಕೆ ಬಂದ ಮೇಲೆ ಒಂದೊಂದಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಈ ಯೋಜನೆಗಳಲ್ಲಿ ಒಂದು ರಾಜ್ಯದ ಎಲ್ಲಾ ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎನ್ನುವ ಯೋಜನೆ ಆಗಿದೆ.

free bus pass demand by retired drivers Free Bus:

ಜೂನ್ 11ರಿಂದ ಈ ಯೋಜನೆ ಜಾರಿಗೆ ಬರಲಿದೆ, ಸಾರಿಗೆ ಮುಖ್ಯಸ್ಥ ರಾಮಲಿಂಗಾರೆಡ್ಡಿ ಅವರು ಈ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು. ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಯೋಜನೆಯು ಜೂನ್ 11ರಿಂದ ಜಾರಿಗೆ ಬರುತ್ತದೆ. ಎಲ್ಲಾ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಓಡಾಡಬಹುದು ಎಂದು ಅಧಿಕೃತವಾಗಿ. ಈ ವಿಚಾರದಲ್ಲಿ ಗಂಡಸರಿಗೂ ಈ ಸೌಲಭ್ಯ ಕೊಡಬೇಕು ಎನ್ನುವ ವಾದ ಒಂದು ಕಡೆಯಾದರೆ, ಮತ್ತೊಂದು ಕಡೆ, ಸಾರಿಗೆ ಇಲಾಖೆಯ ನಿವೃತ್ತ ನೌಕರರು ಹೊಸ ಬೇಡಿಕೆ ಇಟ್ಟಿದ್ದಾರೆ. ಇದನ್ನು ಓದಿ..News: ಭಾರತೀಯ ಸೇನೆಯು ಯಾಕೆ ಮಾರುತಿ ಜಿಪ್ಸಿ ಮೇಲೆ ಆಸಕ್ತಿ ತೋರುತ್ತಿದೆ ಗೊತ್ತೇ?? ಇದರಲ್ಲಿ ಇರುವ ವಿಶೇಷತೆ ಏನು ಗೊತ್ತೇ??

ಸಾರಿಗೆ ಇಲಾಖೆಯಲ್ಲಿ 4 ನಿಗಮಗಳಿವೆ ಅವುಗಳ ವಿವಿಧ ಡಿಪಾರ್ಟ್ಮೆಂಟ್ ಗಳಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತರಾಗಿರುವ ನಿವೃತ್ತ ಅಧಿಕಾರಿಗಳು ಈಗ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಇಲಾಖೆಯ ರಾಮಲಿಂಗಾರೆಡ್ಡಿ ಅವರ ಎದುರು ಬೇಡಿಕೆ ಇಟ್ಟಿದ್ದಾರೆ. ಅಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ಕೂಡ, ನಮ್ಮಿಂದ ವಾರ್ಷಿಕವಾಗಿ 500 ರೂಪಾಯಿಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನಮಗೂ ಸಿಗಬೇಕು ಎಂದು ಹಿರಿಯ ನಿವೃತ್ತ ಕೆಲಸಗಾರರು ಕೇಳಿಕೊಳ್ಳುತ್ತಿದ್ದಾರೆ.

ತಮಗೂ ಹಾಗೂ ತಮ್ಮ ಪತಿ/ಪತ್ನಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ನಿವೃತ್ತರು ಮನವಿ ಮಾಡಿದ್ದು. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಕೂಡ ಇದರ ಬಗ್ಗೆ ಚರ್ಚೆಯಾಗುತ್ತಿದೆ. ನೆಟ್ಟಿಗರು ಕೂಡ ನಿವೃತ್ತ ಕೆಲಸಗಾರರಿಗೆ ಸಪೋರ್ಟ್ ಮಾಡುತ್ತಿದ್ದು, ಹೆಣ್ಣುಮುಮಕ್ಕಳಿಗೆ ಮಾತ್ರ ಉಚಿತ ಪ್ರಯಾಣ ಕೊಟ್ಟರೆ ಹೇಗೆ, ಇವರೆಲ್ಲರೂ ಸಾರಿಗೆ ಇಲಾಖೆಗೆ ಬಹಳಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರನ್ನು ಗೌರವಿಸಿ ಅವರಿಗೂ ಈ ಸೌಲಭ್ಯ ಕೊಡಿ ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಇದನ್ನು ಓದಿ..Jagan: ಬಿಟ್ಟಿ ಭಾಗ್ಯ ಕೊಟ್ಟು ರಾಜ್ಯವನ್ನು ಸಾಲಕ್ಕೆ ತಳ್ಳಿ, ಜನರು ಸೋಂಬೇರಿಗಳಾಗಿರುವ ಆಂಧ್ರ ದಲ್ಲಿ ಜಗನ್ ಭವಿಷ್ಯ ಏನು? ಮುಂದೆ ಯಾರು ಗೆಲ್ಲುತ್ತಾರಂತೆ ಗೊತ್ತೆ? ನಿಖರ ಜ್ಯೋತಿಷಿ ಹೇಳಿದ್ದೇನು ಗೊತ್ತೇ??

Comments are closed.