WTC Final: ಈ ಬಾರಿ ಭಾರತದ ಪರ ಗತ್ತು ಪ್ರದರ್ಶಿಸಿದ ಆಟಗಾರ. ಬಹಿರಂಗವಾಗಿಯೇ ಆಸ್ಟ್ರೇಲಿಯಾ ತಂಡಕ್ಕೆ ಪಬ್ಲಿಕ್ ನಲ್ಲಿ ಹೇಳಿದ್ದೇನು ಗೊತ್ತೇ?

WTC Final: ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ (World Test Championship) ಇನ್ನೇನು ಶುರುವಾಗಲಿದ್ದು, ಭಾರತ ತಂಡವು ಈ ಚಾಂಪಿಯನ್ಶಿಪ್ ನಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದು, ನಮ್ಮ ಭಾರತ ತಂಡದ ಆಟಗಾರನೊಬ್ಬ ಈಗ ಆಸ್ಟ್ರೇಲಿಯಾ ತಂಡಕ್ಕೆ ಸಾರ್ವಜನಿಕರಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಆ ಆಟಗಾರ WTC ಫೈನಲ್ಸ್ ನಲ್ಲಿ ಭಾರತ ತಂಡ ಗೆಲ್ಲಲು ಸಹಾಯ ಮಾಡಲಿದ್ದಾರೆ. ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ ಪಂದ್ಯ ಜೂನ್ 7ರಿಂದ 11ರವರೆಗು ಇಂಗ್ಲೆಂಡ್ (England) ನ ಕೆನ್ನಿಂಗ್ ಟನ್ ಓವಲ್ ಗ್ರೌಂಡ್ ನಲ್ಲಿ ನಡೆಯಲಿದೆ.

gill about wtc final WTC Final:

ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡ ಹಿಂದಿನ ಪಂದ್ಯಕ್ಕಿಂತ ವಿಭಿನ್ನವಾಗಿರುತ್ತದೆ ಎಂದು ಈ ಆಟಗಾರ ತಿಳಿಸಿದ್ದಾರೆ. ಹೀಗೆ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಿರುವ ಆಟಗಾರ ಮತ್ಯಾರು ಬಲ್ಲ, ಯಂಗ್ ಮ್ಯಾಚ್ ವಿನ್ನರ್ ಶುಬ್ಮನ್ ಗಿಲ್ (Shubman Gill). ಇವರು ಈ ವರ್ಷ ಐಪಿಎಲ್ (IPL) ನಲ್ಲಿ ಬರೋಬ್ಬರಿ 890 ರನ್ಸ್ ಗಳಿಸಿದರು. ಇದನ್ನು ಓದಿ..BEL Jobs: ಕೆಲಸ ಬೇರೆ ರಾಜ್ಯದವರಿಗೆ ಹೋಗುತ್ತಿದೆ ಎನ್ನುವ ಮುನ್ನ, ಮೊದಲು BEL ನಲ್ಲಿ ಅರ್ಜಿ ಹಾಕಿ. ತಿಂಗಳಿಗೆ 50 ಸಾವಿರ ಸಂಬಳ. ಏನು ಮಾಡಬೇಕು ಗೊತ್ತೇ?

ಗಿಲ್ ಅವರ ಈ ಅದ್ಭುತ ಫಾರ್ಮ್ ಎಲ್ಲರಿಗೂ ಆಶ್ಚರ್ಯ ತಂದಿತ್ತು. ಆಡಿದ ಪಂದ್ಯಗಳಲ್ಲಿ 60ರ ಆವರೇಜ್ ನಲ್ಲಿ 890 ರನ್ಸ್ ಗಳಿಸಿದರು ಶುಬ್ಮನ್ ಗಿಲ್. 3 ಸೆಂಚುರಿ ಭಾರಿಸಿ 2023ರಲ್ಲಿ ಐಪಿಎಲ್ ನ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಎನ್ನಿಸಿಕೊಂಡಿದ್ದಾರೆ ಶುಬ್ಮನ್ ಗಿಲ್. WTC ಗಾಗಿ ಇಂಗ್ಲೆಂಡ್ ತಲುಪಿರುಗ ಶುಬ್ಮನ್ ಗಿಲ್, ಐಸಿಸಿ (ICC) ಜೊತೆಗೆ ಮಾತನಾಡಿ, “IPL ನಮಗೆ ಆತ್ಮವಿಶ್ವಾಸ ನೀಡುತ್ತದೆ. ಆದರೆ ಈ ಟೆಸ್ಟ್ ಪಂದ್ಯ ವಿಭಿನ್ನವಾದ ಪಂದ್ಯ ಆಗಿರುತ್ತದೆ ಎನ್ನುವುದು ನನ್ನ ಭಾವನೆ..” ಎಂದು ಹೇಳಿದ್ದಾರೆ ಗಿಲ್.

“ಹಿಂದಿನ ವಾರ ನಾವು ಆಡಿದ್ದು ಬೇರೆ ರೀತಿಯ ವಾತಾವರಣದಲ್ಲಿ, ಈಗ ನಮ್ಮ ಎದುರು ಬೇರೆಯದೇ ಸವಾಲು ಇದೆ. ಇದು ಟೆಸ್ಟ್ ಪಂದ್ಯಗಳನ್ನು ಥ್ರಿಲ್ಲಿಂಗ್ ಆಗಿ ಮಾಡುತ್ತದೆ. ಒಂದು ತಂಡವಾಗಿ ಬಹಳಷ್ಟು ವಿಷಯಗಳನ್ನು ಕಲಿತಿದ್ದೇವೆ. ಆಗಿನ ಪಂದ್ಯದ ಬ್ಯಾಟಿಂಗ್ ಬಗ್ಗೆ ಚರ್ಚೆ ಮಾಡಿದ್ದೇವೆ. ಕಳೆದ ಬಾರಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎನ್ನುವ ಆಶಯವಿದೆ. ” ಎಂದು ಶುಬ್ಮನ್ ಗಿಲ್ ಹೇಳಿದ್ದಾರೆ. 2021ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಭಾರತ ತಂಡ ಸೋತಿತ್ತು, ಈ ವರ್ಷ ಗೆಲ್ಲುವ ವಿಶ್ವಾಸ ಹೊಂದಿದ್ದು, ಪಂದ್ಯ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Railway Jobs: ಮತ್ತೆ ಉದ್ಯೋಗಕ್ಕಾಗಿ ಅರ್ಜಿ ಕರೆದ ರೈಲ್ವೆ- ಈ ಬಾರಿ 10 ನೇ ತರಗತಿ, 12 ನೇ ತರಗತಿ ಪಾಸ್ ಆಗಿದ್ದರೂ ಅರ್ಜಿ ಹಾಕಿ. ಉದ್ಯೋಗ ಗಿಟ್ಟಿಸಿ. ಏನು ಮಾಡಬೇಕು ಗೊತ್ತೇ?

Comments are closed.