Gautham Gambhir: ವಿಶ್ವಕಪ್ ನ ತಂಡದಲ್ಲಿ ಯಾರು ಇಲ್ಲದೆ ಇದ್ದರೂ ಆತ ಮಾತ್ರ ಇರಲೇಬೇಕು ಎಂದ ಗಂಭೀರ್- ಯುವಕನ ಆಯ್ಕೆ.

Gautham Gambhir: ವಿಶ್ವಕಪ್ ನ ತಂಡದಲ್ಲಿ ಯಾರು ಇಲ್ಲದೆ ಇದ್ದರೂ ಆತ ಮಾತ್ರ ಇರಲೇಬೇಕು ಎಂದ ಗಂಭೀರ್- ಯುವಕನ ಆಯ್ಕೆ.

Gautham Gambhir: ಗೌತಮ್ ಗಂಭೀರ್ (Gautham Gambhir) ಅವರು ಟೀಮ್ ಇಂಡಿಯಾದ (Team India) ಹಿರಿಯ ಕ್ರಿಕೆಟಿಗರು. ಈಗ ಇವರು ಐಪಿಎಲ್ (IPL) ನಲ್ಲಿ ಲಕ್ನೌ (LSG) ತಂಡದ ಕೋಚ್ ಆಗಿದ್ದಾರೆ..ಗೌತಮ್ ಗಂಭೀರ್ (Gautham Gambhir) ಅವರು ಆಗಾಗ ಟೀಮ್ ಇಂಡಿಯಾ ಬಗ್ಗೆ ಹಲವು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಇದೀಗ ಗೌತಮ್ ಗಂಭೀರ್ (Gautham Gambhir) ಅವರು 2024ರ ಟಿ20 ವರ್ಲ್ಡ್ ಕಪ್ ನಲ್ಲಿ ಟೀಮ್ ಇಂಡಿಯಾದ ಈ ಒಬ್ಬ ಆಟಗಾರ ಇರಲೇಬೇಕು ಎಂದು ಆಗ್ರಹಿಸಿದ್ದಾರೆ. ಆ ಆಟಗಾರ ಯಾರು ಗೊತ್ತಾ?

ಗೌತಮ್ ಗಂಭೀರ್ (Gautham Gambhir) ಅವರು ಈಗ ಸಪೋರ್ಟ್ ಮಾಡುತ್ತಿರುವುದು ಮತ್ಯಾರನ್ನು ಅಲ್ಲ, ಐಪಿಎಲ್ ನಲ್ಲಿ ಅದ್ಬುತ ಪರ್ಫಾರ್ಮೆನ್ಸ್ ನೀಡಿದ ಯಶಸ್ಬಿ ಜೈಸ್ವಾಲ್ (Yashasvi Jaiswal) ಅವರನ್ನು. ಐಪಿಎಲ್ ನಲ್ಲಿ ಯಶಸ್ವಿ ಜೈಸ್ವಲ್ ಅವರು ಆಡಿದ 14 ಪಂದ್ಯಗಳಲ್ಲಿ 1 ಶತಕ, 5 ಅರ್ಧಶತಕದ ಜೊತೆಗೆ 625 ರನ್ಸ್ ಭಾರಿಸಿದರು. ವಿಜಯ್ ಹಜಾರೆ ಟೂರ್ನಿಯಲ್ಲಿ ಸಹ 17 ವರ್ಷದಲ್ಲಿ ದ್ವಿಶತಕ ಸಿಡಿಸಿದರು. ಈಗ ವೆಸ್ಟ್ ಇಂಡೀಸ್ (Ind vs WI) ವಿರುದ್ಧದ ಟೆಸ್ಟ್ ಸೀರೀಸ್ ನ ಮೊದಲ ಪಂದ್ಯದಲ್ಲಿ 171 ರನ್ಸ್ ಸಿಡಿಸಿದರು, ಎರಡನೇ ಟೆಸ್ಟ್ ಪಂದ್ಯದಲ್ಲಿ 57 ರನ್ಸ್ ಭಾರಿಸಿದರು. ಈ ಆಟಗಾರನ ಬಗ್ಗೆ ಗೌತಮ್ ಗಂಭೀರ್ ಅವರು ಉತ್ತಮ ಮಾತುಗಳನ್ನಾಡಿದ್ದಾರೆ. ಇದನ್ನು ಓದಿ..Rohit Sharma: ರೋಹಿತ್ ಶರ್ಮ ರವರ ನಂತರ ಈತ ನಾಯಕನಾದರೆ ಬೆಸ್ಟ್- ವಾಸಿಂ ಜಾಫರ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

“ಟೀಮ್ ಇಂಡಿಯಾದಲ್ಲಿ ಒಂದು ತೊಂದರೆ ಇದೆ, ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಪ್ಲೇಯರ್ ಗಳನ್ನು ನೇರವಾಗಿ ನ್ಯಾಷನಲ್ ಟೀಮ್ ಗೆ ಸೇರಿಸಿಕೊಳ್ಳುತ್ತೇವೆ. ಯಶಸ್ವಿ ಜೈಸ್ವಾಲ್ ಅವರನ್ನು ನೋಡಿದರೆ, ದೇಶೀಯ ಕ್ರಿಕೆಟ್, ಪ್ರಥಮ ದರ್ಜೆ ಕ್ರಿಕೆಟ್, ಮತ್ತು ಓಡಿಐ ಮೂರು ರೀತಿಯಲ್ಲಿ ಶತಕ ಸಿಡಿಸಿದ್ದಾರೆ..” ಎಂದು ಯಶಸ್ವಿ ಅವರ ಬಗ್ಗೆ ಮಾತನಾಡಿದ್ದಾರೆ. ಇನ್ನು ಐಪಿಎಲ್ ನ ಮತ್ತೊಬ್ಬ ಸ್ಫೋಟಕ ಆಟಗಾರ ರಿಂಕು ಸಿಂಗ್ (Rinku Singh) ಅವರ ಬಗ್ಗೆ ಕೂಡ ಮಾತನಾಡಿದ್ದಾರೆ.

“ರಿಂಕು ಸಿಂಗ್ ಅವರ ಲೈಫ್ ಸ್ಟೋರಿ ಸ್ಪೂರ್ತಿ ತುಂಬುವ ಕಥೆ, ಅವರೊಬ್ಬ ಅತ್ಯುತ್ತಮವಾದ ಆಟಗಾರ. ಆದರೆ ಒಂದೇ ಸೀಸನ್ ನಲ್ಲಿ ಜಡ್ಜ್ ಮಾಡಲು ಆಗೋದಿಲ್ಲ. ದೇಶಿ ಕ್ರಿಕೆಟ್ ಗೆ ಅವರನ್ನು ಆಯ್ಕೆ ಮಾಡಿ ಹೇಗೆ ಆಡುತ್ತಾರೆ ಎನ್ನುವುದನ್ನ ನೋಡಬೇಕು. ಅದರಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ, ಭಾರತ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು..” ಎಂದು ಹೇಳಿದ್ದಾರೆ ಗೌತಮ್ ಗಂಭೀರ್ (Gautham Gambhir). ಇದನ್ನು ಓದಿ..2000 Notes: ಎಲ್ಲಾ 2000 ನೋಟುಗಳು ಬ್ಯಾಂಕ್ ಗೆ ವಾಪಾಸ್ ಬರುತ್ತಿವೆ- ಇದರಿಂದ ಪ್ರತಿಯೊಬ್ಬರಿಗೂ ಲಾಭ. ಅದೇಗೆ ಗೊತ್ತೇ??

ಈ ರೀತಿಯಾಗಿ ಟೀಮ್ ಇಂಡಿಯಾದ್ ಇಬ್ಬರು ಆಟಗಾರರ ಬಗ್ಗೆ ಗಂಭೀರ (Gautham Gambhir) ಅವರು ಉತ್ತಮ ಮಾತುಗಳನ್ನಾಡಿದ್ದು, ಇದರ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಈ ಇಬ್ಬರು ಆಟಗಾರರು ಟೀಮ್ ಇಂಡಿಯಾದಲ್ಲಿ ಇರಬೇಕು ಎನ್ನುವುದು ಅಭಿಮಾನಿಗಳ ಆಸೆ ಕೂಡ ಆಗಿದೆ. ಯಾರ ಭವಿಷ್ಯ ಟೀಮ್ ಇಂಡಿಯಾದಲ್ಲಿ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ..Jobs: 8 ನೇ ಕ್ಲಾಸ್ ಮಾಡಿದ್ದರೆ ಸಾಕು, ಅಂಚೆ ಕಚೇರಿಯಲ್ಲಿ 63000 ಸಂಬಳ- ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ.

Comments are closed.