News: ಅಧಿಕಾರಿಗಳು ಲಂಚ ತೆಗೆದುಕೊಂಡು ಸಿಕ್ಕಿಬಿದ್ದಾಗ ಅಲ್ಲಿ ಪಿಂಕ್ ಬಾಟಲಿ ಇಡುತ್ತಾರೆ, ಇದಕ್ಕೆ ಕಾರಣವೇನು ಗೊತ್ತೇ?

News: ಈಗಿನ ಕಾಲದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಯಾವುದಾದರೂ ಕೆಲಸ ಆಗಬೇಕು ಎಂದರೆ ನೀವು ಲಂಚ ಕೊಡಲೇಬೇಕು. ಕಾನೂನಿನ ಪ್ರಕಾರ ಲಂಚ ಪಡೆಯುವುದು ಅಪರಾಧ, ಆದರೆ ಈಗ ನಮ್ಮ ಸಮಾಜ ಇರುವ ಸ್ಥಿತಿಯಲ್ಲಿ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಅಟೆಂಡರ್ ಇಂದ ಹಿಡಿದು ದೊಡ್ಡ ಅಧಿಕಾರಿಗಳ ವರೆಗು ಎಲ್ಲರೂ ಲಂಚ ಪಡೆಯುತ್ತಾರೆ. ಒಂದೇ ಒಂದು ಸಣ್ಣ ಕೆಲಸಕ್ಕೂ ಈಗ ಲಂಚ ಪಡೆಯುತ್ತಾರೆ.

news income tax News:

ಲಂಚ ಕೊಡುವುದನ್ನು ಕೂಡ ಅಪರಾಧ ಎಂದೇ ಹೇಳುತ್ತಾರೆ. ಈ ಭ್ರಷ್ಟಾಚಾರವನ್ನು ಸರ್ಕಾರವೇ ತಡೆಯಬೇಕು. ಅಧಿಕಾರಿಗಳು ಲಂಚ ಪಡೆದರು, ACB (ಆಂಟಿ ಕರಪ್ಶನ್ ಬ್ಯೂರೋ) ಗೆ ಸಿಕ್ಕಿಹಾಕಿಕೊಂಡರೆ, ಅವರಿಗೆ ತಕ್ಕ ಶಿಕ್ಷೆ ಕೊಡಲಾಗುತ್ತದೆ. ಸಾಕ್ಷಿ ಸಮೇತ ಸಿಕ್ಕಿಬಿದ್ದರೆ, ಲಂಚ ಪಡೆಯುತ್ತಿದ್ದ ಜಾಗದಲ್ಲೇ ಸಿಕ್ಕಿಹಾಕಿಕೊಳ್ಳುವ ಹಾಗೆಯೇ ಮಾಡುತ್ತಾರೆ. ಇನ್ನು ಇದೊಂದು ಜಾಗದಲ್ಲಿ ಯಾರಾದರೂ ಅಧಿಕಾರಿಗಳು ಸಾಕ್ಷಿ ಸಮೇತ ಲಂಚ ಪಡೆಯುವಾಗ ಸಿಕ್ಕಿಹಾಕಿಕೊಂಡರೆ, ಗುಲಾಬಿ ಬಣ್ಣದ ಬಾಟಲ್ ಗಳನ್ನು ಇಡುತ್ತಾರೆ. ಇದನ್ನು ಓದಿ..Renukacharya: ಎಷ್ಟೆಲ್ಲ ಮಾಡಿದರೂ ಸೋತ ರೇಣುಕಾಚಾರ್ಯ ಮಹತ್ವದ ಹೆಜ್ಜೆ- ಇದು ಇದು ಬೇಕಾಗಿರೋದು ಎಂದ ಫ್ಯಾನ್ಸ್. ರೇಣುಕಾರ್ಯ ಹೊಸ ದಿಟ್ಟ ಹೆಜ್ಜೆ. ಏನು ಗೊತ್ತೆ?

ಈ ಪಿಂಕ್ ಕಲರ್ ಬಾಟಲ್ ಗಳಲ್ಲಿ ಏನಿರುತ್ತದೆ?ಈ ಬಾಟಲ್ ಗಳನ್ನು ಇಡಲು ಕಾರಣ ಏನು? ತಿಳಿಸುತ್ತೇವೆ ನೋಡಿ.. ಒಂದು ವೇಳೆ ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೇ, ಆ ವ್ಯಕ್ತಿ ಮೊದಲಿಗೆ ಎಸಿಬಿಗೆ ಮಾಹಿತಿ ಕೊಡುತ್ತಾರೆ. ಲಂಚಕ್ಕಾಗಿ ಕೊಡುವ ಹಣದ ಮೇಲೆ ಎಸಿಬಿ ಅಧಿಕಾರಿಗಳು ಫಿನಾಫ್ತಾಲಿನ್ ಪುಡಿಯನ್ನು ಎರಚುತ್ತಾರೆ. ಈ ಹಣವನ್ನು ಲಂಚ ಪಡೆಯುವ ಅಧಿಕಾರಿಗೆ ಕೊಟ್ಟಾಗ, ಅವರ ಕೈಗೆ ಫಿನಾಫ್ತಾಲಿನ್ ಅಂಟಿಕೊಳ್ಳುತ್ತದೆ. ಆಗ ಎಸಿಬಿ ಅವರು ಬರುತ್ತಾರೆ.

ಲಂಚ ಪಡೆದ ಅಧಿಕಾರಿಯ ಕೈಯನ್ನು ಸೋಡಿಯಂ ಕಾರ್ಬೊನೇಟ್ ಇರುವ ನೀರಿನಲ್ಲಿ ಅದ್ದಿ ಹೊರ ತೆಗೆಯಲಾಗುತ್ತದೆ. ಕೈಯಲ್ಲಿ ಅಂಟಿರುವ ಫಿನಾಫ್ತಾಲಿನ್ ಪೌಡರ್ ನೀರಿಗೆ ಸೇರಿ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಈ ಪಿಂಕ್ ಬಣ್ಣದ ಬಾಟಲ್ ನಲ್ಲಿ ಆ ನೀರನ್ನು ಹಾಕಿ ಅದನ್ನು ಕೋರ್ಟ್ ನಲ್ಲಿ ಸಾಕ್ಷಿಯಾಗಿ ತೋರಿಸುತ್ತಾರೆ. ಈ ರೀತಿಯಾಗಿ ಲಂಚ ಪಡೆದ ಅಧಿಕಾರಿಗೆ ಶಿಕ್ಷೆ ಆಗುತ್ತದೆ. ಇದನ್ನು ಓದಿ..Traffic Rules: ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ರವಾನಿಸಿದ ಡಿಜಿಪಿ- ರೋಡ್ ನಲ್ಲಿ ನಿಯಮ ಉಲ್ಲಂಘ ಮಾಡಿದರೆ, ಅಷ್ಟೇ .. ಏನಾಗಿದೆ ಗೊತ್ತೇ?

Comments are closed.