Next Dhoni: ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಧೋನಿ ಸಿಕ್ಕಿ ಬಿಟ್ಟರೆ?? ರಾಹುಲ್, ಪಂತ್ ಅಲ್ಲ. ಮತ್ಯಾರು ಗೊತ್ತೇ?? ಈತನೇ ನೋಡಿ ಮುಂದಿನ ಲೆಜೆಂಡ್.

Next Dhoni: ಭಾರತ ತಂಡ ಕಂಡ ಅತ್ಯದ್ಬುತ ಫಿನಿಷರ್ ಹಾಗೂ ಕ್ಯಾಪ್ಟನ್ ಎಂದು ಹೆಸರು ಪಡೆದಿರುವವರು ಕ್ಯಾಪ್ಟನ್ ಕೂಲ್ ಧೋನಿ (Dhoni). ಕ್ರಿಕೆಟ್ ಲೋಕದಲ್ಲಿ ಇವರು ಮಾಡಿರುವ ಸಾಧನೆಗಳ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಧೋನಿ ಅವರ ನಂತರ ಭಾರತ ತಂಡಕ್ಕೆ ಅವರಂಥ ಆಟಗಾರ ಸಿಕ್ಕಿಲ್ಲ. ಆದರೆ ಈಗ ಧೋನಿ ಅವರ ಛಾಯೆ ಇರುವ ಮತ್ತೊಬ್ಬ ಆಟಗಾರ ತಂಡಕ್ಕೆ ಸಿಕ್ಕ ಹಾಗಿದೆ. ಆ ಆಟಗಾರ ಯಾರು ಗೊತ್ತಾ?

fans are hailing bharat as next dhoni Next Dhoni:

ಪ್ರಸ್ತುತ ಭಾರತ ತಂಡವು ಇಂಗ್ಲೆಂಡ್ ನಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ (World Test Championship) ನ ಫಿನಾಲೆ ಪಂದ್ಯವನ್ನು ಆಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಈ ಪಂದ್ಯಗಳು ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತದ ಒಬ್ಬ ಆಟಗಾರನ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ (Team India) ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವು ಟ್ರಾವಿಸ್ ಹೆಡ್ ಅವರು 163 ರನ್ಸ್ ಗಳಿಸಿ, ಸ್ಟೀವ್ ಸ್ಮಿತ್ ಅವರು 121 ರನ್ಸ್ ಗಳಿಸಿ, ಈ ಅದ್ಭುತ ಪ್ರದರ್ಶನದಿಂದ ಮೊದಲ ಇನ್ನಿಂಗ್ಸ್ ನಲ್ಲಿ 469 ರನ್ಸ್ ಗಳಿಸಿತು ಆಸ್ಟ್ರೇಲಿಯಾ. ಇದನ್ನು ಓದಿ..Google Pay: ಗೂಗಲ್ ಪೇ ನಲ್ಲಿ ಮತ್ತೊಂದು ಮಸ್ತ್ ವೈಶಿಷ್ಯತೇ- ಇನ್ನು ಮುಂದೆ ನಿಮಗೆ ಎಟಿಎಂ ಕಾರ್ಡ್ ಬೇಕಾಗೇ ಇಲ್ಲ. ಯಾಕೆ ಗೊತ್ತೇ??

ಇನ್ನು ಟೀಮ್ ಇಂಡಿಯಾದ ಮೊಹಮ್ಮದ್ ಶಮಿ (Mohammad Shami) 2 ವಿಕೆಟ್ಸ್, ಮೊಹಮ್ಮದ್ ಸಿರಾಜ್ (Mohammad Siraj) 4 ವಿಕೆಟ್ಸ್ ಹಾಗೂ ಶಾರ್ದೂಲ್ ಠಾಕೂರ್ (Shardul Thakur) 2 ವಿಕೆಟ್ಸ್ ಪಡೆದರು. ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ ಮತ್ತೊಬ್ಬ ಆಟಗಾರ ಕೆ.ಎಸ್ ಭರತ್ (K S Bharath). ಇವರು ಆಸ್ಟ್ರೇಲಿಯಾ ತಂಡದ ಮೂರು ಬ್ಯಾಟ್ಸ್ಮನ್ ಗಳ ಕ್ಯಾಚ್ ಹಿಡಿದರು. ಓಪನರ್ ಡೇವಿಡ್ ವಾರ್ನರ್, ಉಸ್ಮಾನ್ ಖಾವಾಜ ಮತ್ತು ಟ್ರಾವಿಸ್ ಹೆಡ್ ಅವರ ಕ್ಯಾಚ್ ಹಿಡಿದರು. ಶ್ರೀಕರ್ ಭರತ್ ಅವರು ಇನ್ನು ಓಡಿಐ (ODI) ಮತ್ತು ಟಿ20 ಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಂಡಕ್ಕೆ ಆಯ್ಕೆಯಾಗಿಲ್ಲ..

ಈ ಬಾರಿ WTC ಯಲ್ಲಿ ನೀಡಿರುವ ಅದ್ಭುತ ಪ್ರದರ್ಶನದಿಂದ BCCI ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ಸಂತೋಷವಾದರೆ ಕೆ.ಎಸ್.ಭರತ್ ಅವರು ಶೀಘ್ರದಲ್ಲೆ ಟೀಮ್ ಇಂಡಿಯಾಗೆ ಬರಬಹುದು. ಇದುವರೆಗೂ ಪ್ರಥಮ ದರ್ಜೆ ಪಂದ್ಯಗಳಲ್ಲಿ 9 ಶತಕ ಮತ್ತು 27 ಅರ್ಧಶತಕ ಸಿಡಿಸಿದ್ದಾರೆ ಶ್ರೀಕರ್ ಭರತ್. ಈಗ ರಿಷಬ್ ಪಂತ್ ಅವರು ತಂಡಕ್ಕೆ ಮರಳುವ ಸೂಚನೆ ಇಲ್ಲ, ಕೆ.ಎಲ್.ರಾಹುಲ್ ಅವರು ಸರ್ಜರಿ ಬಳಿಕ ಕ್ರಿಕೆಟ್ ಇಂದ ಸ್ವಲ್ಪ ದೂರವೇ ಇರಲಿದ್ದಾರೆ. ಹಾಗಾಗಿ ಕೆ.ಎಸ್.ಭರತ್ ಅವರು ಈ ಸ್ಥಾನ ತುಂಬುವುದಕ್ಕೆ ಸರಿಯಾದ ಆಟಗಾರ ಆಗಿದ್ದಾರೆ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿರುವ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಈ ಬಿಸಿನೆಸ್ ಮಾಡಿ, ಕೈ ತುಂಬಾ ಕಾಸು, ನಿಮಗೆ ನೀವೇ ಬಾಸ್. ಲಕ್ಷ ಲಕ್ಷ ಆದಾಯ ಫಿಕ್ಸ್. ಏನು ಗೊತ್ತೇ?

Comments are closed.