Free Bus Pass: ಖಾಸಗಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಕೊಡುತ್ತಾರೆಯೇ? ರಾಮ ಲಿಂಗ ರೆಡ್ಡಿ ಯವರು ಹೇಳಿದ್ದೇನು ಗೊತ್ತೇ??

Free Bus Pass: ಕರ್ನಾಟಕದ ವಿಧಾನಸಭಾ ಎಲೆಕ್ಷನ್ ನಲ್ಲಿ ಬಹುಮತ ಸಾಧಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲೇ ಜನರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು. ಆ ಯೋಜನಗೆಳಲ್ಲಿ ಒಂದು ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕೊಟ್ಟಿರುವ ಶಕ್ತಿ ಯೋಜನೆ ಆಗಿದೆ. ಈ ಯೋಜನೆಯನ್ನು ಜೂನ್ 11ರಿಂದ ಅಂದರೆ ಇಂದಿನಿಂದ ಜಾರಿಗೆ ತರಲಾಗಿದೆ..

ramalinga reddy about private bus free pass 1 Free Bus Pass:
Free Bus Pass: ಖಾಸಗಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಕೊಡುತ್ತಾರೆಯೇ? ರಾಮ ಲಿಂಗ ರೆಡ್ಡಿ ಯವರು ಹೇಳಿದ್ದೇನು ಗೊತ್ತೇ?? 2

ಈ ಯೋಜನೆಯು ಇಂದು ಮಧ್ಯಾಹ್ನದಿಂದ ಜಾರಿಗೆ ಬಂದಿದ್ದು, ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಪ್ರಸ್ತುತ ಸರ್ಕಾರ ಹೇಳಿರುವ ಹಾಗೆ, ರಾಜ್ಯದ ಎಲ್ಲಾ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಓಡಾಡಬಹುದು ಎಂದು ತಿಳಿಸಿದೆ, ಎಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದಿಲ್ಲ. ರಾಜ್ಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ಸರ್ಕಾರ ತಿಳಿಸಿತ್ತು. ಇದನ್ನು ಓದಿ..Gruha lakshmi: ಗೃಹ ಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್- ಮತ್ತಷ್ಟು ಜನರ ಹೊರಕ್ಕೆ, ಈ ಬಾರಿ ಹೊರಹೋದದ್ದು ಯಾರು ಗೊತ್ತೇ??

ಈ ಯೋಜನೆಗಾಗಿ ಹೆಣ್ಣುಮಕ್ಕಳು ಸ್ಮಾರ್ಟ್ ಕಾರ್ಡ್ ಮಾಡಿಸಬೇಕು. ಸ್ಮಾರ್ಟ್ ಕಾರ್ಡ್ ಮಾಡಿಸಲು 3 ತಿಂಗಳ ಸಮಯ ನೀಡಲಾಗಿದೆ.. ಅದುವರೆಗು ಮಹಿಳೆಯರು ಸ್ಮಾರ್ಟ್ ಕಾರ್ಡ್ ಇಲ್ಲದೆಯೇ ಓಡಾಡಬಹುದು ಎಂದು ತಿಳಿಸಲಾಗಿತ್ತು. ಇನ್ನು ಖಾಸಗಿ ಬಸ್ ಗಳಲ್ಲಿ ಹೆಣ್ಣುಮಕ್ಕಳು ಉಚಿತವಾಗಿ ಪ್ರಯಾಣ ಮಾಡಬಹುದಾ ಎನ್ನುವ ಮತ್ತೊಂದು ವಿಚಾರ ಚರ್ಚೆ ಆಗುತ್ತಿದ್ದು, ಅದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ.

“ಪ್ರೈವೇಟ್ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುತ್ತಾ ಎನ್ನುವ ಬಗ್ಗೆ ಚರ್ಚೆ ಮಾಡಿಲ್ಲ, ಶಕ್ತಿ ಯೋಜನೆಗೆ ಸಿಎಂ ಅಧಿಕೃತವಾಗಿ ಚಾಲನೆ ನೀಡುತ್ತಾರೆ. ನಂತರ ಪ್ರೈವೇಟ್ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುತ್ತಾ ಎನ್ನುವ ಬಗ್ಗೆ ನಿರ್ಧಾರ ಮಾಡಲಾಗುತ್ತೆ..ನಾಳೆ ಕೆಲವು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುತ್ತೇವೆ, ಸ್ಮಾರ್ಟ್ ಕಾರ್ಡ್ ಮಾಡಿಸಲು 3 ತಿಂಗಳ ಸಮಯ ಇದೆ. ಫ್ರೀ ಬಸ್ ನಲ್ಲಿ ನಾಳೆ ಸಿಎಂ ಅವರು ಟಿಕೆಟ್ ಕೊಡೋದಿಲ್ಲ, ಅದಕ್ಕೆ ಕಂಡಕ್ಟರ್ ಇರುತ್ತಾರೆ, ಡ್ರೈವರ್ ಇರುತ್ತಾರೆ. ಉದ್ಘಾಟನೆ ಆದ ನಂತರ ಬಸ್ ನಲ್ಲಿ ಒಂದು ರೌಂಡ್ ಹೋಗುತ್ತೇವೆ ಅಷ್ಟೇ..” ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ಬಿಟ್ಟಿ ಯೋಜನೆಗಳನ್ನು ಸರಿ ತೂಗಿಸಲು ಮತ್ತೊಮ್ಮೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ- ಇದು ನಿಜಕ್ಕೂ ಒಳ್ಳೆಯದ??

Comments are closed.