Priyank Kharge: ಇರುವ ಐದಕ್ಕೆ ಷರತ್ತಿನ ಮೇಲೆ ಷರತ್ತು ಹಾಕಿರುವ ಕಾಂಗ್ರೆಸ್- ಆದರೆ ಪ್ರಿಯಾಂಕ್ ಖರ್ಗೆ ಎರಡು ಹೆಜ್ಜೆ ಮುಂದಕ್ಕೆ ಹೋಗಿ, ಮತ್ತಷ್ಟು ಹೊಸ ಗ್ಯಾರಂಟಿ. ಈ ಬಾರಿ ಏನಂತೆ ಗೊತ್ತೆ?

Priyank Kharge: ಕಾಂಗ್ರೆಸ್ (Congress) ಸರ್ಕಾರ ಈಗ ಜನರಿಗೆ 5 ಯೋಜನೆಗಳನ್ನು ನೀಡಿದ್ದು, ಅದರಲ್ಲಿ ಮೊದಲ ಯೋಜನೆಯಾಗಿ ಶಕ್ತಿ ಯೋಜನೆ ಜಾರಿಗೆ ಬಂದಿದೆ. ಐದರಲ್ಲಿ ನಾಲ್ಕು ಯೋಜನೆಗಳು ಮಹಿಳೆಯರ ಪರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ವೇಳೆ ಪ್ರಿಯಾಂಕ್ ಖರ್ಗೆ (Priyank kharge) ಅವರು ಮಾಧ್ಯಮದ ಎದುರು ಎದುರು ಮಾತನಾಡಿ, ಕಾಂಗ್ರೆಸ್ ಸರ್ಕಾರ 7ನೇ ಗ್ಯಾರೆಂಟಿ ಯೋಜನೆ ಕೊಡುತ್ತದೆ ಎಂದು ಹೇಳಿದ್ದಾರೆ.

priyank kharge announces new guarantees Priyank Kharge:

ಬಿಜೆಪಿ (BJP) ಸರ್ಕಾರದ ವಿರುದ್ಧ ಕಿಡಿ ಕಾರಿದ್ದ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ತನಿಖೆ ನಡೆಸಿ ಶೀಘ್ರದಲ್ಲಿ ಎಲ್ಲವನ್ನು ಪತ್ತೆ ಮಾಡಲಾಗುತ್ತದೆ ಇದು ಆರನೇ ಗ್ಯಾರಂಟಿ ಎಂದಿದ್ದರು. ಆದರೆ ಈಗ ಪ್ರಿಯಾಂಕ್ ಖರ್ಗೆ ಅವರು, ತಮ್ಮ ವಿದ್ಯಾರ್ಹತೆ ಬಗ್ಗೆ ಚಕಾರ ತೆಗೆದಿರುವ ಬಿಜೆಪಿ ಸರ್ಕಾರದ ಬಗ್ಗೆ ಕಿಡಿಕಾರಿದ್ದಾರೆ. ನನ್ನ ವಿದ್ಯಾರ್ಹತೆ ಏನು ಎನ್ನುವುದನ್ನು ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ನಲ್ಲಿ ತಿಳಿಸಿದ್ದೇನೆ, ಅದರಲ್ಲಿ ನೋಡಿಕೊಳ್ಳಲಿ. ನನ್ನ ಓದಿನ ಬಗ್ಗೆ ಆಸಕ್ತಿ ತೋರಿಸುತ್ತಿರುವವ ಮೋದಿ (Modi) ಅವರ ವಿದ್ಯಾರ್ಹತೆ ಬಗ್ಗೆ ತಿಳಿದುಕೊಳ್ಳಲಿ.. ಇದನ್ನು ಓದಿ..Free Bus Pass: ಖಾಸಗಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಕೊಡುತ್ತಾರೆಯೇ? ರಾಮ ಲಿಂಗ ರೆಡ್ಡಿ ಯವರು ಹೇಳಿದ್ದೇನು ಗೊತ್ತೇ??

ದೆಹಲಿ ಸಿಎಂ ಕೇಜ್ರಿವಾಲ್ (Kejrival) ಅವರು ಮೋದಿ ಅವರ ವಿದ್ಯಾರ್ಹತೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವರ ವಿರುದ್ಧ ಕೇಸ್ ಹಾಕಲಾಯಿತು. ಮೊದಲು ಅವರ ವಿದ್ಯಾರ್ಹತೆ ಬಗ್ಗೆ ಉತ್ತರ ಕೊಡಲಿ, ನನ್ನ ವಿದ್ಯಾರ್ಹತೆ ಬಗ್ಗೆ ಉತ್ತರ ಕೊಡುವ ಅಗತ್ಯ ನನಗಿಲ್ಲ ಎಂದಿದ್ದಾರೆ ಪ್ರಿಯಾಂಕ್ ಖರ್ಗೆ. ನನ್ನನ್ನು ಜನ ಆರಿಸಿದ್ದಾರೆ, ನನ್ನ ವಿರುದ್ಧ ಫೇಕ್ ಸುದ್ದಿಗಳು ಹರಿದಾಡುತ್ತಿದೆ. ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಉಲ್ಲೇಖ ಮಾಡಲಾಗಿದೆ, ಸುಪ್ರೀಂ ಕೋರ್ಟ್ ಕೂಡ ಹೀಗೆ ಸುಳ್ಳು ಮಾಹಿತಿ ಹಬ್ಬಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲು ವಿಶೇಷ ತಂಡ ಶುರು ಮಾಡಬೇಕು ಎಂದಿದೆ..

ನಮ್ಮ ಸರ್ಕಾರಕ್ಕೆ ಸ್ವಲ್ಪ ಜನರು ಸಮಯ ನೀಡಿ, ನಾವು 6ನೇ ಯೋಜನೆಯನ್ನು ಈಗಾಗಲೇ ಹೇಳಿದ್ದೇವೆ, 7ನೇ ಯೋಜನೆಯನ್ನು ಸಹ ಜಾರಿಗೆ ತರುತ್ತೇವೆ..ಸೋಷಿಯಲ್ ಮೀಡಿಯಾದಲ್ಲಿ ನೋಟ್ ಬ್ಯಾನ್ ಬಗ್ಗೆ, ಭಾರತ ದೇಶದ ಆರ್ಥಿಕ ಸ್ಥಿತಿ ಬಗ್ಗೆ, ನಾಯಕರ ಬಗ್ಗೆ, ಇತಿಹಾಸ ಬದಲಾಯಿಸುವ ಬಗ್ಗೆ ಯಾರೆಲ್ಲಾ ಹಾರಾಡುತ್ತಿದ್ದಾರೋ, ಅವರೆಲ್ಲ ವಿರುದ್ಧ್ ಕ್ರಮ ತೆಗೆದುಕೊಳ್ಳುಲಾಗುತ್ತದೆ. ಸ್ವಲ್ಪ ಸಮಯ ಕೊಟ್ಟರೆ ಕಾನೂನಿನ ಮೂಲಕವೇ ಎಲ್ಲವನ್ನು ಮಾಡುತ್ತೇವೆ..” ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನು ಓದಿ..Kannada News: ಬಿಟ್ಟಿ ಯೋಜನೆಗಳನ್ನು ಸರಿ ತೂಗಿಸಲು ಮತ್ತೊಮ್ಮೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ- ಇದು ನಿಜಕ್ಕೂ ಒಳ್ಳೆಯದ??

Comments are closed.