Gruhajyothi: ಇದಪ್ಪ ಕಾಮಿಡಿ ಅಂದ್ರೆ: ಹೊಸದಾಗಿ ಮನೆ ಕಟ್ಟಿದ್ದರೆ ಉಚಿತ ವಿದ್ಯುತ್ ಕತೆ ಏನಾಗಲಿದೆ ಗೊತ್ತೇ?? ಸಚಿವರೇ ನಗು ಬರುವಂತೆ ಹೇಳಿದ್ದೇನು ಗೊತ್ತೇ??

Gruhajyothi: ನಮ್ಮ ರಾಜ್ಯದಲ್ಲಿ ಹೊಸ ಸರ್ಕಾರ ಬಂದು 5 ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ ಗೃಹಜ್ಯೋತಿ ಯೋಜನೆ ಕೂಡ ಒಂದು, ಈ ಯೋಜನೆಯ ಬಗ್ಗೆ ಕೆಲವು ಗೊಂದಲಗಳು ಜನರಲ್ಲಿ ಇತ್ತು. ಮೊದಲಿಗೆ ರಾಜ್ಯದ ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿತ್ತು, ಆದರೆ ನಂತರ ಕೆಲವು ನಿಯಮಗಳನ್ನು ತರಲಾಯಿತು.

kj george explains gruhajyothi rules for new home 1 Gruhajyothi:

ಪ್ರತಿ ಮನೆಯ 1 ವರ್ಷದ ವಿದ್ಯುತ್ ಬಳಕೆಯ ಸರಾಸರಿ ತೆಗೆದುಕೊಂಡು, ಎಷ್ಟು ಬರುತ್ತದೆ ಅಷ್ಟಕ್ಕೇ 10% ಹೆಚ್ಚು ಸೇರಿಸಿ, ಅಷ್ಟು ಯೂನಿಟ್ ವಿದ್ಯುತ್ ಬಳಸಬಹುದು ಎಂದು ಸರ್ಕಾರ ಹೇಳಿತ್ತು. ಆದರೆ ಇದರಿಂದ ಜನರಿಗೆ ಅಸಮಾಧಾನ ಉಂಟಾಗಿತ್ತು, ಜೊತೆಗೆ ಬಾಡಿಗೆ ಮನೆಗೆ ಹೋದವರ ಕಥೆ ಹೇಗೆ ಎಂದು ಗೊಂದಲ ಇತ್ತು, ಅದಕ್ಕೆ ಉತ್ತರ ಕೊಟ್ಟ ರಾಜ್ಯ ಸರ್ಕಾರ, ಬಾಡಿಗೆ ಮನೆಯವರಿಗೆ ವಿದ್ಯುತ್ ಫ್ರೀ ಇರುತ್ತದೆ ಎಂದು ಹೇಳಿತು. ಇದನ್ನು ಓದಿ..Priyank Kharge: ಇರುವ ಐದಕ್ಕೆ ಷರತ್ತಿನ ಮೇಲೆ ಷರತ್ತು ಹಾಕಿರುವ ಕಾಂಗ್ರೆಸ್- ಆದರೆ ಪ್ರಿಯಾಂಕ್ ಖರ್ಗೆ ಎರಡು ಹೆಜ್ಜೆ ಮುಂದಕ್ಕೆ ಹೋಗಿ, ಮತ್ತಷ್ಟು ಹೊಸ ಗ್ಯಾರಂಟಿ. ಈ ಬಾರಿ ಏನಂತೆ ಗೊತ್ತೆ?

ಇದರ ಜೊತೆಗೆ ಹೊಸದಾಗಿ ಬಾಡಿಗೆ ಮನೆಗೆ ಹೋದವರಿಗೆ ಮತ್ತು ಹೊಸದಾಗಿ ಮನೆ ಕಟ್ಟಿಸಿದವರಿಗೆ ಹೇಗೆ ಎನ್ನುವ ಪ್ರಶ್ನೆ ಇತ್ತು, ಅದಕ್ಕೀಗ ಇಂಧನ ಸಚಿವ ಕೆ.ಜೆ.ಜಾರ್ಜ್ (K J George) ಅವರು ಸ್ಪಷ್ಟನೆ ನೀಡಿದ್ದಾರೆ. ಹೊಸದಾಗಿ ಮನೆ ಕಟ್ಟಿದವರಿಗೆ ಹಾಗೂ ಹೊಸದಾಗಿ ಬಾಡಿಗೆ ಮನೆಗೆ ಹೋದವರಿಗೆ, 53ಯೂನಿಟ್+10% ಒಟ್ಟು 58 ಯೂನಿಟ್ ಉಚಿತವಾಗಿ ಸಿಗುತ್ತದೆ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೊಡನೆ ಈ ಬಗ್ಗೆ ಚರ್ಚೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದು ವರ್ಷದ ಲೆಕ್ಕಾಚಾರ ಪಡೆಯದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈಗ ಸಧ್ಯಕ್ಕೆ ರಾಜ್ಯದಲ್ಲಿ ವಿದ್ಯುತ್ ಗೆ ತೊಂದರೆ ಆಗುವುದಿಲ್ಲ, ಮಳೆ ಬರುವುದಕ್ಕೆ ತುಂಬಾ ಸಮಯ ಇದೆ ಎಂದಿದ್ದಾರೆ.. ಈ ವೇಳೆ ಜನರಿಗೆ ಅಸಮಾಧಾನ ಉಂಟಾಗಿದ್ದು, ಇಷ್ಟು ಯೂನಿಟ್ ವಿದ್ಯುತ್ ಎಲ್ಲಿಗೆ ಸಾಲುತ್ತದೆ, ಈ ಮೊದಲು ಇದ್ದ ಬೆಲೆ ಇದ್ದಿದ್ದರೆ ಕಟ್ಟಬಹುದಿತ್ತು, ಆದರೆ ಈಗ ಬೆಲೆ ಏರಿಸಿ ವಿದ್ಯುತ್ ಬಿಲ್ ಕಟ್ಟುವುದಕ್ಕೆ ಕಷ್ಟ ಆಗುತ್ತದೆ.. ಎಂದು ಜನರು ಅಸಮಾಧಾನಗೊಂಡಿದ್ದಾರೆ. ಇದನ್ನು ಓದಿ..Tirupati: ಕಡಿಮೆ ಬೆಳೆಗೆ ಇನ್ನು ಮುಂದೆ ನೀವು ತಿರುಪತಿಗೆ ಹೋಗಬಹುದು- ಅದು ರಾಜಧಾನಿ ಬೆಂಗಳೂರಿನಿಂದ. ಹೇಗೆ ಗೊತ್ತೇ??

Comments are closed.