Mysore Expressway: ಬೆಂಗಳೂರು-ಮೈಸೂರ್ ಟೋಲ್ ದರ ಹೆಚ್ಚಳದ ಬಗ್ಗೆ ಪ್ರತಾಪ್ ಸಿಂಹ ಹೇಳಿದ್ದೇನು ಗೊತ್ತೇ?? ಭೇಷ್ ಎಂದ ನೆಟ್ಟಿಗರು

Mysore Expressway: ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಟೋಲ್ ಬೆಲೆ ಹೆಚ್ಚಾದ ಬಳಿಕ ಈ ವಿಚಾರದ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಟೋಲ್ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಜಾಸ್ತಿ ಮಾಡಿದ್ದಕ್ಕೆ ಜನರು ಆಕ್ರೋಶಗೊಂಡಿದ್ದರು. ಸಾಮಾನ್ಯ ಜನರು ಟೋಲ್ ಕಟ್ಟುವುದು ಹೇಗೆ ಎಂದು ಸಾಕಷ್ಟು ಜನರು ಗರಂ ಆಗಿದ್ದರು. ಈ ವಿಷಯದ ಬಗ್ಗೆ ಈಗ ಮೈಸೂರಿನ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯೆ ನೀಡಿದ್ದಾರೆ..

pratap simha reacted to toll increse and fans are not happy Mysore Expressway:

ಟೋಲ್ ನಲ್ಲಿ ಈಗ ಫಾಸ್ಟ್ ಟ್ಯಾಗ್ ಕೆಲಸ ಮಾಡುತ್ತಿದೆ. ಜೂನ್ 1 ರಿಂದಲೇ ಟೋಲ್ ಬೆಲೆ ಏರಿಕೆ ಆಗಿರುವುದು ಹಲವರ ಗಮನಕ್ಕೆ ಬಂದಿರಲಿಲ್ಲ. ಈಗ ಒಂದೆರಡು ದಿನಗಳ ಹಿಂದೆಯಷ್ಟೇ ಜನರಿಗೆ ಟೋಲ್ ಬೆಲೆ ಏರಿಕೆಯ ಅರಿವಾಯಿತು. ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಟೋಲ್ ಬೆಲೆಯನ್ನು 22% ಜಾಸ್ತಿ ಮಾಡಲಾಗಿದೆ. ಇದರ ಬಗ್ಗೆ ಪ್ರತಾಪ್ ಸಿಂಹ ಅವರು ಮಾತನಾಡಿ, ಏಪ್ರಿಲ್ ನಲ್ಲೇ ಟೋಲ್ ಬೆಲೆ ಏರಿಕೆ ಆಗಬೇಕಿತ್ತು.. ಆಗ ಆಗಿರಲಿಲ್ಲ, ಈಗ ಆಗಿದೆ ಎಂದು ಹೇಳಿದ್ದಾರೆ.. ಇದನ್ನು ಓದಿ..Siddaramaiah: ಗ್ಯಾರಂಟೀಗೆ ಹಣ ಇಲ್ಲದೆ ಇದ್ದರೂ ಸಚಿವರಿಗೆ ಮಸ್ತ್ ಕಾರ್- ಸಿದ್ದು ಗೆ ಬರುತ್ತಿರುವ ಈ ವಿಶೇಷ ಕಾರಿನ ಬೆಲೆ ಎಷ್ಟು ಗೊತ್ತೆ? ಏನೆಲ್ಲಾ ಇರುತ್ತದೆ ಗೊತ್ತೇ?

ಮೈಸೂರಿನಲ್ಲಿ ಮಾಧ್ಯಮಗಳ ಎದುರು ಮಾತನಾಡಿದ ಪ್ರತಾಪ್ ಸಿಂಹ ಅವರು, “ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ವರ್ಕ್ ಆಗುತ್ತಿರೋದ್ರಿಂದ ಯಾವುದೇ ಸಮಸ್ಯೆ ಇಲ್ಲ..ಟೋಲ್ ಸಂಗ್ರಹ ಮಾಡುವ ಶುರುವಿನಲ್ಲಿ ಸಿಸ್ಟಮ್ ಸಮಸ್ಯೆ ಇತ್ತು. ಆ ಥರದ ಯಾವುದೇ ಸಮಸ್ಯೆ ಈಗ ಇಲ್ಲ. ಫಾಸ್ಟ್ ಟ್ಯಾಗ್ ಇರದೇ ಹೋಗಿದ್ದರೆ ಡಬಲ್ ಚಾರ್ಜ್ ಕಟ್ಟವುದು ಕಡ್ಡಾಯ ಆಗಿರುತ್ತಿತ್ತು. ಇಡೀ ಭಾರತ ದೇಶದಲ್ಲಿ ಹಣಕಾಸಿನ ವರ್ಷ ಶುರುವಾದಾಗ ಟೋಲ್ ಬೆಲೆ ಪ್ರತಿ ವರ್ಷ ಜಾಸ್ತಿಯಾಗುತ್ತದೆ.

ಈ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಗೆ ಏಪ್ರಿಲ್ ನಲ್ಲೇ ಟೋಲ್ ಬೆಲೆ ಜಾಸ್ತಿ ಆಗಬೇಕಿತ್ತು. ಆಗ ಆಗಲಿಲ್ಲ, ಈಗ 22% ಜಾಸ್ತಿಯಾಗಿದೆ..” ಎಂದು ಪ್ರತಾಪ್ ಸಿಂಹ ಅವರು ಹೇಳಿದ್ದಾರೆ. ಇನ್ನು ಈ ಹೇಳಿಕೆಯ ಬಗ್ಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರತಾಪ್ ಸಿಂಹ ಅವರ ಬಗ್ಗೆ ಅಸಮಾಧಾನಗೊಂಡು ಪ್ರತಾಪ್ ಸಿಂಹ ಅವರನ್ನು ಸೋಷಿಯಲ್ ಮೀಡಿಯಾ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ಅವರನ್ನು ಮಾರ್ಮಿಕವಾಗಿ ಭೇಷ್ ಎಂದಿದ್ದಾರೆ. ಇದನ್ನು ಓದಿ..Best Jobs: ನೀವು ಭಾರತದಲ್ಲಿಯೇ ಇದ್ದು ಹಣ ಮಾಡಬೇಕು ಎಂದರೆ, ಈ ಉದ್ಯೋಗಗಳು ಬೆಸ್ಟ್. ಜಾಸ್ತಿ ಸಂಬಳ ನೀಡುವ ಉದ್ಯೋಗಗಳು ಯಾವುದು ಗೊತ್ತೇ?

Comments are closed.