Siddeshwara Swamy: ಅವರದ್ದು ಇವರದ್ದು ಅಲ್ಲ, ಮೊದಲು ಸಿದ್ದೇಶ್ವರ ಸ್ವಾಮೀಜಿ ರವರ ಬಗ್ಗೆ ಮಕ್ಕಳ ಪುಸ್ತಕದಲ್ಲಿ ಸೇರಿಸಿ- ಈ ಬೇಡಿಕೆ ಇಟ್ಟದ್ದು ಯಾರಿಗೆ ಗೊತ್ತೇ?

Siddeshwara Swamy: ನಮ್ಮ ರಾಜ್ಯದಲ್ಲಿ ಈ ವರ್ಷ ಪಠ್ಯಪುಸ್ತಕಗಳ ಪರಿಷ್ಕರಣೆ ಆಗಲಿದೆ, ಈ ಬಗ್ಗೆ ಶಿಕ್ಷಣ ಸಚಿವರಾದ ಕುಮಾರ್ ಬಂಗಾರಪ್ಪ ಅವರು ಮಾತನಾಡಿ, ಈ ವರ್ಷ ಪಠ್ಯಪುಸ್ತಕಗಳ ಪರಿಷ್ಕರಣೆ ಖಂಡಿತವಾಗಿಯೂ ಆಗುತ್ತದೆ ಎಂದಿದ್ದಾರೆ. ಅದರಂತೆಯೇ ಪಠ್ಯಪುಸ್ತಕಗಳ ಪರಿಷ್ಕರಣೆ ಸಹ ಆಗಿದೆ. ಆದರೆ ಈಗ ವಿಜಯಪುರ ಜಿಲ್ಲೆಯ ಜನರು ಹಾಗೂ ರಾಜಕಾರಣಿಗಳಿಂದ ಪಠ್ಯಪುಸ್ತಕಗಳ ವಿಷಯದ ಬಗ್ಗೆ ಹೊಸದೊಂದು ಬೇಡಿಕೆ ಶುರುವಾಗಿದೆ.

siddeshwara swamy lesson Siddeshwara Swamy:

ಅದೇನು ಎಂದರೆ, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಶ್ರೀಗಳು ಶ್ರೇಷ್ಠ ವ್ಯಕ್ತಿ ಕರ್ನಾಟಕದಲ್ಲಿ ಅತಿಹೆಚ್ಚು ಭಕ್ತರನ್ನು ಹೊಂದಿರುವುದು ಶ್ರೀಗಳು, ಅವರ ಅಂತಿಮ ದರ್ಶನಕ್ಕೆ 25 ಲಕ್ಷಕ್ಕಿಂತ ಹೆಚ್ಚಿನ ಭಕ್ತರು ಬಂದಿದ್ದರು, ಅದನ್ನು ನೋಡಿದರೆ ಅವರ ವ್ಯಕ್ತಿತ್ವ ಎಂಥದ್ದು ಜನರಿಗೆ ಅವರನ್ನು ಕಂಡರೆ ಎಷ್ಟು ಭಕ್ತಿ ಪ್ರೀತಿ ಇದೆ ಎನ್ನುವುದು ಗೊತ್ತಾಗುತ್ತದೆ. ಅವರ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಇದನ್ನು ಓದಿ..Ola Electric: ನೀವು ಸುಲಭವಾಗಿ ಓಲಾ ಸ್ಕೂಟರ್ ಖರೀದಿ ಮಾಡಬೇಕು ಎಂದು ಕೊಂಡಿದ್ದೀರಾ? ಹಾಗಿದ್ದರೆ ನಿಮಗಿದೆ ಸಿಹಿ ಸುದ್ದಿ- ಏನು ಗೊತ್ತೇ?

ಶ್ರೀಗಳ ಆಸೆಯ ಹಾಗೆ ದೇವಸ್ಥಾನ ಮಾಡಲಿಲ್ಲ, ಸ್ಮಾರಕ ಮಾಡಲಿಲ್ಲ, ಗದ್ದುಗೆಯ ನಿರ್ಮಾಣವನ್ನು ಸರ್ಕಾರ ಮಾಡಿಲ್ಲ. ಶ್ರೀಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಹಾಗೆ ಮಾಡಲು ಇರುವುದು ಇಂದೇ ಮಾರ್ಗ, ಅದು ಪಠ್ಯಪುಸ್ತಕದ ಮೂಲಕ ಸರ್ಕಾರ ಅದನ್ನಾದರು ಮಾಡಬೇಕು..ಸರ್ಕಾರ ಬದಲಾವಣೆ ಆದಾಗ ಅವರ ಬೇಕಾದಂಥ ವಿಚಾರಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಿಕೊಳ್ಳುತ್ತಾರೆ.. ಶ್ರೀಗಳ ಬಗ್ಗೆ ಪಾಠವನ್ನು ಪ್ರಾಥಮಿಕ ಮತ್ತು ಹೈಸ್ಕೂಲ್ ಪಠ್ಯಪುಸ್ತಕದಲ್ಲಿ ಇಡಬೇಕು ಎನ್ನುವುದು ಹಲವರ ಅಭಿಪ್ರಾಯ.

ಜ್ಞಾನಾಶ್ರಮದ ಶ್ರೀಗಳು ಜ್ಞಾನವಂತರು, ನೀತಿವಂತರು ಆಗಿದ್ದರು. ಅಂಥ ಶ್ರೇಷ್ಠ ವ್ಯಕ್ತಿಯ ಬಗ್ಗೆ ಮಕ್ಕಳಿಗೆ ತಿಳಿಸಿದರೆ ಮಕ್ಕಳಲ್ಲಿ ನೈತಿಕತೆ ಬೆಳೆಯುತ್ತದೆ ಎಂದು ಹಲವು ಕಾರಣಗಳನ್ನು ನೀಡಿ, ವಿಜಯಪುರದ ಜನರು ಹಾಗೂ ರಾಜಕಾರಣಿಗಳು ಒಗ್ಗಟ್ಟಿನಲ್ಲಿ ನಿಂತು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಸರ್ಕಾರಕ್ಕೆ ಕೊಂಚ ತಲೆ ನೋವಾಗಿ ಪರಿಣಮಿಸಬಹುದು ಎನ್ನಲಾಗುತ್ತಿದೆ. ಸರ್ಕಾರ ಈ ಬೇಡಿಕೆಯನ್ನು ಈಡೇರಿಸುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Transport Minister: ಈಗಾಗಲೇ ಹೆಣಗಾಡುತ್ತಿರುವ ಸಾರಿಗೆ ಇಲಾಖೆಯ ನಷ್ಟದ ಬಗ್ಗೆ ಕೇಳಿದಕ್ಕೆ ಸಚಿವರು ಹೇಳಿದ್ದೇನು ಗೊತ್ತೇ? ಟ್ರೊಲ್ ಮಾಡಿದ ನೆಟ್ಟಿಗರು, ಇವರು ಸಚಿವರು.

Comments are closed.