BCCI: ಕೊನೆಗೂ ಗಟ್ಟಿ ನಿರ್ಧಾರ ಮಾಡಿತೇ ಬಿಸಿಸಿಐ – ಹಿರಿಯ ಆಟಗಾರರಿಗೆ ಕೈ ಕೊಟ್ಟು ಆಯ್ಕೆ ಮಾಡುತ್ತಿರುವ ಕಿರಿಯ ಆಟಗಾರರು ಯಾರ್ಯಾರು ಗೊತ್ತೇ?

BCCI: ಟೀಮ್ ಇಂಡಿಯಾ ಈಗ ವರ್ಲ್ಡ್ ಟೆಸ್ಟ್ ಚಾಂಪಿಯನ್ಷಿಪ್ ನಲ್ಲಿ ಸೋತ ನಂತರ ಜುಲೈ 12 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಪಂದ್ಯಗಳನ್ನು ಆಡಲಿದೆ. ಇದು 2 ಟೆಸ್ಟ್ ಪಂದ್ಯಗಳಿಂದ ಶುರುವಾಗಲಿದೆ. ಹಾಗೆಯೇ ಇದರಲ್ಲಿ ಸೀಮಿತ ಓವರ್ ಗಳ ಪಂದ್ಯವನ್ನು ಆಡಲಿದ್ದು, ಇದರ ಜೊತೆಗೆ ಟೆಸ್ಟ್ ತಂಡದಲ್ಲಿ ಸಹ ಬದಲಾವಣೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. WTC ಫೈನಲ್ಸ್ ನಲ್ಲಿ ಭಾರತ ಸೋತಾಗಿನಿಂದ ರೋಹಿತ್ ಶರ್ಮ ಅವರ ಕ್ಯಾಪ್ಟನ್ಸಿ ಬಗ್ಗೆ ಸಾಕಷ್ಟು ಮಾತುಗಳು ಕೇಳುಬಂದಿದ್ದವು. ಇದರ ಬಗ್ಗೆ ಬಿಸಿಸಿಐ ಏನು ಪ್ರತಿಕ್ರಿಯೆ ಕೊಟ್ಟಿರಲಿಲ್ಲ.

bcci test team BCCI:

ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಇಬ್ಬರು ಆಟಗಾರರ ಎಂಟ್ರಿ ಆಗುತ್ತದೆ ಎನ್ನಲಾಗಿದೆ. ಜುಲೈ 12ರಿಂದ ವೆಸ್ಟ್ ಇಂಡೀಸ್ ವರ್ಸಸ್ ಭಾರತ ಸೀರೀಸ್ ಶುರುವಾಗಲಿದ್ದು, ಇದರಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ ಎನ್ನಲಾಗಿದೆ. ಐಪಿಎಲ್ ನಲ್ಲಿ ಶೈನ್ ಆದ ಯುವ ಆಟಗಾರರು ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಇವರಿಬ್ಬರನ್ನು ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿ, ಓಪನರ್ ಗಳಾಗಿ ಬಿಡಬಹುದು ಎನ್ನಲಾಗುತ್ತಿದೆ. ಇದನ್ನು ಓದಿ..Tax Exemptions: ಇಡೀ ಭಾರತದಲ್ಲಿ ಯಾವ್ಯಾವ ಸಮಯದಲ್ಲಿ ತೆರಿಗೆ ಕಟ್ಟದೆ ಇರಬಹುದು ಗೊತ್ತೇ? ಎಷ್ಟೆಲ್ಲ ಹಣ ಉಳಿಸಬಹುದು ಗೊತ್ತೇ??

ವೆಸ್ಟ್ ಇಂಡೀಸ್ ವಿರುದ್ಧದ ಸೀರೀಸ್ ನ ಆರಂಭದ ಪಂದ್ಯಗಳು ಟ್ರಿನಿಡಾಡ್ ಹಾಗೂ ಡೊಮಿನಿಕಾದಲ್ಲಿ ನಡೆಯಲಿದೆ. ಈ ಸಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು ಇದಕ್ಕಾಗಿ ಅನುಭವ ಇರುವ ಹಾಗೂ ಹಿರಿಯ ಆಟಗಾರರು ಇಬ್ಬರನ್ನು ಸಹ ತಂಡದಲ್ಲಿ ಇರಿಸಿಕೊಳ್ಳಲಾಗುತ್ತದೆ. 2023-25 ರ WTCಯ ಭಾಗವಾಗಿರಲಿದೆ ಈ ಟೂರ್ನಿ. ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ ಇವರೆಲ್ಲ ಸಮ ವಯಸ್ಸಿನವರಾಗಿರುವ ಕಾರಣ, ಇವರ ಜತೆಗೆ ಯುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಈಗ ಭಾರತ ತಂಡಕ್ಕೆ ಆಯ್ಕೆ ಆಗಬಹುದು ಎನ್ನಲಾಗುತ್ತಿರುವ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಇಬ್ಬರು ಸಹ ಬೆಂಗಳೂರಿನಲ್ಲಿ ಜೂನ್ 28ರಿಂದ ಶುರುವಾಗುವ ದುಲೀಪ್ ಟ್ರೋಫಿಗೆ ಆಯ್ಕೆಯಾಗಿದ್ದಾರೆ. ಋತುರಾಜ್ ಗಾಯಕ್ವಾಡ್ ಅವರು ಮಹಾರಾಷ್ಟ್ರ ಪ್ರೀಮಿಯರ್ ಲೀಗ್ ನಲ್ಲಿ ಪುಣೆ ತಂಡದ ಪರ ಆಡುತ್ತಿದ್ದಾರೆ. ಈ ವರ್ಷದ ಐಪಿಎಲ್ ನಲ್ಲಿ ಇವರಿಬ್ಬರು ಅದ್ಭುತ ಪರ್ಫಾರ್ಮೆನ್ಸ್ ಇಂದ ಬಿಸಿಸಿಐ ಆಯ್ಕೆಗಾರರನ್ನು ಆಕರ್ಷಿಸಿದ್ದಾರೆ. ಇದನ್ನು ಓದಿ..Best Courses: ಕಡಿಮೆ ಓದಿದ್ದರೂ ಬೇಗ ಕೆಲಸ ಪಡೆಯಬೇಕು ಎಂದರೆ ಈ ಕೋರ್ಸ್ ಗಳನ್ನೂ ಮಾಡಿ.- ಕೈತುಂಬಾ ಸಂಬಳದ ಜೊತೆ ಲೈಫ್ ಸೆಟ್ಲ್ ಮಾಡಿಕೊಳ್ಳಿ.

Comments are closed.