Monsoon Rain: ಈ ಬಾರಿ ರೈತರ ಪಾಡು ಕೇಳಲೇ ಬೇಡಿ- ದೇವರೇ ಕರ್ನಾಟಕದ ರೈತರ ಮೇಲೆ ಕರುಣೇನೇ ಇಲ್ಲವೇ- ಮುಂಗಾರಿನ ವಿಷಯದಲ್ಲಿ ಏನಾಗಿದೆ ಗೊತ್ತೇ??

Monsoon Rain: ಈ ವರ್ಷ ಮುಂಗಾರು ಮಳೆ ಜೂನ್ ತಿಂಗಳ ಮೊದಲ ವಾರದಲ್ಲಿ ಬರದೆ ಇದ್ದರು ಸಹ ಎರಡನೇ ವಾರದಲ್ಲಿ ಬರುತ್ತದೆ ಎನ್ನುವ ಭರವಸೆ ಇತ್ತು. ಆದರೆ ಈಗ ಆ ಭರವಸೆ ಸುಳ್ಳಾಗಿದೆ. ಮೂರನೇ ವಾರಕ್ಕೆ ಕಾಲಿಟ್ಟಿದ್ದರು ಮಳೆಯ ಸುಳಿವಿಲ್ಲ. ಎರಡೂವರೆ ದಶಕದಲ್ಲೇ ಇದು ಅತ್ಯಂತ ದೊಡ್ಡ ಕೊರತೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಮಳೆ ಶುರುವಾಗಿ, ಜೂನ್ 4ರಂದು ಕೇರಳ ಪ್ರವೇಶಿಸಿ, ನಂತರ ಕರ್ನಾಟಕದಲ್ಲಿ ಶುರುವಾಗಬೇಕಿತ್ತು. ಆದರೆ ಮುಂಗಾರು ಮಳೆ ಈಗ ಮುಂದಕ್ಕೆ ಹೋಗಿದೆ.

monsoon rain farmers Monsoon Rain:

ಈಗ ರಾಜ್ಯದಲ್ಲಿ 72% ಮಳೆಯ ಕೊರತೆ ಆಗಿದೆ, ಕಳೆದ 28 ವರ್ಷಗಳಲ್ಲಿ ಇದು ಅತಿಹೆಚ್ಚು ಮಳೆಯ ಕೊರತೆ ಆಗಿದೆ. ಇಷ್ಟು ವರ್ಷಗಳ ವರೆಗು ಜೂನ್ ಆರಂಭದಲ್ಲಿ 51ಮಿಲಿ ಮೀಟರ್ ಮಳೆಯಾಗುತ್ತಿತ್ತು, ಆದರೆ ಈ ವರ್ಷ ಒಂದೇ ಒಂದು ಜಿಲ್ಲೆಯಲ್ಲಿ ಕೂಡ ಕನಿಷ್ಠ ಮಳೆ ಕೂಡ ಆಗಿಲ್ಲ. ಇಲ್ಲಿಯವರೆಗೂ ರಾಜ್ಯದಲ್ಲಿ ಆಗಿರುವುದು ಕೇವಲ 14ಮಿಲಿ ಮೀಟರ್ ಅಷ್ಟು ಮಳೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಈ ಪರಿಸ್ಥಿತಿಯಿಂದ ರೈತರು ಬಿತ್ತನೆ ಮಾಡುವುದಕ್ಕೆ ತೊಂದರೆಯಾಗಿದೆ. ಹಿಂಗಾರು ಮುಗಿಯುತ್ತಿದ್ದ ಹಾಗೆ ಜೂನ್ ತಿಂಗಳ ಮೊದಲ ವಾರದಲ್ಲಿ.. ಇದನ್ನು ಓದಿ..Siddeshwara Swamy: ಅವರದ್ದು ಇವರದ್ದು ಅಲ್ಲ, ಮೊದಲು ಸಿದ್ದೇಶ್ವರ ಸ್ವಾಮೀಜಿ ರವರ ಬಗ್ಗೆ ಮಕ್ಕಳ ಪುಸ್ತಕದಲ್ಲಿ ಸೇರಿಸಿ- ಈ ಬೇಡಿಕೆ ಇಟ್ಟದ್ದು ಯಾರಿಗೆ ಗೊತ್ತೇ?

ಬೆಂಗಳೂರು ಮಲೆನಾಡು ಹಾಗೂ ಇನ್ನಿತರ ಕಡೆಗಳಲ್ಲಿ ಮುಂಗಾರು ಮಳೆ ಶುರುವಾಗಬೇಕಿತ್ತು. ಆದರೆ ಬಿಪರ್ ಜಾಯ್ ಚಂಡಮಾರುತದಿಂದ ಮುಂಗಾರು ತಡವಾಗಿದೆ. ಚಂಡಮಾರುತ ಇದ್ದಾಗ ಗಾಳಿ ಸೆಳೆತ ಜಾಸ್ತಿ ಇರುತ್ತದೆ. ಇದರಿಂದ ನೀಲಿ ಆಕಾಶ ಇರಲಿದ್ದು, ಮೋಡ ಇರದೇ ಹೋದರೆ ಮಳೆ ಬರುವುದಿಲ್ಲ., ತಾಪಮಾನ ಜಾಸ್ತಿ ಇರುತ್ತದೆ. ಇನ್ನು ಹವಾಮಾನ ಇಲಾಖೆ ತಿಳಿಸಿರುವ ಪ್ರಕಾರ ಜುಲೈ ಮೊದಲ ವಾರದಲ್ಲಿ ಸಹ ಮಳೆ ಹೆಚ್ಚಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹಾಗಾಗಿ ಕೃಷಿ ಕೆಲಸಗಳು ಸಹ ಇನ್ನು ಶುರುವಾಗಿಲ್ಲ. ನಮ್ಮ ರಾಜ್ಯದಲ್ಲಿ ಮುಂಬರುವ 5 ದಿನಗಳು ಬೇರೆ ಬೇರೆ ಕಡೆ ಮಳೆ ಮುಂದುವರೆಯಬಹುದು ಎನ್ನಲಾಗಿದೆ.

ಕರಾವಳಿ ಪ್ರದೇಶದ ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳ ಹಲವು ಕಡೆಗಳಲ್ಲಿ ಜೂನ್ 23ರವರೆಗು ಮಳೆ ಚೆನ್ನಾಗಿ ಬರಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಾರ್ವಣಗೆರೆ, ತುಮಕೂರು, ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಬೆಳಗಾವಿ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಬಾಗಲಕೋಟೆ, ಕೊಪ್ಪಳ್ಳ, ಯಾದರಿಗಿ, ಬೀದರ್, ಕಲಬುರಗಿ ಮತ್ತು ರಾಯಚೂರು ಇಲ್ಲಿ ಮಳೆ ತುಂಬಾ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಇಲ್ಲಿ ತುಂತುರು ಮಳೆ ಬರಬಹುದು. ಇದನ್ನು ಓದಿ..Business Idea: ಮನೆಯಿಂದ ಹೆಜ್ಜೆ ಹೊರಗಡೆ ಇಡದೇ ಇದ್ದರೂ, ಮಹಿಳ್ಳೆಯರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ? ಮಹಿಳೆಯರಿಗೆ ಸುವರ್ಣಾವಕಾಶ

Comments are closed.