Bank Locker: ನೀವು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ಕಳ್ಳತನ ಆದ್ರೆ- ಏನಾಗುತ್ತದೆ ಗೊತ್ತೆ? ನಿಮಗೆ ಅದು ವಾಪಸ್ಸು ಬರುತ್ತಾ??

Bank Locker: ಸಾಮಾನ್ಯವಾಗಿ ಮನೆಗಳಲ್ಲಿ ಬೆಲೆಬಾಳುವ ಅಮೂಲ್ಯವಾದ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ಇಡುವುದಿಲ್ಲ. ಅವುಗಳನ್ನು ಬ್ಯಾಂಕ್ ಲಾಕರ್ ಗಳಲ್ಲಿ ಸುರಕ್ಷಿತವಾಗಿ ಇಟ್ಟಿರುತ್ತಾರೆ. ಬ್ಯಾಂಕ್ ಲಾಕರ್ ನಲ್ಲಿ ಇಡುವುದು ಸುರಕ್ಷಿತ ಎಂದು ಅಂದುಕೊಂಡರು ಸಹ, ಕೆಲವೊಮ್ಮೆ ಲಾಕರ್ ನಲ್ಲೂ ಕಳ್ಳತನ ಉಂಟಾಗಬಹುದು. ಹಾಗೇನಾದರೂ ನಿಮ್ಮ ಲಾಕರ್ ಇಂದ ಚಿನ್ನಾಭರಣ ಅಥವಾ ಬೇರೆ ವಸ್ತುಗಳು ಕಳ್ಳತನವಾದರೆ ಅದಕ್ಕೆ ಜವಾಬ್ದಾರಿ ಯಾರು ? ಕಳೆದು ಹೋದ ವಸ್ತು ನಿಮಗೆ ವಾಪಸ್ ಸಿಗುತ್ತಾ? ತಿಳಿಸುತ್ತೇವೆ ನೋಡಿ..

bank locker 1 Bank Locker:

ಬ್ಯಾಂಕ್ ನಲ್ಲಿ ನೀವು ಲಾಕರ್ ಪಡೆಯುವುದು ಬಾಡಿಗೆಗೆ ಮನೆಯನ್ನು ಪಡೆದ ಹಾಗೆ, ಬಾಡಿಗೆ ಮನೆಯ ಓನರ್ ಗೆ ಹೇಗೆ ಮನೆಯೊಳಗೆ ಇರುವ ನಿಮ್ಮ ವಸ್ತುಗಳ ಜವಾಬ್ದಾರಿ ಇರುವುದಿಲ್ಲವೋ ಲಾಕರ್ ವಿಷಯದಲ್ಲಿ ಬ್ಯಾಂಕ್ ಗಳದ್ದು ಸಹ ಇದೇ ರೀತಿ ಆಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಮಾತ್ರ ಕಳೆದುಹೋದ ವಸ್ತುಗಳಿಗೆ ಬ್ಯಾಂಕ್ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಬ್ಯಾಂಕ್ ಲಾಕರ್ ಸೇವೆ ತೆಗೆದುಕೊಳ್ಳುವಾಗ, ಒಂದು ಅಗ್ರಿಮೆಂಟ್ ಮಾಡಿಕೊಳ್ಳಲಾಗುತ್ತದೆ, ಅದನ್ನು ಮೆಮೋರಾಂಡಮ್ ಆಫ್ ಲೆಟಿಂಗ್ ಎನ್ನುತ್ತಾರೆ. ಈ ಅಗ್ರಿಮೆಂಟ್ ಪ್ರಕಾರ.. ಮಳೆ, ಬೆಂಕಿ, ಭೂಕಂಪ, ಪ್ರವಾಹ.. ಈ ಥರದ ಸಮಯದಲ್ಲಿ ಗ್ರಾಹಕರ ವಸ್ತುಗಳು ಕಳೆದಹೋದರೆ ಅದು ಬ್ಯಾಂಕ್ ಜವಾಬ್ದಾರಿ ಆಗಿರುವುದಿಲ್ಲ. ಇದನ್ನು ಓದಿ..Motorola Edge 40: ಫೈರ್ – ಬೋಲ್ಟ್ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಹೇಗಿದೆ ಗೊತ್ತೇ?? ದೀರ್ಘ ಬ್ಯಾಟರಿ, ಕರೆ ಮಾಡುವುದರ ಜೊತೆಗೆ ಏನೆಲ್ಲಾ ಇದೆ ಗೊತ್ತೇ? ತಿಳಿದರೆ ಇಂದೇ ಖರೀದಿ ಮಾಡುತ್ತೀರಿ

ಗ್ರಾಹಕರಿಗೆ ಬೇಕಾದ ಸುರಕ್ಷತೆ ಬ್ಯಾಂಕ್ ನ ಮೊದಲ ಪ್ರಾಮುಖ್ಯತೆ ಆಗಿರುತ್ತದೆ. ಸುರಕ್ಷತೆಯ ಬಗ್ಗೆ ಬ್ಯಾಂಕ್ ಕಾಳಜಿ ವಹಿಸುತ್ತದೆ. ಆದರೆ ಲಾಕರ್ ಒಳಗಿರುವ ವಸ್ತುಗಳ ಜವಾಬ್ದಾರಿಯನ್ನು ಬ್ಯಾಂಕ್ ತೆಗೆದುಕೊಳ್ಳುವುದಿಲ್ಲ. ಅದರ ಗ್ರಾಹಕರು ದೂರು ನೀಡಿದಾಗಿನಿಂದ 2022ರ ಜನವರಿ 1ರಿಂದ ಹೊಸ ನಿಯಮ ಜಾರಿಗೆ ಬಂದಿದ್ದು, ಬ್ಯಾಂಕ್ ಲಾಕರ್ ಒಳಗಿರುವ ವಸ್ತುಗಳಿಗೆ ತಾವು ಜವಾಬ್ದಾರರಲ್ಲ ಎಂದು ಬ್ಯಾಂಕ್ ಹೇಳುವ ಹಾಗಿಲ್ಲ ಎನ್ನಲಾಗಿದೆ. ಒಂದು ವೇಳೆ ಕಳ್ಳತನ, ಬೆಂಕಿ ಅವಘಡ, ಕಟ್ಟಡ ಕುಸಿತ ಹೀಗಾದಾಗ ಬ್ಯಾಂಕ್ ನ ಹೊಣೆಗಾರಿಕೆ, ಬ್ಯಾಂಕ್ ಲಾಕರ್ ಬಾಡಿಗೆ ಕೂಡ 100% ಜಾಸ್ತಿಯಾಗುತ್ತದೆ. ಲಾಕರ್ ಅನ್ನು ಸುರಕ್ಷಿತವಾಗಿರಿಸಲು, ದೊಡ್ಡದಾಗಿಯೇ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ .

ಈ ಎಲ್ಲಾ ವಿಚಾರಗಳನ್ನು ಲಾಕರ್ ಅನ್ನು ಬಾಡಿಗೆಗೆ ಪಡೆದ ಎಲ್ಲಾ ಗ್ರಾಹಕರಿಗೂ ಇಮೇಲ್ ಮತ್ತು ಎಸ್.ಎಂ.ಎಸ್ ಮೂಲಕ ತಿಳಿಸುತ್ತಾರೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಯಾರು ಲಾಕರ್ ಹತ್ತಿರ ಹೋಗಿಬರುತ್ತಾರೆ ಎನ್ನುವುದನ್ನು ಸೆರೆಹಿಡಿಯುತ್ತದೆ. ಈ ಡೇಟಾವನ್ನು 180 ದಿನಗಳ ಕಾಲ ಬ್ಯಾಂಕ್ ಕಲೆಕ್ಟ್ ಮಾಡಬೇಕಾಗುತ್ತದೆ. ಒಂದು ವೇಳೆ ಲಾಕರ್ ನಲ್ಲಿರುವ ವಸ್ತುಗಳು ಕಳೆದು ಹೋಗಿ, ಅದಕ್ಕೆ ಕಾರಣ ಬ್ಯಾಂಕ್ ಸಿಬ್ಬಂದಿ ಅಥವಾ ಬ್ಯಾಂಕ್ ನಿರ್ಲಕ್ಷ್ಯತನ ಎಂದು ಸಾಬೀತಾದರೆ, ಅದರ ಹೊಣೆ ಮಾತ್ರ ಬ್ಯಾಂಕ್ ಮೇಲೆ ಬೀಳುತ್ತದೆ. ಅದಕ್ಕೆ ಪರಿಹಾರ ಸಹ ಬ್ಯಾಂಕ್ ಇಂದಲೇ ಸಿಗುತ್ತದೆ. ಇದನ್ನು ಓದಿ..Car Tips: ನಿಮ್ಮ ಕಾರ್ ಕಳ್ಳತನವಾಗದಂತೆ ಎಚ್ಚರ ವಹಿಸುವುದು ಹೇಗೆ?? ಬೆಸ್ಟ್ ಟಿಪ್ಸ್ ಫಾಲೋ ಮಾಡಿದರೆ, ಕಳ್ಳ ಬಂದ್ರು ಏನು ಮಾಡೋಕೆ ಆಗಲ್ಲ.

Comments are closed.