Free Rice: ಅಕ್ಕಿ ಮಾತ್ರ ಬೇಕೇ?? ಅಕ್ಕಿ ಸಿಗಲಿಲ್ಲ ಎಂದರೆ ಈ ರೀತಿ ಮಾಡಬಹುದು ಅಲ್ಲವೇ?? ಕೃಷಿ ಅರ್ಥ ಶಾಸ್ತ್ರಜ್ಞ ಹೇಳಿದ್ದೇನು ಗೊತ್ತೇ?

Free Rice: ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ಅನ್ನಭಾಗ್ಯ ಯೋಜೆನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಜನರು ಸರ್ಕಾರದಿಂದ 10ಕೆಜಿ ಅಕ್ಕಿ ಸಿಗುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರ್ರ್. ಆದರೆ ಈ ಆರೋಪದ ನಡುವೆಯೇ ಕೃಷಿ ಅರ್ಥಶಾಸ್ತ್ರಜ್ಞರಾದ ಪ್ರಕಾಶ್ ಕಮ್ಮರಡಿ ಮತ್ತೊಂದು ಸಲಹೆ ನೀಡಿದ್ದು, ಈ ವಿಚಾರ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

siddaramaiah congress ration Free Rice:

ಈಗ ರಾಜ್ಯದಲ್ಲಿ ಎಲ್ಲರಿಗೂ 10ಕೆಜಿ ಅಕ್ಕಿ ಕೊಡಬೇಕು ಎಂದರೆ 2.28ಲಕ್ಷ ಟನ್ ಗಳಷ್ಟು ಅಕ್ಕಿ ಬೇಕಾಗುತ್ತದೆ, ಕೇಂದ್ರ ಸರ್ಕಾರ ಇಷ್ಟು ಅಕ್ಕಿಯನ್ನು ಪೂರೈಕೆ ಮಾಡಲು ಸಾಧ್ಯವಾಗದೆ ಇದ್ದಾಗ, ರಾಜ್ಯ ಸರ್ಕಾರವು ಬೇರೆ ಬೇರೆ ರಾಜ್ಯಗಳಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಅದರ ಬದಲಾಗಿ 5ಕೆಜಿ ಅಕ್ಕಿ ಕೊಟ್ಟು ಇನ್ನು 5 ಕೆಜಿ ರಾಗಿ ಅಥವಾ ಜೋಳ ನೀಡಬಹುದು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆಯಂತೆ. ಇದನ್ನು ಓದಿ..Bank Jobs: ಪೋಸ್ಟ್ ಆಫೀಸ್ ಬ್ಯಾಂಕ್ ನಲ್ಲಿ ಖಾಲಿ ಇದೆ ಉದ್ಯೋಗ- ಲಕ್ಷ ಲಕ್ಷ ಸಂಬಳ ನೀಡುವ ಉದ್ಯೋಗಕ್ಕೆ ಅರ್ಜಿ ಆಹ್ವಾನ- ಇಂದೇ ಅರ್ಜಿ ಸಲ್ಲಿಸಿ.

ಸರ್ಕಾರಕ್ಕೆ ಅಗತ್ಯವಿರುವಷ್ಟು ಅಕ್ಕಿಯನ್ನು ಪಡೆಯಲು ಈಗ ಸಾಧ್ಯ ಆಗದೆ ಇರುವ ಕಾರಣ ಅದರ ಬದಲಾಗಿ ರಾಗಿ ಮತ್ತು ಜೋಳ ಕೊಡಬಹುದು ಎಂದಿದ್ದಾರೆ. ರಾಜ್ಯದ ರೈತರು ಈಗ ಬಿತ್ತನೆ ಶುರುಮಾಡಿರುವುದರಿಂದ, ಇನ್ಪುಟ್ ಖರೀದಿಗೆ 50% ಹೆಚ್ಚು ಹಣ ಕೊಡುವುದಾಗಿ ಹೇಳಿದರೆ, ಉತ್ಪನ್ನ ಹೆಚ್ಚಾಗುತ್ತದೆ. 2014ರಲ್ಲಿ ನಡೆಸಿದ ವಿಸ್ಕ್ರುತ ಅಧ್ಯಯನದ ಪ್ರಕಾರ ಒಂದು ಕೆಜಿ ರಾಗಿಗೆ 50 ರೂಪಾಯಿ, ಒಂದು ಕೆಜಿ ಜೋಳವನ್ನು 43 ರೂಪಾಯಿಗೆ ಕೊಡಬಹುದು ಎಂದಿದ್ದಾರೆ. ಸರ್ಕಾರ ಅಕ್ಕಿ ಖರೀದಿ ಮಾಡುವುದನ್ನು 43 ರೂಪಾಯಿ ಎಂದು ಖರೀದಿ ಮಾಡಿದರೆ, ಇದು ದುಬಾರಿ ಆಗುವುದಿಲ್ಲ..

ಸರ್ಕಾರಕ್ಕೆ ಈಗ ಸಾರಿಗೆಯ ಖರ್ಚು ಕೂಡ ಇದೆ. ಸಾರ್ವಜನಿಕ ವಿತರಣಾ ಯೋಜನೆ (PDS) ನಲ್ಲಿ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಹಸಿವಿಗಿಂತ ಪೌಷ್ಟಿಕತೆ ಇಲ್ಲದೆ ಇರುವುದು ಸಮಸ್ಯೆ ಆಗಿದೆ, ಹಾಗಾಗಿ 5ಕೆಜಿ ಅಕ್ಕಿ ಮತ್ತು ಜೋಳ ಕೊಡುವುದು ಉತ್ತಮ ಎನ್ನಲಾಗುತ್ತಿದೆ. ಸರ್ಕಾರ ಈ ಸಲಹೆಯನ್ನು ತೆಗೆದುಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Jobs: ನಿಮ್ಮದು PU ಅಥವಾ ಡಿಪ್ಲೋಮ ಆಗಿದೆಯೇ?? ಹಾಗಿದ್ದರೆ ಬಿಗ್ ಬಾಸ್ಕೆಟ್ ನಲ್ಲಿ ಖಾಲಿ ಇದೆ ಉದ್ಯೋಗ – ಇಂದೇ ಅರ್ಜಿ ಹಾಕಿ, ಕೆಲಸ ಪಡೆಯಿರಿ.

Comments are closed.