News: ಬಿಟ್ಟಿ ಯೋಜನೆಗಳ ನಡುವೆ ರಾಜ್ಯದ ಜನತೆಗೆ ಮತ್ತೊಂದು ಶಾಕ್- ವಿದ್ಯುತ್ ಆಯಿತು, ಅದರ ಪರಿಣಾಮ ಏನಾಗಿದೆ ಗೊತ್ತೆ?

News: ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಹೇಳಿ ಕೆಲವು ಕಂಡೀಷನ್ ಗಳನ್ನು ಹಾಕಲಾಯಿತು. ನಂತರ ವಿದ್ಯುತ್ ದರವನ್ನು ಕೂಡ ಏರಿಸಲಾಯಿತು. ಆದರೆ ಈಗ ವಿದ್ಯುತ್ ದರ ಏರಿಕೆ ಆಗಿರುವುದರಿಂದ ಜಲ ಮಂಡಳಿಗೆ ಹೊರೆಯಾಗಿದ್ದು, ನೀರು ಪೂರೈಕೆ ವಿಚಾರದಲ್ಲಿ ಜಲ ಮಂಡಳಿಯು ಹೊಸದೊಂದು ನಿರ್ಧಾರ ತೆಗೆದುಕೊಂಡಿದೆ. ಇದರಿಂದ ರಾಜ್ಯದ ಜನತೆಗೆ ಮತ್ತೊಂದು ದೊಡ್ಡ ಶಾಕ್ ಆಗಿದೆ. ಏನಾಗಿದೆ ಎಂದು ತಿಳಿಸುತ್ತೇವೆ ನೋಡಿ..

gruhajyoti News:

ವಿದ್ಯುತ್ ದರ ಏರಿಕೆ ಆಗಿರುವುದರಿಂದ 10 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಜಲಮಂಡಳಿ ಇಲಾಖೆ ಮೇಲೆ ಬಿದ್ದಿದೆ, ಜಲಮಂಡಲಿಯು ತೊರೆಕಾಡನಹಳ್ಳಿ, ಹಾರೋಹಳ್ಳಿ ಹಾಗೂ ತಾತುಗಣಿಯಲ್ಲಿರುವ ಪಂಪಿಂಗ್ ಸ್ಟೇಶನ್ ಮೂಲಕ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಜಲಮಂಡಳಿಯ ಎಲ್ಲಾ ಕಚೇರಿಗಳಲ್ಲಿ ಬಳಸುವ ಮಾಸಿಕ ವಿದ್ಯುತ್ ದರ 78 ಕೋಟಿ ರೂಪಾಯಿ ಆಗಿದೆ. ಇದರಿಂದ ತಿಂಗಳಿಗೆ 10 ಕೋಟಿ ರೂಪಾಯಿ ಹೆಚ್ಚಾಗಿ ಬೀಳುತ್ತಿದೆ. ನಗರದ ಸುಮಾರು 10.50 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆ ಆಗುತ್ತಿದ್ದು, ಇದರಿಂದ ತಿಂಗಳಿಗೆ 110 ಕೋಟಿ ರೂಪಾಯಿ ಆದಾಯ ಬರುತ್ತಿತ್ತು.. ಇದನ್ನು ಓದಿ..Free Rice: ಅಕ್ಕಿ ಮಾತ್ರ ಬೇಕೇ?? ಅಕ್ಕಿ ಸಿಗಲಿಲ್ಲ ಎಂದರೆ ಈ ರೀತಿ ಮಾಡಬಹುದು ಅಲ್ಲವೇ?? ಕೃಷಿ ಅರ್ಥ ಶಾಸ್ತ್ರಜ್ಞ ಹೇಳಿದ್ದೇನು ಗೊತ್ತೇ?

ಆದರೆ ಈಗ ವಿದ್ಯುತ್ ಬೆಲೆ ಏರಿಕೆ ಆಗಿರುವುದರಿಂದ ಬರುವ ಆದಾಯದಲ್ಲಿ ಸುಮಾರು 90 ಕೋಟಿ ರೂಪಾಯಿ ವಿದ್ಯುತ್ ಬಿಲ್ ಕೊಡಬೇಕಾಗುತ್ತದೆ. ಹೀಗಿರುವಾಗ, ಕೆಲಸಗಾರರ ನಿರ್ವಹಣೆ ವೆಚ್ಚ, ಅವರಿಗೆ ಕೊಡಬೇಕಾದ ಸಂಬಳ ಇದೆಲ್ಲದಕ್ಕೂ ಸಹ ಹಣ ಸಾಲುವುದಿಲ್ಲ ಎಂದು ಜಲಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮತ್ತೊಂದು ವಿಚಾರವು ಕೇಳಿಬರುತ್ತಿದೆ. ನಿಯಮಗಳ ಪ್ರಕಾರ ಪ್ರತಿ ಮೂರು ವರ್ಷಕ್ಕೆ ಒಂದು ಸಾರಿ ನೀರಿನ ಬಿಲ್ ಹೆಚ್ಚಾಗಬೇಕು. ಆದರೆ 2014ರಿಂದ ನೀರಿನ ಬಿಲ್ ಪರಿಷ್ಕರಣೆ ಆಗಿಲ್ಲ..

ಹಿಂದಿನ ಸರ್ಕಾರಗಳು ಕೋವಿಡ್ ಕಾರಣ ನೀಡಿ ಪರಿಷ್ಕರಣೆ ಮಾಡಲು ಒಪ್ಪಿಗೆ ನೀಡಿಲ್ಲ..ನಿರ್ವಹಣೆ ಹಣ, ಸಂಬಳ, ವಿದ್ಯುತ್ ಬಿಲ್ ಎಲ್ಲವೂ ಜಾಸ್ತಿಯಾಗಿದೆ..ಹಾಗಾಗಿ ನೀರಿನ ಬಿಲ್ ಜಾಸ್ತಿ ಮಾಡುವುದನ್ನು ಬಿಟ್ಟು ಬೇರೆ ದಾರಿ ಇಲ್ಲ..ಎಂದು ಜಲಮಂಡಳಿ ಇಂದ ತಿಳಿದುಬಂದಿದೆ. ಈ ವಿಷಯದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರೊಡನೆ ಚರ್ಚೆ ಮಾಡಲಾಗುತ್ತಿದ್ದು, ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Business Idea: ಕೆಲಸ ಮಾಡುತ್ತಾ ಈ ಬಿಸಿನೆಸ್ ಆರಂಭ ಮಾಡಿ- ಕೈತುಂಬಾ ಕಾಸು, ನಿಮಗೆ ನೀವೇ ಬಾಸ್. ಯೋಚನೆ ಮಾಡಿ ಟ್ರೈ ಮಾಡಿ. ಲಾಸ್ ಅಂತೂ ಇಲ್ಲ.

Comments are closed.