JIO 5G Phone: ವಿಶ್ವದ ಅತ್ಯಂತ ಅಗ್ಗದ 5 ಜಿ ಫೋನ್ ಬಿಡುಗಡೆಗೆ ಮುಂದಾದ ಅಂಬಾನಿ- ಎಷ್ಟು ಕಡಿಮೆ ಬೆಲೆ ಗೊತ್ತೇ??

JIO 5G Phone: ವಿಶ್ವದ ಅತ್ಯಂತ ಅಗ್ಗದ 5 ಜಿ ಫೋನ್ ಬಿಡುಗಡೆಗೆ ಮುಂದಾದ ಅಂಬಾನಿ- ಎಷ್ಟು ಕಡಿಮೆ ಬೆಲೆ ಗೊತ್ತೇ??

JIO 5G Phone: ಜಿಯೋ ಸಂಸ್ಥೆ ನಮ್ಮ ದೇಶದಲ್ಲಿ ಅತಿಹೆಚ್ಚು ಗ್ರಹಕರನ್ನು ಹೊಂದಿರುವ ಟೆಲಿಕಾಂ ಸಂಸ್ಥೆ ಎಂದರೆ ತಪ್ಪಲ್ಲ. ಈ ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಪ್ಲಾನ್ ಗಳನ್ನು ನೀಡುತ್ತಿದೆ. ಟೆಲಿಕಾಂ ಜೊತೆಗೆ ಜಿಯೋ ಸಂಸ್ಥೆ ಮೊಬೈಲ್ ಫೋನ್ ಗಳನ್ನು ತಯಾರಿಸುತ್ತದೆ. ಈ ವರ್ಷದ ಶುರುವಿನಲ್ಲಿ ಜಿಯೋ ಸಂಸ್ಥೆಯು Jio 5G Phone ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಇದೀಗ Jio 5G Phone ಬಗ್ಗೆ ಹೊಸ ಮಾಹಿತಿ ಸಿಕ್ಕಿದೆ.

jio 5g phone features and details 1 JIO 5G Phone:

ಟ್ವಿಟರ್ ಒಬ್ಬರು Jio 5G Phone ಯೂನಿಟ್ ಅನ್ನು ಶೇರ್ ಮಾಡಿದ್ದರು. Jio 5G Phone ಬಿಡುಗಡೆ ಆಗುವ ದಿನ ಹಾಗೂ ಬೆಲೆಯ ಬಗ್ಗೆ ಕೂಡ ಮಾಹಿತಿ ಸಿಕ್ಕಿದೆ. ಪ್ರಸ್ತುತ ಸಿಕ್ಕಿರುವ ಮಾಹಿತಿಯ ಪ್ರಕಾರ ಈ Jio 5G Phone ಎಲ್ಲರಿಗೂ ಸುಲಭವಾಗಿ ಸಿಗುವ ಹಾಗೆ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುತ್ತದೆ, ಮಾರ್ಕೆಟ್ ನಲ್ಲಿರುವ ಬೇರೆ 5G ಫೋನ್ ಗಳಿಗಿಂತ ಇದರ ಬೆಲೆ ಕಡಿಮೆ ಇರಲಿದ್ದು, ₹10,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಬಹುದು ಎನ್ನಲಾಗಿದೆ. . ಇದನ್ನು ಓದಿ..Tax savings: ಎಲ್ಲೆಲ್ಲಿ ಹೂಡಿಕೆ ಮಾಡಿದರೆ ನಿಮಗೆ ಟ್ಯಾಕ್ಸ್ ಕಡಿಮೆಯಾಗುತ್ತದೆ ಗೊತ್ತೇ? ಹೂಡಿಕೆ ಮಾಡಿ ಟ್ಯಾಕ್ಸ್ ಉಳಿಸಿ.

ಇದು ನಮ್ಮ ದೇಶದ ಅತ್ಯಂತ ಕಡಿಮೆ ಬೆಲೆಯ 5G ಸ್ಮಾರ್ಟ್ ಫೋನ್ ಆಗಿರಲಿದೆ. Jio 5G Phone ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಫೋನ್ 6.5 ಇಂಚ್ IPS LCD HD+ ರೆಸೊಲ್ಯೂಷನ್ ಡಿಸ್ಪ್ಲೇ ಹಾಗೂ 1600×720 ಪಿಕ್ಸೆಲ್ ರೆಸೊಲ್ಯೂಷನ್ ಇರುತ್ತದೆ. ಈ ಫೋನ್ ನಲ್ಲಿ ಸೈಡ್ ಫೇಸಿಂಗ್ ಫಿಂಗರ್ ಪ್ರಿಂಟ್ ಸ್ಕ್ಯಾನರ್, 8 mp ಫ್ರಂಟ್ ಕ್ಯಾಮೆರಾ, 13mp+2mp ಡ್ಯುಯೆಲ್ ರಿಯರ್ ಕ್ಯಾಮೆರಾ ಇರುತ್ತದೆ. ಹಾಗೆಯೇ 5000mAh ಬ್ಯಾಟರಿ ಇರಲಿದ್ದು, 18W ಚಾರ್ಜಿಂಗ್ ಇರುತ್ತದೆ.

ಈ ಫೋನ್ ನಲ್ಲಿ ಮೈಕ್ರೋ SD ಕಾರ್ಡ್ ಸ್ಲಾಟ್, ಡ್ಯುಯೆಲ್ ಸಿಮ್, n3, n5, n28, n40 ಹಾಗೂ n78 5G ಬ್ಯಾಂಡ್ ಗಳಿಗೆ ಸಪೋರ್ಟ್ ಮಾಡುತ್ತದೆ. ದುಬಾರಿ 5ಜಿ ಫೋನ್ ಗಳನ್ನು ಖರೀದಿ ಮಾಡುವುದಕ್ಕೆ ಇದು ಒಳ್ಳೆಯ ಆಯ್ಕೆ ಆಗಿದೆ. Jio 5G Phone ನಲ್ಲಿ ಯಾವ ಚಿಪ್ ಸೆಟ್ ಬಳಸಿದ್ದಾರೆ ಎನ್ನುವುದು ಇನ್ನು ಗೊತ್ತಾಗಿಲ್ಲ. ಆದರೆ ಕ್ಯಾಮೆರಾ ಸ್ಪೆಷಾಲಿಟಿ ಹೇಗಿರುತ್ತದೆ ಎನ್ನುವುದು ಮೇಲೆ ತಿಳಿಸಿರುವ ಮಾಹಿತಿಯ ಹಾಗೆ ಇರಲಿದೆ.. ಇದನ್ನು ಓದಿ..AI Jobs: ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಿಗ್ ಶಾಕ್ ಕೊಟ್ಟ AI – ಇನ್ನು ಮುಂದೆ ಸುದ್ದಿ ಪ್ರಸಾರ ಹೇಗೆ ಆಗಲಿದೆ ಗೊತ್ತೇ?

Jio 5G Phone ನ ಮುಂಭಾಗದಲ್ಲಿ ವಾಟರ್ ಡ್ರಾಪ್ ನಾಚ್ ಡಿಸ್ಪ್ಲೇ ಹೊಂದಿದೆ. ಫೋನ್ ನ ಹಿಂಬದಿಯಲ್ಲಿ ಪ್ಯಾನೆಲ್ ಡ್ಯುಯೆಲ್ ಕ್ಯಾಮೆರಾ ಸೆಟಪ್ ಸಹ ಇದೆ. LED ಫ್ಲ್ಯಾಶ್ ಹಾಗೂ ಮಧ್ಯದಲ್ಲಿ Jio Logo ಸಹ ಇದೆ. ಈ ಫೋನ್ ನಲ್ಲಿ ಅತಿಹೆಚ್ಚಿನ ಅಲ್ಟಿಮೇಟ್ ಸ್ಪೀಡ್, ಹಾಗೂ ಉತ್ತಮ ಅನುಭವ ಸಿಗುತ್ತದೆ. ಇಷ್ಟು ಲೀಕ್ ಆಗಿರುವ ಮಾಹಿತಿ ಆಗಿದ್ದು, ಕಂಪನಿಯ ಕಡೆಯಿಂದ ಈ ಬಗ್ಗೆ ಯಾವುದೇ ಮಾಹಿತಿ ಇನ್ನು ಸಿಕ್ಕಿಲ್ಲ. ಇದನ್ನು ಓದಿ..Electric vehicles: ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು ಗೊತ್ತೇ? ನೋಡಿ ಖರೀದಿ ಮಾಡಿ, ಲೈಫ್ ಜಿಂಗ ಲಾಲಾ

Comments are closed.