Ration Card: ನೀವು ಮನೆಯಲ್ಲಿಯೇ ಕುಳಿತು, ರೇಷನ್ ಕಾರ್ಡ್ ಅರ್ಜಿ ಹಾಕಿ- ಸೈಬರ್ ನವರಿಗೆ ಹಣ ಕೊಡುವುದು ನಿಲ್ಲಿಸಿ.

Ration Card: ನೀವು ಮನೆಯಲ್ಲಿಯೇ ಕುಳಿತು, ರೇಷನ್ ಕಾರ್ಡ್ ಅರ್ಜಿ ಹಾಕಿ- ಸೈಬರ್ ನವರಿಗೆ ಹಣ ಕೊಡುವುದು ನಿಲ್ಲಿಸಿ.

Ration Card: ಈಗ ಕಾಂಗ್ರೆಸ್ ಸರ್ಕಾರ ಕೊಡುತ್ತಿರುವ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ (Ration Card) ಇರಲೇಬೇಕು ಎನ್ನುವುದನ್ನು ಕಡ್ಡಾಯ ಮಾಡಲಾಗಿದೆ. ಈ ವೇಳೆ ನೀವು ಹೊಸ ರೇಶನ್ ಕಾರ್ಡ್ (Ration Card) ಗೆ ಅಪ್ಲೈ ಮಾಡಲು ಅಥವಾ ಹಳೆಯ ರೇಷನ್ ಕಾರ್ಡ್ (Ration Card) ಅನ್ನು ತಿದ್ದುಪಡಿ ಮಾಡಿಸುವುದಕ್ಕೆ ಪೋರ್ಟಲ್ ಓಪನ್ ಆಗಿದ್ಯಾ? ಅಪ್ಲೈ ಮಾಡಬೇಕು ಎಂದರೆ ಹೇಗೆ ಮಾಡುವುದು? ಇದರ ಬಗ್ಗೆ ಇಂದು ನಿಮಗೆ ಪೂರ್ತಿಯಾಗಿ ಮಾಹಿತಿ ತಿಳಿಸಿಕೊಡುತ್ತೇವೆ..

how to apply ration card explain in kannada
how to apply ration card explain in kannada

ಹೊಸದಾಗಿ ರೇಷನ್ ಕಾರ್ಡ್ (Ration Card) ಗೆ ಅಪ್ಲೈ ಮಾಡಬೇಕಾಗಿರುವವರಿಗೆ ಹಾಗೂ ತಿದ್ದುಪಡಿ ಮಾಡಿಸಬೇಕಾಗಿರುವವರಿಗೆ ಈಗ ಒಂದು ಗುಡ್ ನ್ಯೂಸ್ ಸಿಕ್ಕಿದೆ, ಮೊದಲಿಗೆ ನೀವು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ https://ahara.kar.nic.in/ . ವೆಬ್ಸೈಟ್ ಓಪನ್ ಮಾಡಿದಾಗ, ಹೊಸ ರೇಷನ್ ಕಾರ್ಡ್ (Ration Card) ಗೆ ಆನ್ಲೈನ್ ಅಪ್ಲೈ ಮಾಡುವ ಆಯ್ಕೆ ಬಂದಿರುತ್ತದೆ. ಅಲ್ಲಿ, ಕನ್ನಡ ಭಾಷೆಯನ್ನು ಆಯ್ಕೆ ಮಾಡಿ, ನಂತರ ಹೊಸ ಪಡಿತರ ಚೀಟಿ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಎಂದು ಎರಡು ಆಯ್ಕೆ ಬರುತ್ತದೆ.. ಇದನ್ನು ಓದಿ..Footwear rules: ಇನ್ನು ಮುಂದೆ ಚಪ್ಪಲಿ ಮಾರಾಟಕ್ಕೆ ಕೂಡ ಹೊಸ ರೂಲ್ಸ್ – ಬಡವರಿಗೆ ಟೋಪಿ ಹಾಕುವುದು ಸುಲಭವಲ್ಲ. ಶಾಕ್ ಆದ ವ್ಯಾಪಾರಿಗಳು.

ಆಗ ನೀವು ಎಪಿಎಲ್ ಮೇಲೆ ಕ್ಲಿಕ್ ಮಾಡಿದಾಗ, ನಿಮ್ಮ ಎದುರು ಎಲ್ಲಾ ವಿಚಾರಗಳು ಬರುತ್ತದೆ. ಈ ರೀತಿಯಾಗಿ ನೀವು ಹೊಸ ರೇಷನ್ ಕಾರ್ಡ್ (Ration Card) ಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು. ರೇಷನ್ ಕಾರ್ಡ್ (Ration Card) ತಿದ್ದುಪಡಿ ಮಾಡುವುದಕ್ಕೂ ಕೂಡ ಈಗ ಲಿಂಕ್ ಓಪನ್ ಆಗುತ್ತಿದೆ. ಪಡಿತರ ಚೀಟಿ ತಿದ್ದುಪಡಿ ಎನ್ನುವ ಹೆಸರಿನಲ್ಲೇ ಆ ಆಪ್ಶನ್ ಇರುತ್ತದೆ. ಆಹಾರ ಇಲಾಖೆಯ ವೆಬ್ಸೈಟ್ ಗೆ ಹೋದರೆ ಅದರಲ್ಲಿ ನೀವು ಸುಲಭವಾಗಿ ಅಪ್ಲೈ ಮಾಡಬಹುದು.

ಅಧಿಕೃತ ವೆಬ್ಸೈಟ್ ಗೆ ಹೋಗಿ, ಅಲ್ಲಿ ಇ ಸೇವೆಗಳು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಎಡಬದಿಯಲ್ಲಿ ನಿಮಗೆ ಕೆಲವು ಆಯ್ಕೆಗಳು ಸಿಗುತ್ತದೆ. ಆಗ ನೀವು ಇಪಡಿತರ ಚೀಟಿ (Ration Card) ಆಪ್ಶನ್ ಮೇಲೆ ಕ್ಲಿಕ್ ಮಾಡಿ, ಆಗ ಇನ್ನಷ್ಟು ಆಪ್ಶನ್ ಗಳು ನಿಮಗೆ ಸಿಗುತ್ತದೆ. ಅಲ್ಲಿ ಮೊದಲ ಆಪ್ಶನ್ ಹೊಸ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ..ಈಗ ಅರ್ಜಿ ಹಾಕುವ ಆಪ್ಶನ್ ಓಪನ್ ಆಗುತ್ತದೆ. ಇದನ್ನು ಓದಿ..Post Office Schemes: ಎಲ್ಲದಕ್ಕಿಂತ ಸೇಫ್ ಇರುವ ಪೋಸ್ಟ್ ಆಫೀಸ್ ನಲ್ಲಿ 16 ಲಕ್ಷ ಲಾಭ ಪಡೆಯುವ ಪ್ರಯೋಜನ ಯೋಜನೆಯ ಬಗ್ಗೆ ಸಂಪೂರ್ಣ ಡೀಟೇಲ್ಸ್.

ಇಲ್ಲಿ ಕೇಳುವ ಮಾಹಿತಿಗಳನ್ನು ಸುಲಭವಾಗಿ ನೀಡುವ ಮೂಲಕ, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ರೇಷನ್ ಕಾರ್ಡ್ (Ration Card) ತಿದ್ದುಪಡಿ ಮಾಡುವುದಕ್ಕೆ Amendment Request ಎನ್ನುವ ಆಪ್ಶನ್ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿದರೆ, ನಿಮಗೆ ತಿದ್ದುಪಡಿ ಮಾಡುವ ಆಯ್ಕೆ ಸಿಗುತ್ತದೆ, ಆ ಲಿಂಕ್ ನಲ್ಲಿ ಯಾವ ಜಿಲ್ಲೆ ಎನ್ನುವ ಆಯ್ಕೆ ಬರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಈಗ ತಿದ್ದುಪಡಿ ಮಾಡುವ ಫಾರ್ಮ್ ಬರುತ್ತದೆ. ಇಲ್ಲಿ ನಿಮ್ಮ ರೇಷನ್ ಕಾರ್ಡ್ ಡೀಟೇಲ್ಸ್ ಹಾಕಿ ತಿದ್ದುಪಡಿ ಮಾಡಬಹುದು. ಇದನ್ನು ಓದಿ..Business idea: ಹೆಚ್ಚು ಬಂಡವಾಳ ಇಲ್ಲ ಎಂದಾಗ ಐದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ- ತಿಂಗಳಿಗೆ 80 ಸಾವಿರ ಲಾಭ ಖಚಿತ.

Comments are closed.