Worldcup 2023: ಭಾರತ ತಂಡಕ್ಕೆ ಈ ಬಾರಿ ವಿಶ್ವಕಪ್ ಗೆಲ್ಲಿಸಿ ಕೊಡುವ ಇಬ್ಬರು ಕಿಲಾಡಿಗಳನ್ನು ಆಯ್ಕೆ ಮಾಡಿದ ಹರ್ಭಜನ್. ಇವರಿಬ್ಬರೇ ಆ ಕಿಲಾಡಿಗಳು

Worldcup 2023: ಭಾರತ ತಂಡಕ್ಕೆ ಈ ಬಾರಿ ವಿಶ್ವಕಪ್ ಗೆಲ್ಲಿಸಿ ಕೊಡುವ ಇಬ್ಬರು ಕಿಲಾಡಿಗಳನ್ನು ಆಯ್ಕೆ ಮಾಡಿದ ಹರ್ಭಜನ್. ಇವರಿಬ್ಬರೇ ಆ ಕಿಲಾಡಿಗಳು

Worldcup 2023: ಕಳೆದ ವರ್ಷ ಹಾಗೂ ಈ ವರ್ಷ ಭಾರತ ತಂಡವು ಯಾವುದೇ ಟ್ರೋಫಿ ಗೆದ್ದಿಲ್ಲದ ಕಾರಣ, ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (Worldcup 2023) ನೆಲೆ ಎಲ್ಲರ ಗಮನವಿದೆ. ಭಾರತದಲ್ಲೇ ವಿಶ್ವಕಪ್ (Worldcup 2023) ನಡೆಯಲಿರುವುದರಿಂದ ಈ ಸಾರಿ ಭಾರತ ತಂಡ ಗೆಲ್ಲಲೇಬೇಕು ಎನ್ನುವ ಆಕಾಂಕ್ಷೆ ಎಲ್ಲರಲ್ಲೂ ಶುರುವಾಗಿದೆ. ಏಕದಿನ ವಿಶ್ವಕಪ್ 2023 ಆಕ್ಟೊಬರ್ 5ರಿಂದ ಶುರುವಾಗಲಿದ್ದು, ನವೆಂಬರ್ 19ರಂದು ಮುಗಿಯಲಿದೆ. ಭಾರತ ತಂಡದ ಮೊದಲ ಪಂದ್ಯ ಆಕ್ಟೊಬರ್ 8ರಂದು ಚೆನ್ನೈ ನಲ್ಲಿ ನಡೆಯಲಿದೆ.

harbhajan-selects-two-players-who can win the world cup for india
harbhajan-selects-two-players-who can win the world cup for india

    ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದ್ದು, ಎರಡನೇ ಪಂದ್ಯ ಆಕ್ಟೊಬರ್ 15ರಂದು ಪಾಕಿಸ್ತಾನ್ ವಿರುದ್ಧ ಎರಡನೇ ಪಂದ್ಯ ನಡೆಯಲಿದೆ. ಈಗಾಗಲೇ ಬಿಸಿಸಿಐ (BCCI) ಭಾರತ ತಂಡದ ಗೆಲುವಿಗೆ ಸಿದ್ಧತೆಗಳನ್ನು ನಡೆಸುತ್ತಿದೆ. ಇದರ ನಡುವೆಯೇ ಟೀಮ್ ಇಂಡಿಯಾದ ಮಾಜಿ ಅನುಭವಿ ಆಟಗಾರ ಈ ಇಬ್ಬರು ಆಟಗಾರರು ಭಾರತ ತಂಡವನ್ನು ವಿಶ್ವಕಪ್ (Worldcup 2023) ನಲ್ಲಿ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಓದಿ..Vande Bharat: ವಂದೇ ಭರತ್ ಅಭಿವೃದ್ಧಿಯ ವೇಗ ಕಂಡು ಕೆಲವರು ವಿರೋಧ ಮಾಡುತ್ತಿರುವುದು ಯಾಕೆ? ಎಲ್ಲೆಂದರಲ್ಲಿ ಕಲ್ಲು ತೂರುತ್ತಿವರು ಯಾರು? ಸಂಪೂರ್ಣ ವಿವರಣೆ.

    ವಿಶ್ವಕಪ್ 2023 (Worldcup 2023) ಬಗ್ಗೆ ಭವಿಷ್ಯ ನುಡಿದಿರುವುದು ಮತ್ಯಾರು ಅಲ್ಲ, ಟೀಮ್ ಇಂಡಿಯಾದ ಖ್ಯಾತ ಆಟಗಾರರಲ್ಲಿ ಒಬ್ಬರಾದ ಹರ್ಭಜನ್ ಸಿಂಗ್ (Harbhajan Singh) ಅವರು. ಈ ವರ್ಷ ಏಕದಿನ ವಿಶ್ವಕಪ್ (Worldcup 2023) ಭಾರತ ತಂಡದ ಪಾಲಿಗೆ ಬಹಳ ಮುಖ್ಯವಾದ ಪಂದ್ಯ ಆಗಿದೆ. ಈ ಟೂರ್ನಿಯಲ್ಲಿ ಭಾರತ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಇರುವ ಇಬ್ಬರು ಆಟಗಾರರು ಶುಬ್ಮನ್ ಗಿಲ್ (Shubman Gill) ಹಾಗೂ ರವೀಂದ್ರ ಜಡೇಜಾ (Ravindra Jadeja) ಎಂದು ಹೇಳಿದ್ದಾರೆ ಭಜ್ಜಿ. ಸಂವಾದದಲ್ಲಿ ಮಾತನಾಡಿದ ಹರ್ಭಜನ್ ಸಿಂಗ್ ಅವರು ಈ ರೀತಿ ಹೇಳಿದ್ದಾರೆ..

    “ಭಾರತ ದೇಶದ ಪಿಚ್ ಬ್ಯಾಟ್ಸ್ಮನ್ ಗಳಿಗೆ ಸೂಕ್ತವಾದದ್ದು, ಹಾಗಾಗಿ ಇಂಡಿಯಾದ ಪಿಚ್ ನಲ್ಲಿ ಟೀಮ್ ಇಂಡಿಯಾದ (Team India) ಓಪನರ್ ಶುಬ್ಮನ್ ಗಿಲ್ ಅವರು ರನ್ ಗಳ ಹೊಳೆ ಹರಿಸುವುದು ಗ್ಯಾರೆಂಟಿ. ಈ ಏಕದಿನ ವಿಶ್ವಕಪ್ (Worldcup 2023) ನಲ್ಲಿ ಶುಬ್ಮನ್ ಗಿಲ್ ಮುಖ್ಯವಾದ ಆಟಗಾರ ಆಗುತ್ತಾರೆ..ಭಾರತದ ಕಂಡೀಷನ್ ಗೆ ಅವರು ಅದ್ಭುತ ಪ್ರದರ್ಶನ ನೀಡುತ್ತಾರೆ..” ಎಂದು ಶುಬ್ಮನ್ ಗಿಲ್ ಅವರನ್ನು ಹೊಗಳಿದ್ದಾರೆ ಹರ್ಭಜನ್ ಸಿಂಗ್. ಇದನ್ನು ಓದಿ..Asian Games: ಏಷ್ಯನ್ ಗೇಮ್ಸ್ ನಲ್ಲಿ ರೋಹಿತ್ ಬದಲು ನಾಯಕನಾಗಬಹುದಾದ ಟಾಪ್ ಮೂವರು ಆಟಗಾರರು.

    ಇನ್ನು ಮತ್ತೊಬ್ಬ ಆಟಗಾರ ರವೀಂದ್ರ ಜಡೇಜಾ ಅವರ ಬಗ್ಗೆ ಮಾತನಾಡಿ, “2023ರ ವಿಶ್ವಕಪ್ (Worldcup 2023) ನಲ್ಲಿ ರವೀಂದ್ರ ಜಡೇಜಾ ಅವರು ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಾಗೆ ಹೊಸ ರೆಕಾರ್ಡ್ ಸೃಷ್ಟಿ ಮಾಡುತ್ತಾರೆ. ಇದರಿಂದ ಭಾರತ ತಂಡಕ್ಕೆ ದೊಡ್ಡದಾಗಿ ಲಾಭವಾಗುತ್ತದೆ. ಈ ವರ್ಷದ ಐಪಿಎಲ್ ನಲ್ಲಿ ರವೀಂದ್ರ ಜಡೇಜಾ ಅವರು 20ಕ್ಕಿಂತ ಹೆಚ್ಚು ವಿಕೆಟ್ಸ್ ಪಡೆದಿದ್ದಾರೆ.” ಎಂದಿದ್ದಾರೆ. ಹರ್ಭಜನ್ ಸಿಂಗ್ ಅವರು ಹೇಳಿರುವ ಹಾಗೆ ಈ ಇಬ್ಬರು ಆಟಗಾರರು ಉತ್ತಮ ಪ್ರದರ್ಶನ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Boat Earbuds: ಕಡಿಮೆ ಬೆಲೆಗೆ ಕೈ ಗೆ ಎಟಕುವಂತೆ ಇಯರ್‌ಬಡ್ಸ್‌ ಬಿಡುಗಡೆ ಮಾಡಿದ ಬೋಟ್ ಕಂಪನಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

    Comments are closed.