Harley Davidson X440: ರಾಯಲ್ ಎನ್‌ಫೀಲ್ಡ್‌ಗೆ ನಡುಕ ತರಿಸಿರುವ ಕಡಿಮೆ ಬೆಳೆಯ ಹಾರ್ಲೆ ಡೇವಿಡ್‌ಸನ್‌ ಬೈಕ್ ಹೇಗಿದೆ, ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Harley Davidson X440: ರಾಯಲ್ ಎನ್‌ಫೀಲ್ಡ್‌ಗೆ ನಡುಕ ತರಿಸಿರುವ ಕಡಿಮೆ ಬೆಳೆಯ ಹಾರ್ಲೆ ಡೇವಿಡ್‌ಸನ್‌ ಬೈಕ್ ಹೇಗಿದೆ, ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Harley Davidson X440: Harley Davidson ಸಂಸ್ಥೆ ಈ ಸೋಮವಾರ ಭಾರತದಲ್ಲಿ Harley Davidson X440 ಬೈಕ್ ಅನ್ನು ಲಾಂಚ್ ಮಾಡಿದೆ. ಈ ಬೈಕ್ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ ಎನ್ನುವುದು ವಿಶೇಷವಾಗಿದೆ. ನಮ್ಮ ದೇಶದಲ್ಲಿ ಹಾರ್ಲಿ ಡೇವಿಡ್ಸನ್ ಬ್ರ್ಯಾಂಡ್ ಗೆ ಭಾರಿ ಬೇಡಿಕೆ ಇದೆ. ಇದೀಗ ಹೀರೋ ಮೋಟೋ ಕಾರ್ಪ್ ಹಾಗೂ ಹಾರ್ಲಿ ಡೇವಿಡ್ಸನ್ ಈ ಎರಡು ಸಂಸ್ಥೆಗಳು ಜೊತೆಯಾಗು ತಯಾರಿಸಿರುವ ಮೊದಲ ಬೈಕ್ Harley Davidson X440 ಬೈಕ್ ಆಗಿದೆ..

Harley davidson X440 details explained in kannada

ಈ ಬೈಕ್ ಲಾಂಚ್ ವೇಳೆ ಹೀರೋ ಮೋಟೋ ಕಾರ್ಪ್ ಸಂಸ್ಥೆಯ ಅಧ್ಯಕ್ಷರಾದ ಪವನ್ ಮುಂಜಾಲ್ ಭಾಗವಹಿಸಿದ್ದರು. ಈ ಬೈಕ್ ನ ಬೆಲೆ ಎಷ್ಟು? ಇದರ ವಿಶೇಷತೆಗಳು ಏನು? ಎಲ್ಲವನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ… Harley Davidson X440 ಬೈಕ್ ನ ಎಕ್ಸ್ ಶೋರೂಮ್ ಬೆಲೆ ₹2.29ಲಕ್ಷ ರೂಪಾಯಿ ಆಗಿದೆ. Harley Davidson X440 ಬೈಕ್ ಅನ್ನು ರಾಜಸ್ಥಾನದ ಹೀರೋಸ್ ನೀಮ್ರಾನ ಉದ್ಘಾಟನಾ ಘಟಕದಲ್ಲಿ ತಯಾರಿಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ. Harley Davidson X440 ಬೈಕ್ 3 ವೇರಿಯಂಟ್ ಗಳಲ್ಲಿ ಬಂದಿದೆ. ಇದನ್ನು ಓದಿ..Boat Earbuds: ಕಡಿಮೆ ಬೆಲೆಗೆ ಕೈ ಗೆ ಎಟಕುವಂತೆ ಇಯರ್‌ಬಡ್ಸ್‌ ಬಿಡುಗಡೆ ಮಾಡಿದ ಬೋಟ್ ಕಂಪನಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಡೆನಿಮ್ 2.29ಲಕ್ಷ, ವಿವಿಡ್ 2.49ಲಕ್ಷ, 2.69 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಿರುತ್ತದೆ. ಭಾರತದಲ್ಲಿ ಈ ಕಂಪನಿಗೆ ಸ್ಥಿರತೆ ಕೊಡುವುದಕ್ಕಾಗಿ Harley Davidson X440 ಬೈಕ್ ಲಾಂಚ್ ಮಾಡಲಾಗಿದೆ ಎಂದು Harley Davidson ಸಂಸ್ಥೆ ತಿಳಿಸಿದೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಮೆಟಿಯರ್ 350 ಮತ್ತು ಯೆಜ್ಡಿ ರೋಡ್‌ಸ್ಟರ್‌ ಬೈಕ್ ಗಳಿಗೆ ಇದು ಕಾಂಪಿಟೇಶನ್ ಆಗಿರಲಿದೆ.. ಈ ಬೈಕ್ ಗೆ ರೆಟ್ರೋ ಕ್ರುಸರ್ ಡಿಸೈನ್ ನೀಡಲಾಗಿದೆ. ಹಾಗೆಯೇ ಎಲ್ಲಾ ಲೈಟ್ ಗ್ಲಾಜ್ LED ಲೈಟ್ಸ್ ಆಗಿದೆ. LED ಹೆಡ್ ಲೈಟ್ ಜೊತೆಗೆ LED DRL ಹಾಗೂ ಟರ್ನ್ ಇಂಡಿಕೇಟರ್ ನೀಡಿದ್ದಾರೆ.

ಈ ಬೈಕ್ ನಲ್ಲಿ ಸಿಂಗಲ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, LCD ಡಿಸ್ಪ್ಲೇ ಹಾಗೂ ರೆಟ್ರೋ ಸ್ಟೈಲ್ ಫ್ಯುಲ್ ಟ್ಯಾಂಕ್ ಇದೆ. 400cc ಬೈಕ್, 18ಇಂಚ್ ಮುಂಭಾಗ, 17 ಇಂಚ್ ಹಿಂಭಾಗ ಮಿಕ್ಸ್ಡ್ ಲೋಹಗಳ ವೀಲ್ಸ್ ಹಾಗೂ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಶನ್ ಹೊಂದಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ಟರೇನ್ ಟೈರ್ ಅನ್ನು ಬಳಸಲಾಗಿದೆ. ಈ ರೀತಿಯ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಇದನ್ನು ಓದಿ..Tata Harrier EV: ಹೊಸ ಟಾಟಾ ಕಾರು ನೋಡಿ ಗ್ರಾಹಕರು ಮಸ್ತ್ ಕುಶ್- ಹೊರ ಕಾರು ಹೇಗಿದೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Harley Davidson X440 ಬೈಕ್ ನಲ್ಲಿ E20 ಫ್ಯುಲ್ ಇಂಜಿನ್ ಬಳಸಿದೆ. ಇದು 440cc ಆಯ್ಲ್ ಕೋಲ್ಡ್ BS6 ಇಂಜಿನ್ ಇಂದ ಚಲಿಸುತ್ತಿದೆ, ಹಾಗೆಯೇ 27bhp ಪವರ್ ಹಾಗೂ 38nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದು ದೀರ್ಘ ಸ್ಟ್ರೋಕ್ ಬೈಕ್ ಆಗಿದೆ ಎಂದು ಸಂಸ್ಥೆ ತಿಳಿಸಿದೆ. 2000rpm ನಲ್ಲಿ 90% ಟಾರ್ಕ್ ಉತ್ಪಾದನೆ ಮಾಡುತ್ತದೆ. ಕಡಿಮೆ rpm ಇದ್ದಾಗಲು ಬೈಕ್ ಉತ್ತಮ ಟಾರ್ಕ್ ಪ್ರೊಡ್ಯುಸ್ ಮಾಡುತ್ತದೆ. ಈ ಎಲ್ಲಾ ಕಾರಣಗಳಿಂದ Harley Davidson X440 ಬೈಕ್ ಎಲ್ಲರಿಗೂ ತುಂಬಾ ಇಷ್ಟ ಆಗುತ್ತಿದೆ. ಇದನ್ನು ಓದಿ..Electric Vehicles: ದಿಡೀರ್ ಎಂದು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಬಾರಿ ಕುಸಿತ- ಕಾರಣಗಳ ಸಮೇತ ವಿವರಣೆ.

Comments are closed.