Anna Bhagya: ಅಂದು ಮೋದಿ ಕೊಟ್ಟಿಲ್ಲ ಎಂದ ಸಿದ್ದು, ಈಗ ಮೋದಿ ಕೊಟ್ಟಿರುವ 5 KG ಅಕ್ಕಿಯನ್ನು ಏನು ಮಾಡಿದ್ದಾರೆ ಗೊತ್ತೇ? ಬೊಮ್ಮಾಯಿ ಅಂತೂ ಫುಲ್ ಗರಂ.

Anna Bhagya: ಅಂದು ಮೋದಿ ಕೊಟ್ಟಿಲ್ಲ ಎಂದ ಸಿದ್ದು, ಈಗ ಮೋದಿ ಕೊಟ್ಟಿರುವ 5 KG ಅಕ್ಕಿಯನ್ನು ಏನು ಮಾಡಿದ್ದಾರೆ ಗೊತ್ತೇ? ಬೊಮ್ಮಾಯಿ ಅಂತೂ ಫುಲ್ ಗರಂ.

Anna Bhagya: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಿತ್ತು. ಅದರಲ್ಲಿ ಅನ್ನಭಾಗ್ಯ (Anna Bhagya) ಯೋಜನೆ ಮುಖ್ಯವಾದದ್ದು. ಈ ಯೋಜನೆಯ ಮೂಲಕ ಅಂತ್ಯೋದಯ ಮತ್ತು ಬಿಪಿಎಲ್ (BPL) ಕಾರ್ಡ್ ಇರುವವರಿಗೆ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿತ್ತು, ಇದನ್ನು ಜನರು ಕೂಡ ನಂಬಿಕೊಂಡಿದ್ದರು. ಆದರೆ ಕಾಂಗ್ರೆಸ್ (Congress) ಗೆದ್ದು ಅಧಿಕಾರಕ್ಕೆ ಬಂದ ನಂತರ ಈ ಯೋಜನೆಗೆ ಇನ್ನು ಜಾರಿಗೆ ಬಂದಿಲ್ಲ.

siddaramaiah reduced 5 KG rice to 3 KG rice in karnataka Anna Bhagya:

ಮೊದಲಿಗೆ ಕೇಂದ್ರ ಸರ್ಕಾರ 10ಕೆಜಿ ಅಕ್ಕಿ ಪೂರೈಕೆ ಮಾಡಲು ಒಪ್ಪುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿತ್ತು. ಆಹಾರ ಮಂಡಳಿಯಿಂದ ದುಡ್ಡು (Anna Bhagya) ಕೊಟ್ಟು ಅಕ್ಕಿ ಖರೀದಿ ಮಾಡುವುದಾಗಿ ಹೇಳಿತು, ಅದು ಸಾಧ್ಯವಾಗದೆ ಹೋದಾಗ ಬೇರೆ ರಾಜ್ಯಗಳಿಂದ ಅಕ್ಕಿ ತಂದು ಜನರಿಗೆ ಕೊಡುವುದಾಗಿ ಹೇಳಿತ್ತು, ಆದರೆ ಅದು ಕೂಡ ಸಾಧ್ಯವಾಗಿಲ್ಲ. ಸರ್ಕಾರಕ್ಕೆ 10ಕೆಜಿ ಅಕ್ಕಿ ಪೂರೈಕೆ ಮಾಡುವುದು ಕಷ್ಟವಾಗಿದೆ.. ಇದನ್ನು ಓದಿ..Shravana: ಶ್ರಾವಣದಲ್ಲಿ ಹಿಂದೂಗಳು ಮಾಂಸಾಹಾರ ಸೇವನೆ ಮಾಡುವುದಿಲ್ಲ, ಇದು ಆಚರಣೆ- ಆದರೆ ವೈಜ್ಞಾನಿಕ ಕಾರಣ ತಿಳಿದರೆ ಶಾಕ್ ಆಗ್ತೀರಾ.

ಹಾಗಾಗಿ ಜನರಿಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ 5ಕೆಜಿ ಅಕ್ಕಿ ಜೊತೆಗೆ 5ಕೆಜಿ ಅಕ್ಕಿಯ ಹಣವನ್ನು ಜನರ ಅಕೌಂಟ್ ಗೆ ಹಾಕುವುದಾಗಿ ಹೇಳಿದ್ದರು. ಕೇಂದ್ರ ಸರ್ಕಾರ 5ಕೆಜಿ ಅಕ್ಕಿ (Anna Bhagya) ಪೂರೈಕೆ ಮಾಡುತ್ತಿತ್ತು, ಆದರೆ ಕೇಂದ್ರ ಸರ್ಕಾರಕ್ಕೆ ಅಕ್ಕಿ ಪೂರೈಕೆ ಸಾಧ್ಯವಾಗದೆ ಅದರಲ್ಲೂ ಕೂಡ, 2ಕೆಜಿ ಅಕ್ಕಿ ಕಡಿಮೆ ಮಾಡಿ, 3 ಕೆಜಿ ಅಕ್ಕಿಯನ್ನು ಮಾತ್ರ ಕೊಡಲಾಗುತ್ತದೆ. ಈ ಯೋಜನೆಯಿಂದ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಅವರು ತಿಳಿಸಿದ್ದಾರೆ.

ಮಾಧ್ಯಮದ ಎದುರು ಈ ಬಗ್ಗೆ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ ತಲಾ 10ಕೆಜಿ ಅಕ್ಕಿ ಕೊಡುವುದಾಗಿ ಜನರಿಗೆ ಭರವಸೆ ನೀಡಿತ್ತು, ಆದರೆ ಈಗ ಮೋಸ ಮಾಡುತ್ತಿದೆ. ಇದೊಂದೇ ಅಲ್ಲದೆ, ಕೇಂದ್ರ ಸರ್ಕಾರ ಉಚಿತವಾಗಿ ಕೊಡುತ್ತಿರುವ ಅಕ್ಕಿಯಲ್ಲಿ ಕೂಡ ಕಡಿತ ಮಾಡಿದ್ದು 3 ಕೆಜಿ ಅಕ್ಕಿ ಮಾತ್ರ ಕೊಡುತ್ತಿದ್ದಾರೆ..” ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಬರುವ ಅಕ್ಕಿಯಲ್ಲು 2ಕೆಜಿ ಅಕ್ಕಿ ಕಡಿಮೆ ಮಾಡಿದೆ. ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?

ಕೇಂದ್ರ ಸರ್ಕಾರವು ಆಹಾರ ಭದ್ರತೆ ಕಾಯ್ದೆಯ ಅಡಿಯಲ್ಲಿ 5ಕೆಜಿ ಅಕ್ಕಿ (Anna Bhagya) ಉಚಿತವಾಗಿ ನೀಡುತ್ತಿದೆ, ಅದರಲ್ಲೂ ಕಡಿಮೆ ಮಾಡಿ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ.. ಎಂದಿದ್ದಾರೆ ಮಾಜಿ ಸಿಎಂ. ಎಲೆಕ್ಷನ್ ಸಮಯದಲ್ಲಿ 10ಕೆಜಿ ಕೊಡುವುದಾಗಿ ಹೇಳಿ, ಈಗ 3ಕೆಜಿ ಅಕ್ಕಿ ಕೊಡುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಡಬೇಕು..ರಾಜ್ಯದಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ನಾನು ಈಗಾಗಲೇ ಮಾತನಾಡಿದ್ದೇನೆ. ಕುಮಾರಸ್ವಾಮಿ ಅವರು ಟ್ರಾನ್ಸ್ಫರ್ ಬಗ್ಗೆ ಒಂದು ಇಲಾಖೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿ ಸರಿಯಾಗಿದೆಯೇ ಅಥವಾ ಇನ್ನು ಜಾಸ್ತಿ ಇದೆಯೇ ಎಂದು ಪರಿಶೀಲಿಸಬೇಕು.. ಎಂದು ಹೇಳಿದ್ದಾರೆ. ಇದನ್ನು ಓದಿ..Electric Car: ನೋಡಲು ಚಿಕ್ಕದು, ಆದರೆ ದೊಡ್ಡ ದೊಡ್ಡ ಕೆಲಸ ಮಾಡುವ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್, ಕನ್ನಡದಲ್ಲಿ.

Comments are closed.