Vastu Tips: ಬೇರೆ ಏನು ಬೇಡ ಈ ಚಿಕ್ಕ ವಸ್ತುವನ್ನು ಮನೆಗೆ ತನ್ನಿ- ಲಕ್ಷ್ಮಿ ದೇವಿ ಹಾಗೂ ಕುಬೇರ ದೇವಾ ಮನೆಗೆ ಬರುತ್ತಾರೆ, ಅಲ್ಲಿಯೇ ನೆಲೆಸುತ್ತಾರೆ.

Vastu Tips: ಬೇರೆ ಏನು ಬೇಡ ಈ ಚಿಕ್ಕ ವಸ್ತುವನ್ನು ಮನೆಗೆ ತನ್ನಿ- ಲಕ್ಷ್ಮಿ ದೇವಿ ಹಾಗೂ ಕುಬೇರ ದೇವಾ ಮನೆಗೆ ಬರುತ್ತಾರೆ, ಅಲ್ಲಿಯೇ ನೆಲೆಸುತ್ತಾರೆ.

Vastu Tips: ಲಕ್ಷ್ಮೀದೇವಿ ಮತ್ತು ಕುಬೇರದೇವ ಇವರಿಬ್ಬರು ಕೂಡ ಸಂಪತ್ತಿನ ದೇವತೆಗಳು. ಈ ಇಬ್ಬರ ಆಶೀರ್ವಾದ ನಿಮ್ಮ ಮೇಲೆ ಇದ್ದರೆ, ಹಣಕಾಸಿನ ವಿಷಯದಲ್ಲಿ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ಲಕ್ಷ್ಮೀದೇವಿ ಮತ್ತು ಕುಬೇರನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಬೇಕು ಎಂದರೆ, ಅದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ಆ ಕೆಲವು ವಸ್ತುಗಳನ್ನು ತಂದು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನೀವು ಲಕ್ಷ್ಮೀದೇವಿ ಮತ್ತು ಕುಬೇರನ ಆಶೀರ್ವಾದ ಪಡೆಯಬಹುದು. ಆ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

kubera2823686529079348278 Vastu Tips:

ಲಕ್ಷ್ಮಿ ಮತ್ತು ಕುಬೇರನ ವಿಗ್ರಹ :- ಮನೆಯಲ್ಲಿ ಹಣದ ಬರುವಿಕೆ ಜಾಸ್ತಿ ಮಾಡುವುದಕ್ಕೆ ಲಕ್ಷ್ಮೀದೇವಿ ಮತ್ತು ಕುಬೇರನ ವಿಗ್ರಹವನ್ನು ಮನೆಯಲ್ಲಿ ಇಡಬೇಕು. ಹಾಗೆಯೇ ಗಣೇಶನ ವಿಗ್ರಹವನ್ನು ಕೂಡ ಇಡಬಹುದು. ಈ ವಿಗ್ರಹಗಳಿಗೆ ಪ್ರತಿದಿನ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣದ ಕೊರತೆ ಆಗುವುದಿಲ್ಲ. ಸಂತೋಷ ಸಮೃದ್ಧಿ ಯಾವಾಗಲೂ ಇರುತ್ತದೆ. ಇದನ್ನು ಓದಿ..Shravana: ಶ್ರಾವಣದಲ್ಲಿ ಹಿಂದೂಗಳು ಮಾಂಸಾಹಾರ ಸೇವನೆ ಮಾಡುವುದಿಲ್ಲ, ಇದು ಆಚರಣೆ- ಆದರೆ ವೈಜ್ಞಾನಿಕ ಕಾರಣ ತಿಳಿದರೆ ಶಾಕ್ ಆಗ್ತೀರಾ.

ಕಲಶ :- ನಿಮ್ಮ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗಬೇಕು ಎಂದರೆ ಮನೆಯಲ್ಲಿ ಅಷ್ಟದಳ ಕಮಲದ ಕಲಶವನ್ನು ಸ್ಥಾಪಿಸಿ, ಈ ಕಲಶವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇಟ್ಟು, ಕಲಶಕ್ಕೆ ನೀರು ಮತ್ತು ತಾಮ್ರದ ನಾಣ್ಯ ಹಾಕಿ. ಹಾಗೆಯೇ ತೆಂಗಿನ ಗರಿಗಳನ್ನು ಹಾಕಿ, ತೆಂಗಿನ ಕಾಯಿಯನ್ನು ಕೂಡ ಇಡಬಹುದು.

ಕವಡೆಗಳು :- ಲಕ್ಷ್ಮೀದೇವಿಗೆ ಪ್ರಿಯವಾದ ವಸ್ತು ಇದು. ಬಿಳಿ ಕವಡೆಗಳನ್ನು ಅರಿಶಿನ ಕುಂಕುಮದಲ್ಲಿ ನೆನೆಸಿ, ಅದನ್ನು ಒಣಗಿಸಿ. ಬಿಳಿ ಕವಡೆ ಹಳದಿ ಬಣ್ಣಕ್ಕೆ ಬದಲಾದ ನಂತರ ಅದನ್ನು ಕೆಂಪು ಬಟ್ಟೆಗೆ ಇದನ್ನು ಕಟ್ಟಿ, ನಿಮ್ಮ ಮನೆಯ ಕಮಾನಿನಲ್ಲಿ ಇಡಿ. ಇದರಿಂದಾಗಿ ಮನೆಗೆ ಹಣ ಬರುವುದು ಜಾಸ್ತಿಯಾಗುತ್ತದೆ. ಇದನ್ನು ಓದಿ..Horoscope: ಅನುಮಾನ ಪಡಬೇಡಿ, ಈ ಮೂರು ರಾಶಿಗಳು ಇರುವ ಕೆಲಸಗಳನ್ನು ಆರಂಭಿಸಿ- ಯಶಸ್ಸು ಖಚಿತ, ಹಣದ ಸುರಿಮಳೆಯಾಗಲಿದೆ.

ನಾಣ್ಯಗಳು :- ನಿಮ್ಮ ಮನೆಯಲ್ಲಿ ಹಣ ಇಡುವ ಸ್ಥಳದಲ್ಲಿ ಅಥವಾ ನಿಮ್ಮ ಪರ್ಸ್ ನಲ್ಲಿ 3 ನಾಣ್ಯಗಳನ್ನು ಇಟ್ಟುಕೊಳ್ಳಬೇಕು. ಇದರಿಂದ ಸಂಪತ್ತು ಹೆಚ್ಚಾಗುತ್ತದೆ. ಅಥವಾ ನಾಣ್ಯವನ್ನು ಕೆಂಪು ದಾರದಲ್ಲಿ ಕಟ್ಟಿ ದೇವರ ಮನೆಯಲ್ಲಿ ಇಡಿ. ಇದರಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ. ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.

ಮೀನಿನ ಮೂರ್ತಿ :- ನಿಮ್ಮ ಮನೆಯಲ್ಲಿ ಖುಷಿ, ಸಮೃದ್ಧಿ, ನೆಮ್ಮದಿ, ಶಾಂತಿ, ಆರೋಗ್ಯ ಇದೆಲ್ಲವೂ ಇರಬೇಕು ಎಂದರೆ ಮೀನಿನ ಬೆಳ್ಳಿ ಮೂರ್ತಿಯನ್ನು ನಿಮ್ಮ ಮನೆಯಲ್ಲಿ ಇಡಬಹುದು. ಇದರಿಂದ ಮನೆಯ ಸಮೃದ್ಧಿ ಹೆಚ್ಚಾಗುತ್ತದೆ. ನಿಮ್ಮ ಮನೆಯ ಗೋಡೆಯ ಮೇಲೆ ಮೀನಿನ ಫೋಟೋ ಹಾಕಬಹುದು.. ಇದನ್ನು ಓದಿ..Jio Phone: ಇಂಟರ್ನೆಟ್ ಬಳಸುವವರಿಗೆ ಹೊಸ ಫೋನ್ ಬಿಡುಗಡೆ ಮಾಡಿ ಜಿಯೋ- ಕಡಿಮೆ ಬೆಲೆಗೆ ಎಷ್ಟೆಲ್ಲಾ ವೈಶಿಷ್ಟತೆ, ಅದರಲ್ಲೂ ಹಳ್ಳಿಯವರಿಗೆ ಮಸ್ತ್.

Comments are closed.